For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್: ಭಾರತಕ್ಕೆ ಮತ್ತೊಂದು ಪದಕ: ಸೈಲಿಂಗ್‌ನಲ್ಲಿ ಬೆಳ್ಳಿ ಗೆದ್ದ ನೇಹಾ ಠಾಕೂರ್

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮತ್ತೊಂದು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದೆ. ಭಾರತದ ನೇಹಾ ಠಾಕೂರ್ ವನಿತೆಯರ ಡಿಂಗಿ ILCA4 ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಇದು ಸೈಲಿಂಗ್‌ನಲ್ಲಿ ಭಾರತದ ಮೊದಲ ಪದಕವಾಗಿದ್ದು ಹ್ಯಾಂಗ್‌ಝೌ ಗೇಮ್ಸ್‌ನಲ್ಲಿ ಒಟ್ಟಾರೆಯಾಗಿ ಭಾರತದ 12ನೇ ಪದಕವಾಗಿದೆ.

ಭೋಪಾಲ್‌ನ ನ್ಯಾಷನಲ್ ಸೈಲಿಂಗ್ ಸ್ಕೂಲ್‌ನಲ್ಲಿ ತರಬೇತಿ ಪಡೆದು ಭರವಸೆ ಮೂಡಿಸಿರುವ ನೇಹಾ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಅವರು ಗಮನಾರ್ಹವಾದ ಒಟ್ಟು 32 ಅಂಕಗಳನ್ನು ಪಡೆದುಕೊಂಡಿದ್ದು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ದೇಶಕ್ಕೆ ಹೆಮ್ಮೆಯ ಗರಿಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Asian Games: Neha Thakur won Silver medal in the Girl’s Dinghy ILCA 4 category

ನೆಟ್ ಸ್ಕೋರ್ 27 ಪಡೆದುಕೊಂಡ ನೇಹಾ ಎರಡನೇ ಸ್ಥಾನವನ್ನು ಪಡೆದುಕೊಂಡರು. ಥಾಯ್ಲೆಂಡ್‌ನ ನೊಪಾಸ್ಸೋರ್ನ್ ಖುನ್‌ಬೂಂಜಾನ್‌ ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇನ್ನು ನೇಹಾ ಅವರಿಗಿಂತ ಕೇವಲ ಒಂದು ಅಂಕ ಕಡಿಮೆ ಗಳಿಸಿದ ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

ಸೂಲಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಯ ನೆಟ್ ಸ್ಕೋರ್ ಅನ್ನು ನಿರ್ಧರಿಸುವುದು ವಿಜೇತರನ್ನು ಆಯ್ಕೆ ಮಾಡುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸೈಲರ್ ಭಾಗವಹಿಸಿದ ಎಲ್ಲಾ ರೇಸ್‌ಗಳನ್ನು ಇದು ಗಣನೆಗೆ ತೆಗೆದುಕೊಳ್ಳುತ್ತದೆ. ಅದರಲ್ಲಿ ಸಾಧಿಸಿದ ಒಟ್ಟು ಅಂಕಗಳಿಂದ ಅವರ ಕನಿಷ್ಠ ಸ್ಕೋರ್ ಅನ್ನು ಕಳೆಯುತ್ತದೆ. ಇದು ಅಂತಿಮ ನೆಟ್ ಸ್ಕೋರ್ ನೀಡುತ್ತದೆ ಮತ್ತು ಕಡಿಮೆ ನೆಟ್ ಸ್ಕೋರ್ ಹೊಂದಿರುವ ಸೈಲರ್‌ನನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಮಹಿಳೆಯರ ಡಿಂಗಿ ILCA-4 ವಿಭಾಗದ ಸ್ಪರ್ಧೆ ಅತ್ಯಂತ ಕಠಿಣವಾಗಿತ್ತು. ಇಲ್ಲಿ 11 ಕಷ್ಟಕರವಾದ ರೇಸ್‌ಗಳನ್ನು ಒಳಗೊಂಡಿತ್ತು. ತೀವ್ರ ಪೈಪೋಟಿಯ ನಡುವೆಯೂ ನೇಹಾ ಪ್ರಾಬಲ್ಯ ಮೆರೆದಿದ್ದು ಒಟ್ಟಾರೆಯಾಗಿ 32 ಅಂಕಗಳೊಂದಿಗೆ ಮುಗಿಸಿದರು. ಹಾಗಿದ್ದರೂ ಈ ಪ್ರಯಾಣ ಸುಗಮವಾಗಿರಲಿಲ್ಲ. ಅದರಲ್ಲೂ ಐದನೇ ರೇಸ್‌ನಲ್ಲಿ ಆಕೆಯ ಪ್ರದರ್ಶನವು ಅವರ ಎಂದಿನ ಗುಣಮಟ್ಟವನ್ನು ಹೊಂದಿರಲಿಲ್ಲ, ಕೇವಲ ಐದು ಅಂಕಗಳನ್ನು ಗಳಿಸಲು ಸಾಧ್ಯವಾಗಿತ್ತು. ಹೀಗಾಗಿ ಸ್ಕೋರ್ ಅನ್ನು ಅವರ ಕಳಪೆ ಸ್ಕೋರ್ ಎಂದು ಗುರುತಿಸಲಾಗಿ ಒಟ್ಟು ಅಂಕದಿಂದ ಅದನ್ನು ಕಳೆಯಲಾಯಿತು. ಹೀಗಾಗಿ ನೆಟ್ ಸ್ಕೋರ್ 27 ಆಗಿತ್ತು. ಈ ಮೂಲಕ ಭಾರತದ ಪ್ರತಿಭಾನ್ವಿತ ಆಟಗಾರ್ತಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ನೇಹಾ ಠಾಕೂರ್ ಅವರ ಈ ಗೆಲುವಿನ ನಂತರ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಟ್ವಿಟ್ಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಸೈಲಿಂಗ್ ತಂಡಕ್ಕೆ ಇದು ಉತ್ತಮ ಆರಂಭ ಎಂದು ಬಣ್ಣಿಸಿದ್ದಾರೆ.

Story first published: Tuesday, September 26, 2023, 14:06 [IST]
Other articles published on Sep 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+