For Quick Alerts
ALLOW NOTIFICATIONS  
For Daily Alerts

ಏಷ್ಯಾಡ್ 2023: 72 ವರ್ಷಗಳ ಪದಕದ ಬರ ನೀಗಿಸಿದ ಕಿರಣ್ ಬಾಲಿಯಾನ್

24 ವರ್ಷದ ಕಿರಣ್ ಬಲಿಯಾನ್ ಸೆಪ್ಟೆಂಬರ್ 29 ಶುಕ್ರವಾರದಂದು ಹ್ಯಾಂಗ್‌ಝೌನಲ್ಲಿ ಇತಿಹಾಸವನ್ನು ಬರೆದಿದ್ದಾರೆ. ಮಹಿಳೆಯರ ಶಾಟ್‌ಪುಟ್‌ನಲ್ಲಿ ಕಿರಣ್ ಕಂಚಿನ ಪದಕವನ್ನು ಗೆದ್ದುಕೊಂಡಿದ್ದು ಈ ಮೂಲಕ ಏಷ್ಯಾದ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ 72 ವರ್ಷಗಳ ಸುದೀರ್ಘ ಅವಧಿಯ ಬಳಿಕ ಈ ವಿಭಾಗದಲ್ಲಿ ಭಾರತ ಪದಕವನ್ನು ಗೆಲ್ಲಲು ಕಾರಣವಾದರು.

ಕಿರಣ್ ಬಲಿಯಾನ್ ತನ್ನ ವೃತ್ತಿಜೀವನದ ಮೊದಲ ಪ್ರಮುಖ ಪದಕವನ್ನು ಕೊರಳಿಗೇರಿಸಿಕೊಂಡ ಕಿರಣ್ 17.36 ಮೀ ದೂರಕ್ಕೆ ಎಸೆಯುವ ಮೂಲಕ ತಮ್ಮ ಅತ್ಯುತ್ತಮ ಪ್ರಯತ್ನದೊಂದಿಗೆ ಕಂಚಿನ ಪದಕವನ್ನು ಗೆದ್ದಿದ್ದಾರೆ. ಚೀನಾದ ಒಲಿಂಪಿಕ್ ಚಿನ್ನದ ಪದಕ ವಿಜೇತ ಲಿಜಿಯಾವೊ ಗಾಂಗ್ ಏಷ್ಯನ್ ಗೇಮ್ಸ್‌ನಲ್ಲಿ ಸತತ 3 ಬಾರಿ 19.58 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಚಿನ್ನದ ಪದಕ ಗೆದ್ದರೆ ಚೀನಾದ ಜಿಯಾಯುವಾನ್ ಸಾಂಗ್ 18.92 ಮೀಟರ್ ಎಸೆದು ಬೆಳ್ಳಿ ಗೆದ್ದರು. ನಂತರದ ಸ್ಥಾನವನ್ನು ಭಾರತದ ಕಿರಣ್ ಪಡೆದುಕೊಂಡಿದ್ದಾರೆ.

Asian Games: Kiran Baliyan won Bronze medal, Ends India’s 72-Year Wait for Women’s Shot Put Medal

ಕಿರಣ್ ಅವರ ಅತ್ಯುತ್ತಮ ಎಸೆತವು ಚೀನಾದ ಅಗ್ರ ಎರಡು ತಾರೆಗಳಿಗಿಂತ ಹಿಂದೆ ಉಳಿದುಕೊಂಡಿದ್ದರೂ ಅವರು ನಂತರದ ಸ್ಪರ್ಧಿಗಳಿಗಿಂತ ಸಾಕಷ್ಟು ಅಂತರನ್ನು ಹೊಂದಿದ್ದರು. ತೈವಾನ್‌ನ ಚೆನ್-ಕ್ಸಿನ್ ಜಿಯಾನ್ 16.61 ಮೀಟರ್ ಎಸೆದು ನಾಲ್ಕನೇ ಸ್ಥಾನ ಗಳಿಸಿದರೆ, ಭಾರತದ ಎರಡನೇ ಸ್ಪರ್ಧಿ ಮನ್‌ಪ್ರೀತ್ ಕೌರ್ 16.25 ಮೀಟರ್ ದೂರಕ್ಕೆ ಎಸೆದಿದ್ದಾರೆ.

ಇನ್ನು ಮಹಿಳೆಯರ ಶಾಟ್‌ಪುಟ್‌ನಲ್ಲಿ ಭಾರತ ಕೊನೆಯ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಪದಕವನ್ನು ಗೆದ್ದುಕೊಂಡಿದ್ದು ಬರೊಬ್ಬರಿ 72 ವರ್ಷಗಳ ಹಿಂದೆ. ಹೊಸದಿಲ್ಲಿಯಲ್ಲಿ ನಡೆದ ಪ್ರಪ್ರಥಮ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಬಾರ್ಬರಾ ವೆಬ್‌ಸ್ಟರ್ ಭಾರತದ ಪರವಾಗಿ ಕಂಚಿನ ಪದಕವನ್ನು ಗೆದ್ದಿದ್ದರು.

ಇನ್ನು ಕಿರಣ್ ಬಾಲಿಯಾನ್ ಅವರ ಇಂದಿನ ಕಂಚಿನ ಪದಕ ವಿಜೇತ ಎಸೆತ 17.36 ಮೀ ಅವರ ವೃತ್ತಿಜೀವನದ ಎರಡನೇ ಅತ್ಯುತ್ತಮ ಥ್ರೋ ಎನಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ ಚಂಡೀಗಢದಲ್ಲಿ ನಡೆದ ರಾಷ್ಟ್ರೀಯ ಕೂಟದಲ್ಲಿ 17.92 ಮೀ ದೂರಕ್ಕೆ ಎಸೆದಿರುವುದು ಅವೆರ ಈವರೆಗಿನ ಅತ್ಯುತ್ತಮ ಎಸೆತವಾಗಿದೆ.

ಇನ್ನು ಮತ್ತೊಂದೆಡೆ ಶುಕ್ರವಾರ ನಡೆದ 50 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಜೋರ್ಡಾನ್‌ನ ಹನಾನ್ ನಾಸರ್ ಅವರ ವಿರುದ್ಧ ಅದ್ಭುತ ಜಯ ಸಾಧಿಸುವ ಮೂಲಕ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತಕ್ಕೆ ಮೊದಲ ಬಾಕ್ಸಿಂಗ್ ಪದಕವನ್ನು ಖಚಿತಪಡಿಸಿದ್ದಾರೆ. ಈವೆಂಟ್‌ನ ಸೆಮಿಫೈನಲ್‌ಗೆ ತಲುಪಲು ಆರ್‌ಎಸ್‌ಸಿ (ರೆಫರಿ ಸ್ಟಾಪ್ಸ್ ಕಾಂಟೆಸ್ಟ್) ಗೆಲುವನ್ನು ಸಾಧಿಸಿ ಎದುರಾಳಿಯನ್ನು ಮಣಿಸಿದರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ಜರೀನ್ ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನಕ್ಕೆ ಮುಂದಾಗಿದ್ದು ಮೂರು ನಿಮಿಷಗಳ ಸುತ್ತಿನಲ್ಲಿ 53 ಸೆಕೆಂಡುಗಳು ಉಳಿದಿರುವಾಗಲೇ ಮೊದಲ ಸುತ್ತಿನಲ್ಲಿಯೇ ಗೆಲುವು ದಾಖಲಿಸಿದರು. ಭಾರತದ ಸ್ಟಾರ್ ಬಾಕ್ಸರ್ ದಾಳಿಯನ್ನು ಎದುರಿಸಲು ಕಷ್ಟು ಪಡುತ್ತಿದ್ದ ನಾಸರ್ ಸುಲಭ ಸವಾಲಾದರು. ಜರೀನ್ ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನಕ್ಕೆ ಮುಂದಾಗಿದ್ದು ಮೂರು ನಿಮಿಷಗಳ ಸುತ್ತಿನಲ್ಲಿ 53 ಸೆಕೆಂಡುಗಳು ಉಳಿದಿರುವಾಗಲೇ ಮೊದಲ ಸುತ್ತಿನಲ್ಲಿಯೇ ಗೆಲುವು ದಾಖಲಿಸಿದರು.

ಹ್ಯಾಂಗ್‌ಝೌ ಗೇಮ್ಸ್‌ನಲ್ಲಿ ಮೊದಲ ಆರು ದಿನಗಳಲ್ಲಿ ಭಾರತ ಒಟ್ಟು 32 ಪದಕಗಳನ್ನು ಗೆದ್ದಿದೆ. ಈವರೆಗೆ ಭಾರತಕ್ಕೆ ಶೂಟಿಂಗ್‌ನಲ್ಲಿ ಅದ್ಭುತ ಯಶಸ್ಸು ದೊರೆತಿದ್ದು 18 ಪದಕಗಳು ಶೂಟಿಂಗ್‌ನಿಂದಲೇ ಬಂದಿದೆ. ಇನ್ನು ಭಾರತ ಒಟ್ಟು ಎಂಟು ಚಿನ್ನದ ಪದಕಗಳನ್ನು ಈ ಕ್ಷಣದ ವರೆಗೆ ಗೆದ್ದುಕೊಂಡಿದೆ. ಶೂಟಿಂಗ್ ಆರು ಚಿನ್ನದ ಪದಕಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಇದಲ್ಲದೆ ರೋಯಿಂಗ್‌ನಲ್ಲಿ ಭಾರತಕ್ಕೆ ಎಂಟು ಪದಕಗಳು ದೊರೆತಿದ್ದು ಇನ್ನೂ ಕೆಲವು ಕ್ರೀಡೆಗಳು ಭಾರತಕ್ಕೆ ಪದಕಗಳನ್ನು ತಂದುಕೊಡುವ ನಿರೀಕ್ಷೆಯಿದೆ.

Story first published: Friday, September 29, 2023, 21:35 [IST]
Other articles published on Sep 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+