ಏಷ್ಯನ್ ಗೇಮ್ಸ್: ಸುಶೀಲ್ ಕುಮಾರ್ ಕಂಚಿನ ಪದಕದಾಸೆಯೂ ಭಗ್ನ!

ಜಕಾರ್ತಾ, ಆಗಸ್ಟ್ 19: ಒಲಿಂಪಿಕ್ಸ್ ಎರಡು ಬೆಳ್ಳಿ ಪದಕ ಗೆದ್ದಿದ್ದ ರಸ್ಲರ್ ಸುಶೀಲ್ ಕುಮಾರ್ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಸೋತರೂ ಕಂಚಿನ ಪದಕ ದಕ್ಕಿಸಿಕೊಳ್ಳುವುದರಲ್ಲಿದ್ದು. ಆದರೆ ಸುಶೀಲ್ ಅವರ ಪದಕದಾಸೆಗೆ ತಣ್ಣೀರು ಬಿದ್ದಿದೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಪುರುಷರ 74 ಕೆಜಿ ವಿಭಾಗದ ಕುಸ್ತಿಯಲ್ಲಿ ಸುಶೀಲ್ ಬಹ್ರೇನ್ ನ ಆದಮ್ ಬಟಿರೊವ್ ಅವರೆದುರು ಮೊದಲ ಪಂದ್ಯದಲ್ಲೇ ಸೋತಿದ್ದರು. ಆದರೂ ಲೆಕ್ಕಾಚಾರದ ಆಧಾರದಲ್ಲಿ ಸುಶೀಲ್ ಕಂಚಿನ ಪದಕ ಗೆಲ್ಲುವುದರಲ್ಲಿದ್ದರು. ಆದರೆ ಸುಶೀಲ್ ನ ಆಸೆ ನಿರಾಸೆಯಾಗಿದೆ.
ಮೊದಲ ಪಂದ್ಯದಲ್ಲಿ ಸುಶೀಲ್ ಸೋಲಿಸಿದ ಬಟಿರೊವ್ ಒಂದು ವೇಳೆ ಫೈನಲ್ ಪ್ರವೇಶಿಸಿದ್ದರೆ, ಅರ್ಹತಾ ಪಂದ್ಯದಲ್ಲಿ ಸೋತಿದ್ದ ಸುಶೀಲ್ ಗೆ ಕಂಚಿನ ಪದಕ ಲಭಿಸುವ ಸಾಧ್ಯತೆಯಿತ್ತು. ಆದರೆ ಬಟಿರೊವ್ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ನ ಫುಜಿನಾಮಾ ಯುಯಿಹಿ ಅವರೆದುರು 2-8ರಿಂದ ಸೋಲನುಭವಿಸಿದರು.
ಪುರುಷರ ರಸ್ಲಿಂಗ್ ನಲ್ಲಿ ಬಜರಂಗ್ ಪೂನಿಯಾ ಅವರು ಭಾರತ ಪರ ಪದಕದಾಸೆ ಮೂಡಿಸಿದ್ದಾರೆ. ಬಜರಂಗ್ ರಸ್ಲಿಂಗ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದು, ಇನ್ನೊಬ್ಬ ರಸ್ಲರ್ ಪವನ್ ಕುಮಾರ್ ಇಂದು (ಆಗಸ್ಟ್ 19) ಕಂಚಿಗಾಗಿ ಸೆಣಸಾಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications