Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಗೇಮ್ಸ್: ಸ್ಟೀಪಲ್ ಚೇಸ್‌ನಲ್ಲಿ 2 ಪದಕ: ಬೆಳ್ಳಿ ಪದಕ ಗೆದ್ದ ಪಾರೂಲ್ ಚೌಧರಿ, ಪ್ರೀತಿ ಕೊರಳಿಗೆ ಕಂಚಿನ ಪದಕ

ಏಷ್ಯನ್ ಗೇಮ್ಸ್‌ನ ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಭಾರತದ ಪಾರುಲ್ ಚೌಧರಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಬಹ್ರೇನ್ ಅಥ್ಲೀಟ್‌ಗಳಿಂದ ತೀವ್ರ ಪ್ರತಿಸ್ಪರ್ಧೆ ಎದುರಿಸಿದ ಭಾರತ ಇದೇ ವಿಭಾಗದಲ್ಲಿ ಕಂಚಿನ ಪದಕವನ್ನು ಕೂಡ ತನ್ನದಾಗಿಸಿಕೊಂಡಿದೆ. ಇದೇ ಸ್ಪರ್ಧೆಯಲ್ಲಿ ಭಾರತ ಅಥ್ಲೀಟ್ ಪ್ರೀತಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್ ಚೌಧರಿ 9.27.63 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರೆ, ವಿಶ್ವ ಚಾಂಪಿಯನ್ ಯಾವಿ ವಿನ್‌ಫ್ರೈಡ್ ಏಷ್ಯನ್ ಗೇಮ್ಸ್ ದಾಖಲೆಯನ್ನು ಮುರಿದು 9:18.26 ಸೆಕೆಂಡ್‌ಗಳಲ್ಲಿ ಗುರಿತಲುಪಿ ಚಿನ್ನದ ಪದಕ ಗೆದ್ದುಕೊಂಡರು.

Asian games: Indias Parul Chaudhary wins silver medal in womens 3000m steeplechase, Priti wins bronze

ಭಾರತದ ಅಥ್ಲೀಟ್ ಪ್ರೀತಿ ಮತ್ತೊಬ್ಬ ಬಹ್ರೇನಿಯನ್‌ನ ಅಥ್ಲೀಟ್ ಟೈಗೆಸ್ಟ್ ಗೆಟೆಂಟ್ ಅವರನ್ನು 9:43.32 ಸೆಕೆಂಡ್‌ಗಳಲ್ಲಿ ಹಿಂದಿಕ್ಕುವ ಮೂಲಕ ಕಂಚಕ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇದು ಪ್ರೀತಿ ಅವರ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವಾಗಿದೆ. ಯವಿ ಮತ್ತು ಪಾರುಲ್ ತಮ್ಮ ಪದಕಗಳನ್ನು ಖಚಿತಪಡಿಸಿದ ನಂತರ ಕಂಚಿನ ಪದಕಕ್ಕಾಗಿ ಪೃಥಿ ಮತ್ತು ಟೈಗೆಸ್ಟ್ ಮಧ್ಯೆ ತೀವ್ರ ಪೈಪೋಟಿ ಎದುರಾಗಿತ್ತು. 3-4 ಸ್ಥಾನಗಳಿಗೆ ನಿಕಟ ಹೋರಾಟ ಉಂಟಾಗಿತ್ತು. ಅರ್ಧ ಸೆಕೆಂಡ್‌ಗಿಂಯ ಕಡಿಮೆ ಅವಧಿಯಲ್ಲಿ ಪ್ರೀತಿ ಮುನ್ನಡೆ ಸಾಧಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.

ಇನ್ನು ಏಷ್ಯನ್ ಗೇಮ್ಸ್‌ನ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಭಾರತವು ಪ್ರಾಬಲ್ಯ ಸಾಧಿಸಿದೆ. ಅಕ್ಟೋಬರ್ 1 ರಂದು ಭಾನುವಾರ ನಡೆದ ಪುರುಷರ ಫೈನಲ್‌ನಲ್ಲಿ ಅವಿನಾಶ್ ಸೇಬಲ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಇದೀಗ ಮಹಿಳೆಯ ವಿಭಾಗದಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕಗಳು ಭಾರತದ ಪಾಲಾಗಿದೆ.

ಪಾರುಲ್ ಚೌಧರಿ ಅವರು 2023 ರಲ್ಲಿ ಅದ್ಭುತ ಋತುವನ್ನು ಹೊಂದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ಗಳ ಫೈನಲ್‌ಗೆ ಪ್ರವೇಶಿಸಿದ್ದ ಅವರು ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನವನ್ನು ಗೆದ್ದುಕೊಂಡಿದ್ದಾರೆ ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ.

Story first published: Monday, October 2, 2023, 18:57 [IST]
Other articles published on Oct 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+