For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್: ಶೂಟಿಂಗ್‌ನಲ್ಲಿ ಪ್ರಪ್ರಥಮ ಚಿನ್ನದ ಪದಕ ಗೆದ್ದ ಜಸ್ಪಾಲ್ ರಾಣಾ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಯಾವುದೇ ಕ್ರೀಡಾಕೂಟದಲ್ಲಿಯೂ ಚಿನ್ನದ ಪದಕವನ್ನು ನಿರೀಕ್ಷಿಸಬಹುದಾದ ಕ್ರೀಡೆಯಲ್ಲಿ ಶೂಟಿಂಗ್ ಕೂಡ ಒಂದು. ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅನೇಕ ಪ್ರತಿಭೆಗಳಿದ್ದಾರೆ. ಒಲಿಂಪಿಕ್ಸ್‌ನಲ್ಲಿಯೂ ಭಾರತ ಪ್ರಪ್ರಥಮ ವೈಯಕ್ತಿಕ ಚಿನ್ನದ ಪದಕ ಗೆದ್ದಿರುವುದು ಇದೇ ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನಕ್ಕೆ ಗುರಿಯಿಡುವ ಮೂಲಕ ಈ ಸಾಧನೆ ಮಾಡಿದ್ದರು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೂಟಿಂಗ್‌ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಭರವಸೆ ಮೂಡಿಸಿದ ಕ್ರೀಡಾಪಟು ಜಸ್ಪಾಲ್ ರಾಣಾ.

ಉತ್ತರಾಖಂಡ್ ಮೂಲದ ಜಸ್ಪಾಲ್ ರಾಣಾ ಶೂಟಿಂಗ್‌ನಲ್ಲಿ ಭಾರತದ ಪರವಾಗಿ ವಿಶೇಷ ಸಾಧನೆ ಮಾಡುವ ಮೂಲಕ ಅದೆಷ್ಟೋ ಪ್ರತಿಭೆಗಳಿಗೆ ಸ್ಪೂರ್ತಿಯಾದರು. 1994ರ ಹಿರೋಶೀಮಾ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪರವಾಗಿ ಈ ವಿಶೇಷ ಸಾಧನೆ ಮಾಡಿದ್ದಾರೆ ಜಸ್ಪಾಲ್ ರಾಣಾ. 25 ಮೀ. ಸೆಂಟರ್ ಫೈರ್ ಪಿಸ್ತೂಲ್ ಕೆಟಗರಿಯಲ್ಲಿ ಸ್ಪರ್ಧಿಸುತ್ತಿದ್ದ ರಾನಾ ಹಲವು ಪದಕಗಳನ್ನು ಭಾರತದ ಪರವಾಗಿ ಗೆದ್ದಿದ್ದಾರೆ.

Asian Games: Jaspal Rana Indian shooter who made history by winning 1st gold medal in Shooting

1994ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ರಾನಾ ಬಳಿಕ 2006ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ವನಲ್ಲಿಯೂ ಚಿನ್ನವನ್ನು ಕೊರಳಿಗೇರಿಸಿಕೊಂಡಿದ್ದರು. ಸದ್ಯ ಡೆಹ್ರಾಡೂನ್‌ನಲ್ಲಿ ಕೋಚ್ ಆಗಿ ಯುವ ಪ್ರತಿಭೆಗಳಿಗ ಮಾರ್ಗದರ್ಶನ ನೀಡುತ್ತಿದ್ದಾರೆ ಜಸ್ಪಾಲ್ ರಾಣಾ.

ಜಸ್ಪಾಲ್ ರಾಣಾ ಮೊದಲ ಬಾರಿಗೆ ಶೂಟಿಂಗ್‌ನಲ್ಲಿ ಸ್ಪರ್ಧಿಸಿದ್ದು ತಮ್ಮ 12 ನೇ ವಯಸ್ಸಿನಲ್ಲಿ. 1988ರಲ್ಲಿ ನಡೆದ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಅವರು ಕಾಣಿಸಿಕೊಂಡಿದ್ದರು. ಅದಿ ಅಹಮದಾಬಾದ್‌ನಲ್ಲಿ ನಡೆದ 31 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆಗಿತ್ತು. ಅಲ್ಲಿ ಬೆಳ್ಳಿ ಪದಕವನ್ನು ಜಸ್ಪಾಲ್ ಗೆದ್ದಿದ್ದರು. ನಂತರ ಅವರು ಗಮನ ಸೆಳೆದಿ್ದು ಆರು ವರ್ಷಗಳ ಬಳಿಕ 46 ನೇ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆಲ್ಲುವ ಮೂಲಕ. ನಂತರ ಜಸ್ಪಾಲ್ ಹಿಂತಿರುಗಿ ನೋಡಲಿಲ್ಲ.

ಜಸ್ಪಾಲ್ ರಾಣಾ ಎರಡು ಬಾರಿ ಸೆಂಟರ್ ಫೈರ್ ಪಿಸ್ತೂಲ್ ಈವೆಂಟ್‌ನಲ್ಲಿ 590 ಅಂಕಗಳ ವಿಶ್ವದಾಖಲೆಯ ಸ್ಕೋರ್ ಅನ್ನು ಸರಿಗಟ್ಟಿದ್ದಾರೆ. 1995 ರಲ್ಲಿ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದ ಅವರು ಬಳಿಕ 1997 ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿಯೂ ಈ ಸಾಧನೆ ಪುನರಾವರ್ತಿಸಿದ್ದರು.

Story first published: Friday, July 28, 2023, 21:41 [IST]
Other articles published on Jul 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+