Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತಕ್ಕೆ ಏಷ್ಯನ್ ಚಿನ್ನ ಗೆದ್ದ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ

Asian Games: Neeraj Chopra Wins GOLD Medal in Javelin

ಜಕಾರ್ತಾ, ಆಗಸ್ಟ್ 27: ಭಾರತದ ಪಾಲಿಗೆ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ 9ನೇ ದಿನ ಬಂಗಾರದ ದಿನವಾಗಿದೆ. ಅಥ್ಲೆಟಿಕ್ಸ್ ನಲ್ಲಿ ಭಾರತ ಸಾಲುಸಾಲು ಬೆಳ್ಳಿ ಗೆದ್ದ ಬೆನ್ನಲ್ಲೇ ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಅವರು ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.

ಸೋಮವಾರ (ಆಗಸ್ಟ್ 27) ನಡೆದ ಪುರುಷರ ವಿಭಾಗದ ಜಾವೆಲಿನ್ ಥ್ರೋನಲ್ಲಿ ನೀರಜ್ ದಾಖಲೆಯೊಂದಿಗೆ ಚಿನ್ನ ಬಾಚಿಕೊಂಡರು. ನೀರಜ್ ಸ್ಪರ್ಧೆಯೊಂದರಲ್ಲಿ ಪಾಲ್ಗೊಳ್ಳುತ್ತಿದ್ದರೆ ಅಲ್ಲಿ ಪದಕ ಗ್ಯಾರಂಟಿ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಏಷ್ಯನ್ ಗೇಮ್ಸ್ ಜಾವೆಲಿನ್ ನಲ್ಲಿ ಭಾರತಕ್ಕೆ ಚಿನ್ನ ಗೆದ್ದ ಮೊದಲಿಗ ಹಿರಿಮೆಗೂ ನೀರಜ್ ಪಾತ್ರರಾಗಿದ್ದಾರೆ.

ಏಷ್ಯನ್ ಗೇಮ್ಸ್ ಪುರುಷರ ಜಾವೆಲಿನ್ ಥ್ರೋ ಫೈನಲ್ ನಲ್ಲಿ ನೀರಜ್ 88.03 ಮೀ. ದೂರ ಈಟಿ ಎಸೆದು ಭಾರತ ಚಿನ್ನದ ನಗು ಬೀರುವಂತೆ ಮಾಡಿದರು. ಚೋಪ್ರಾ ತೋರಿದ ಈ ಸಾಧನೆ ರಾಷ್ಟ್ರೀಯ ಮಟ್ಟದಲ್ಲಿ ಹೊಸ ದಾಖಲೆಯಾಗಿದೆಯಲ್ಲದೆ, ನೀರಜ್ ಅವರ ವೈಯಕ್ತಿಕ ಉತ್ತಮ ಸಾಧನೆಯಾಗಿಯೂ ಇದು ಗುರುತಿಸಿಕೊಂಡಿತು.

Story first published: Monday, August 27, 2018, 19:23 [IST]
Other articles published on Aug 27, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+