For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್: ಧರುಣ್ ಅಯ್ಯಸಾಮಿಗೆ 400 ಮೀ. ಹರ್ಡಲ್ಸ್ ನಲ್ಲಿ ಬೆಳ್ಳಿ

Asian Games: SILVER medal for Dharun Ayyasamy in Mens 400m

ಜಕಾರ್ತಾ, ಆಗಸ್ಟ್ 27: ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಸೇರಿಕೊಂಡಿದೆ. ಧರುಣ್ ಅಯ್ಯಸಾಮಿ ಅವರು ಪುರುಷರ 400 ಮೀ. ಹರ್ಡಲ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ತಂದಿದ್ದಾರೆ. ಭಾರತದ ಪದಕ ಪಟ್ಟಿಯಲ್ಲೀಗ 38 ಪದಕಗಳು ಸೇರಿಕೊಂಡಿದ್ದು, ಭಾರತ 9ನೇ ಸ್ಥಾನದಲ್ಲಿದೆ.

ಸೋಮವಾರ ನಡೆದ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ಪುರುಷರ 400 ಮೀ. ಹರ್ಡಲ್ಸ್ ಫೈನಲ್ ನಲ್ಲಿ ಅಯ್ಯಸಾಮಿ 48.96 ಸೆಕೆಂಟ್ ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಅಥ್ಲೆಟಿಕ್ಸ್ ವಿಭಾಗದಲ್ಲಿ ಲಭಿಸಿದ 5ನೇ ಪದಕವಿದು.

ಆಗಸ್ಟ್ 26ರ ಭಾನುವಾರ ನಡೆದ 18ನೇ ಏಷ್ಯನ್ ಗೇಮ್ಸ್ ನ ಮಹಿಳಾ ವಿಭಾಗದ 100 ಮೀ. ಓಟದಲ್ಲಿ ದ್ಯುತೀ ಚಂದ್ ಬೆಳ್ಳಿ ಪದಕ ಗೆದ್ದಿದ್ದರು. 100 ಮೀ. ಓಟವನ್ನು 11.32 ಸೆಕೆಂಡ್ ಗಳಲ್ಲಿ ಮುಗಿಸಿದ ದುತ್ಯೀ ಕೇವಲ 0.02 ಸೆಕೆಂಡ್ ನಲ್ಲಿ ಬಂಗಾರದಿಂದ ವಂಚಿತರಾಗಿದ್ದರು.

Story first published: Monday, August 27, 2018, 18:03 [IST]
Other articles published on Aug 27, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+