Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆಳ್ಳಿ ಪದಕದ ಬಳಿಕ ಬಂಗಾರದ ಪದಕಕ್ಕೆ ಮುತ್ತಿಕ್ಕಿದ ಪಾರೂಲ್ ಚೌಧರಿ: 2ನೇ ಪದಕ ಗೆದ್ದ ಭಾರತೀಯ ಅಥ್ಲೀಟ್

ಭಾರತದ ಅಥ್ಲೀಟ್ ಪಾರೂಲ್ ಚೌಧರಿ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. 2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾರೂಲ್ ಚೌಧರಿ ಎರಡನೇ ಪದಕವನ್ನು ಗೆದ್ದುಕೊಂಡಿದ್ದು ಈ ಬಾರಿ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರ 5000 ಮೀಟರ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಪಾರೂಲ್ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.

ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಪದಕ ಗೆದ್ದು 5000 ಮೀ ಸ್ಪರ್ಧೆಗೆ ಕಣಕ್ಕಿಳಿದ ಪಾರುಲ್ ನಿಧಾನವಾಗಿ ಆರಂಭವನ್ನು ಪಡೆದುಕೊಂಡರು. 10-ಲ್ಯಾಪ್ ಓಟದ ಬಹುಪಾಲು ಭಾಗದಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿಯೇ ಇದ್ದರು. ಆದರೆ ಅಂತಿಮ ಹಂತದಲ್ಲಿ ಅದ್ಭುತವಾಗಿ ತಮ್ಮ ವೇಗವನ್ನು ಅವರು ಹೆಚ್ಚಿಸಿಕೊಂಡು ಆರಂಭದಿಂದಲೂ ಮೊದಲು ಸ್ಥಾನದಲ್ಲಿ ಓಡುತ್ತಿದ್ದ ಜಪಾನ್‌ನ ರಿರಿಕಾ ಹಿರೋನಾಕಾ ಅವರ ವೇಗವನ್ನು ಸರಿಗಟ್ಟಿದರು.

Asian Games: Indias Parul Chaudhary won 2nd medal, clinch gold medal in womens 5000m race

ಪಾರುಲ್ ಸ್ಪರ್ಧೆಯಲ್ಲಿ 50 ಮೀಟರ್‌ಗಳು ಇರುವವರೆಗೂ ಜಪಾನ್‌ನ ರಿರಿಕಾ ಅವರ ಹಿಂದೆಯೇ ಉಳಿದುಕೊಂಡಿದ್ದರು. ಆದರೆ ರೇಸ್‌ನ ಅಂತಿಮ ಹಂತದಲ್ಲಿ ರಿರಿಕಾ ಅವರನ್ನು ಪಾರುಲ್ ರೋಚಕವಾಗಿ ಹಿಂದಿಕ್ಕುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತೀಯ ಓಟಗಾರ್ತಿ ದೈಹಿಕ ಸಾಮರ್ಥ್ಯದ ಜೊತೆಗೆ ಅದ್ಭುತವಾದ ರಣತಂತ್ರದ ಮೂಲಕ ಗೆಲುವು ಸಾಧಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

ಇನ್ನು ಇದಕ್ಕೂ ಮುನ್ನ ಸೋಮವಾರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್ ಚೌಧರಿ 9.27.63 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದುಕೊಂಡಿದ್ದರು. ಈ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಯಾವಿ ವಿನ್‌ಫ್ರೈಡ್ ಏಷ್ಯನ್ ಗೇಮ್ಸ್ ದಾಖಲೆಯನ್ನು ಮುರಿದು 9:18.26 ಸೆಕೆಂಡ್‌ಗಳಲ್ಲಿ ಗುರಿತಲುಪಿ ಚಿನ್ನದ ಪದಕ ಗೆದ್ದುಕೊಂಡಿದ್ದರು.

ಪಾರುಲ್ ಚೌಧರಿ ಅವರು 2023 ರಲ್ಲಿ ಅದ್ಭುತ ಋತುವನ್ನು ಹೊಂದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ಗಳ ಫೈನಲ್‌ಗೆ ಪ್ರವೇಶಿಸಿದ್ದ ಅವರು ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನವನ್ನು ಗೆದ್ದುಕೊಂಡಿದ್ದಾರೆ ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ.

Story first published: Tuesday, October 3, 2023, 18:41 [IST]
Other articles published on Oct 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+