19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಚೀನಾದ ಹ್ಯಾಂಗ್‌ಝೌನಲ್ಲಿ ಅಧಿಕೃತವಾಗಿ ಚಾಲನೆ ದೊರೆತಿದೆ. ಒಲಿಂಪಿಕ್ಸ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂನಲ್ಲಿ ಅದ್ದೂರಿ ಕಾರ್ಯಕ್ರಮ ನೆರವೇರಿದೆ. ಈ ಸ್ಟೇಡಿಯಂಅನ್ನು ಬಿಗ್ ಲೋಟಸ್ ಎಂದು ಕೂಡ ಕರೆಯಲಾಗುತ್ತಿದ್ದು 2018ರಲ್ಲಿ ಫುಟ್ಬಾಲ್ ಮೈದಾನವಾಗಿ ಇದನ್ನು ನಿರ್ಮಿಸಲಾಗಿತ್ತು. 80,000 ಪ್ರೇಕ್ಷಕರ ಸಾಮರ್ಥ್ಯವನನ್ಉ ಈ ಕ್ರೀಡಾಂಗಣ ಹೊಂದಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಲೊವ್ಲಿನಾ ಬೊರ್ಗಹೈನ್ ಮತ್ತು ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಭಾರತದ ಪರ ಧ್ವಜಧಾರಿಗಳಾಗಿದ್ದರು. ಇನ್ನು ಲೊವ್ಲಿನಾ ಟೋಕಿಯೋದಲ್ಲಿ ಕಂಚಿನ ಪದಕ ಗೆದ್ದ ಬಳಿಕ ಈ ವರ್ಷಾರಂಭದಲ್ಲಿ ದೆಹಲಿಯಲ್ಲಿ ನಡೆದ ವಿಶ್ಚಾಂಪಿಯನ್‌ಶಿಪ್‌ನಲ್ಲಿಯೂ ಗೆದ್ದುಬೀಗಿದ್ದರು. ಇನ್ನು ಹರ್ಮನ್‌ಪ್ರೀತ್ ಸಿಂಗ್ ಭಾತದ ಅತ್ಯುತ್ತಮ ಡ್ಡರ್ಯಾಗ್ ಫ್ಲಿಕರ್ ಎನಿಸಿಕೊಂಡಿದ್ದು ಹಾಲಿ ತಂಡ ಚಿನ್ನದ ಪದಕದೊಂದಿಗೆ ಹಿಂದಿರುವ ವಿಶ್ವಾಸ ಮೂಡಿಸಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೂಡ ಅರ್ಹತೆ ಸಂಪಾದಿಸುವ ನಿರೀಕ್ಷೆಯಿದೆ.

481 ಸ್ಪರ್ಧೆಗಳಲ್ಲಿ ಸಾವಿರಾರು ಕ್ರೀಡಾಪಟುಗಳು ಭಾಗಿಯಾಗಲಿದ್ದು ಪದಕಕ್ಕಾಗಿ ತೀವ್ರ ಕಾದಾಟ ನಡೆಯಲಿದೆ. 2022ರಲ್ಲಿ ಆಯೋಜನೆಯಾಗಬೇಕಿದ್ದ ಈ ಕ್ರೀಡಾಕೂಟ ಕೊರೊನಾವೈರಸ್ ಕಾರಣದಿಂದಾಗಿ ಈ ವರ್ಷಕ್ಕೆ ಮುಂದೂಡಿಕೆಯಾಗಿತ್ತು. ಇನ್ನು ಇಂದು ಈ ಕ್ರೀಡಾಕೂಟ ಅಧಿಕೃತವಾಗಿ ಚಾಲನೆಗೊಂಡಿದ್ದರೂ ಕೆಲ ಸ್ಪರ್ಧೆಗಳು ಸೆಪ್ಟೆಂಬರ್ 19ರಿಂದಲೇ ಆರಂಭವಾಗಿದೆ. ಉದ್ಘಾಟನೆಯಾಗಿ 15 ದಿನಗಳ ಕಾಲ ನಡೆಯಲಿರುವ ಈ ಸ್ಪರ್ಧೆ ಅಕ್ಟೋಬರ್ 8 ಭಾನುವಾರದಂದು ಸಮಾರೋಪಗೊಳ್ಳಲಿದೆ. ಯಾವ ರಾಷ್ಟ್ರದ ಕ್ರೀಡಾಪಟುಗಳು ಇಲ್ಲಿ ಮೇಲುಗೈ ಸಾಧಿಸಲಿದ್ದಾರೆ? ಭಾರತದ ಕ್ರೀಡಾಪಟುಗಳು ಎಷ್ಟು ಪದಕ ಗೆಲ್ಲಲಿದ್ದಾರೆ ಎನ್ನುವುದು ಈಗ ಇರುವ ಕುತೂಹಲವಾಗಿದೆ.
ಇನ್ನು ಓ ಏಷ್ಯನ್ ಗೇಮ್ಸ್ ಕ್ರೀಡಾಕೂಟ 9 ಸ್ಪರ್ಧೆಗಳಿಗೆ ಒಲಿಂಪಿಕ್ಸ್‌ಗೆ ಅರ್ಹತಾ ಸುತ್ತು ಕೂಡ ಆಗಿರಲಿದೆ ಎನ್ನುವುದು ಗಮನಾರ್ಹ ಅಂಶ. ಆರ್ಚರಿ, ಆರ್ಟಿಸ್ಟಿಕ್ ಸ್ವಿಮ್ಮಿಂಗ್, ಬಾಕ್ಸಿಂಗ್, ಬ್ರೇಕಿಂಗ್, ಹಾಕಿ, ಮಾಡರ್ನ್ ಪ್ಯಾಂಟೆಥ್ಲಾನ್, ಸೈಲಿಂಗ್, ಟೆನ್ನಿಸ್ ಮತ್ತು ವಾಟರ್ ಪೋಲ್ ಕ್ರೀಡೆಗಳಿಗೆ ಈ ಏಷ್ಯನ್ ಗೇಮ್ಸ್ ಅರ್ಹತಾ ಸುತ್ತು ಕೂಡ ಆಗಿರುವ ಕಾರಣ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
5 ವರ್ಷಗಳ ಹಿಂದೆ ನಡೆದಿದ್ದ ಈ ಹಿಂದಿನ ಏಷ್ಯನ್ ಗೇಮ್ಸ್ ಆವೃತ್ತಿಯಲ್ಲಿ ಭಾರತ ಅದ್ಭುತ ಸಾಧನೆಯನ್ನು ಮಾಡಿ ಗಮನಸೆಳೆದಿತ್ತು. 16 ಚಿನ್ನದ ಪದಕಗಳನ್ನು ಭಾರತ ಗೆದ್ದಿದ್ದು ಒಟ್ಟಾರೆಯಾಗಿ 70 ಪದಕಗಳನ್ನು ತನ್ನದಾಗಿಸಿಕೊಂಡಿತ್ತು. ಇದು ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತ ಪಡೆದುಕೊಂಡ ಗರಿಷ್ಠ ಪದಕಗಳು ಎನ್ನುವುದು ವಿಶೇಷ. ಈ ಬಾರಿ ಆ ದಾಖಲೆಯನ್ನು ಮುರಿದು ಮತ್ತಷ್ಟು ಹೆಚ್ಚಿನ ಪದಕಗಳ ಸಾಧನೆ ಮಾಡುವಂತಾಗಲಿ ಎನ್ನುವುದು ಅಭಿಮಾನಿಗಳ ನಿರೀಕ್ಷೆ. ಇನ್ನು ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಒಲಿಂಪಿಕ್ಸ್‌ನ ಕ್ರೀಡೆ ಅಲ್ಲದ ಕ್ರಿಕೆಟ್ ಕೂಡ ಭಾಗವಾಗಿದೆ ಎನ್ನುವುದು ಗಮನಾರ್ಹ ಅಂಶ.
ಇನ್ನು ಈ ಬಾರಿ ಏಷ್ಯಾಡ್‌ನಲ್ಲಿ ಭಾರತದ 653 ಸ್ಪರ್ಧಿಗಳು ಭಾಗವಹಿಸಲಿದ್ದು ದೊಡ್ಡ ಸಂಖ್ಯೆಯಲ್ಲಿ ಬೆಂಬಲ ಸಿಬ್ಬಂದಿಗಳು ಕೂಡ ಸಾಥ್ ನೀಡಲಿದ್ದಾರೆ. ಕಳೆದ ಬಾರಿಯ ದಾಖಲೆಯನ್ನು ಮುರಿಯಲೇಬೇಕೆನ್ನುವ ಗುರಿಯಿಟ್ಟುಕೊಂಡೇ ಭಾರತದ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್‌ಗೆ ಕಾಲಿಟ್ಟಿದ್ದಾರೆ. ಅಲ್ಲದೆ "ಇಸ್ ಬಾರ್, ಸೌ ಪಾರ್"(ಈ ಬಾರಿ ನೂರಕ್ಕೂ ಅಧಿಕ) ಎನ್ನುವ ಘೋಷಣೆಯೊಂದಿಗೆ ಭಾರರ ಏಷ್ಯನ್ ಗೇ್ಸ್ ಅಭಿಯಾನದಲ್ಲಿ ಭಾಗಿಯಾಗುತ್ತಿದೆ.