For Quick Alerts
ALLOW NOTIFICATIONS  
For Daily Alerts

ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್; ಚಿನ್ನ ಗೆದ್ದು ಹೊಸ ಇತಿಹಾಸ ಬರೆದ ಜ್ಯೋತಿ ಯರ್ರಾಜಿ

ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ನಡೆಯುತ್ತಿರುವ 2024ರ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ರಿಲಯನ್ಸ್ ಫೌಂಡೇಷನ್‌ನ ಜ್ಯೋತಿ ಯರ್ರಾಜಿ ಅವರು ಭಾರತಕ್ಕೆ ಮೊದಲ ಪದಕವನ್ನು ಗೆದ್ದು ಕೊಟ್ಟಿದ್ದಾರೆ.

60 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ 8.12 ಸೆಕೆಂಡುಗಳ ಹೊಸ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಜ್ಯೋತಿ ಯರ್ರಾಜಿಗೆ ಈ ಪ್ರದರ್ಶನವು 2024ರ ಋತುವಿಗೆ ಅತ್ಯುತ್ತಮ ಆರಂಭವಾಗಿದೆ. ಕಳೆದ ವರ್ಷ ಕಝಕಿಸ್ತಾನ್‌ನಲ್ಲಿ ನಡೆದ ಆವೃತ್ತಿಯಲ್ಲಿ ತಾವೇ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಗೊಳಿಸಿದರು. ಅಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದರು.

Asian Indoor Athletics Championship; Jyothi Yarraji Create New History With Won Gold Medal

ಈ ಸಾಧನೆ ಕುರಿತು ಮಾತನಾಡಿದ ಜ್ಯೋತಿ ಯರ್ರಾಜಿ, "ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಉತ್ತಮ ಅನುಭವ ನೀಡಿದೆ. ಇದು ಋತುವಿನ ಆರಂಭ ಮತ್ತು ಋತುವಿನ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿದೆ. ಆದ್ದರಿಂದ ನಾನು ಈ ಪ್ರದರ್ಶನದಿಂದ ತುಂಬ ಸಂತೋಷಗೊಂಡಿದ್ದೇನೆ".

"ಈ ಚಿನ್ನದ ಪದಕ ವಿಶೇಷವಾಗಿದೆ. ಏಕೆಂದರೆ ಕಳೆದ ವಾರ ತೊಡೆಯ ಹಿಂಭಾಗದ ಮಾಂಸಖಂಡದ ನೋವಿನಿಂದ ಬಳಲುತ್ತಿದ್ದರಿಂದ ಆ ಬಗ್ಗೆ ನಾನು ಸ್ವಲ್ಪ ಚಿಂತೆಗೊಳಗಾಗಿದ್ದೆ. ಆದರೆ ರಿಲಯನ್ಸ್ ಫೌಂಡೇಷನ್‌ನ ನನ್ನ ತಂಡ ಮತ್ತು ಫಿಸಿಯೋಥೆರಪಿಸ್ಟ್‌ಗಳು ನನ್ನನ್ನು ಸ್ಪರ್ಧೆಗೆ ಸಿದ್ಧಗೊಳಿಸಲು ಶ್ರಮಿಸಿದರು. ಸ್ಪರ್ಧೆಗೆ ತಯಾರಾಗಲು ನನಗೆ ಸಹಾಯ ಮಾಡಿದ ಒಡಿಶಾ ಸರ್ಕಾರ ಮತ್ತು ರಿಲಯನ್ಸ್ ಫೌಂಡೇಷನ್‌ಗೆ ನಾನು ಕೃತಜ್ಞಳಾಗಿದ್ದೇನೆ. ಈ ಋತುವನ್ನು ಪ್ರಾರಂಭಿಸಿದ ರೀತಿಯಿಂದ ನನಗೆ ಸಂತೋಷವಾಗಿದೆ," ಎಂದು ಜ್ಯೋತಿ ಯರ್ರಾಜಿ ತಿಳಿಸಿದ್ದಾರೆ.

ಈ ಸ್ಪರ್ಧೆಗಾಗಿ ಜ್ಯೋತಿ ಯರ್ರಾಜಿ ಒಡಿಶಾ ಕಳಿಂಗ ಒಳಾಂಗಣ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ತರಬೇತಿ ಪಡೆದಿದ್ದರು. ಒಡಿಶಾ ರಿಲಯನ್ಸ್ ಫೌಂಡೇಷನ್ ಅಥ್ಲೆಟಿಕ್ಸ್ ಹೈ ಪರ್ಫಾರ್ಮೆನ್ಸ್ ಸೆಂಟರ್ ಆಯೋಜಿಸಿದ್ದ ಮೊದಲ ಒಳಾಂಗಣ ಅಥ್ಲೆಟಿಕ್ಸ್ ಟೆಸ್ಟ್ ಸ್ಪರ್ಧೆಗಳಲ್ಲಿಯೂ ಜ್ಯೋತಿ ಯರ್ರಾಜಿ ಭಾಗವಹಿಸಿದ್ದರು.

ಜ್ಯೋತಿ ಅವರು 2023ರಿಂದ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಕಳೆದ ವರ್ಷದ ಏಷ್ಯನ್ ಗೇಮ್ಸ್‌ನಲ್ಲಿ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು ಮತ್ತು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕಗಳನ್ನು ತಮ್ಮದಾಗಿಸಿಕೊಂಡರು.

ಜ್ಯೋತಿ ಯರ್ರಾಜಿ ಸಾಧನೆ ಬಗ್ಗೆ ರಿಲಯನ್ಸ್ ಫೌಂಡೇಷನ್‌ನ ಅಥ್ಲೆಟಿಕ್ಸ್ ನಿರ್ದೇಶಕ ಜೇಮ್ಸ್ ಹಿಲ್ಲಿಯರ್ ಮಾತನಾಡಿ, "ಜ್ಯೋತಿಗೆ ಇದು ನಿಜವಾಗಿಯೂ ಉತ್ತಮ ಫಲಿತಾಂಶವಾಗಿದೆ. ನಾವು ಭುವನೇಶ್ವರದಲ್ಲಿ 3 ವಾರಗಳ ತರಬೇತಿ ಶಿಬಿರವನ್ನು ನಡೆಸಿದ್ದೆವು. ಅದು ತುಂಬಾ ಸಹಾಯಕವಾಗಿದೆ. ಈ ಋತುವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಲು ಬಯಸಿದ್ದರು. ಅವರು ತರಬೇತಿಯ ಸಮಯದಲ್ಲಿ ಸಣ್ಣ ಗಾಯಕ್ಕೆ ಒಳಗಾಗಿದ್ದರು. ಅದು ಗಂಭೀರ ಸ್ವರೂಪದ್ದೇನೂ ಆಗಿರಲಿಲ್ಲ. ಆದರೆ ಅವರಿಗೆ ಒಂದು ವಾರದವರೆಗೆ ತರಬೇತಿ ನೀಡಲು ಸಾಧ್ಯವಾಗಲಿಲ್ಲ. ಈಗ ಅವರು ಫಾರ್ಮ್‌ಗೆ ಮರಳಿದ್ದಾರೆ. ಇದು ಅವರ ಉತ್ತಮ ಓಟವಾಗಿದೆಮ," ಎಂದು ಹೇಳಿದರು.

ಜ್ಯೋತಿ ಯರ್ರಾಜಿ ಅವರನ್ನು 2021ರಲ್ಲಿ ರಿಲಯನ್ಸ್ ಫೌಂಡೇಷನ್ ಅಥ್ಲೆಟಿಕ್ಸ್ ಕಾರ್ಯಕ್ರಮಕ್ಕೆ ಗುರುತಿಸಲಾಯಿತು ಮತ್ತು ಒಡಿಶಾದ ನಮ್ಮ ಹೈ ಪರ್ಫಾರ್ಮೆನ್ಸ್ ಸೆಂಟರ್‌ಗಳಲ್ಲಿ ರೆಸಿಡೆನ್ಷಿಯಲ್ ಅಥ್ಲೀಟ್ ಆಗಿದ್ದರು ಮತ್ತು ಇತ್ತೀಚೆಗೆ ಉಲ್ವೆಯ ಜಿಯೋ ಇನ್‌ಸ್ಟಿಟ್ಯೂಟ್‌ನಲ್ಲಿರುವ ರಿಲಯನ್ಸ್ ಫೌಂಡೇಷನ್ ರಾಷ್ಟ್ರೀಯ ಅಥ್ಲೆಟಿಕ್ಸ್ ಸೆಂಟರ್‌ನಲ್ಲಿ ಸಹ ತರಬೇತಿ ಪಡೆದಿದ್ದರು.

ಒಟ್ಟು 15 ಅಥ್ಲೀಟ್‌ಗಳ ಪೈಕಿ, ಏಷ್ಯನ್ ಒಳಾಂಗಣ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ 7 ಅಥ್ಲೀಟ್‌ಗಳು ಉಲ್ವೆ (ಸ್ಪ್ರಿಂಟ್ಸ್ ಮತ್ತು ಥ್ರೋಸ್), ಕೂನೂರ್ (ಎಂಡ್ಯುರೆನ್ಸ್) ಮತ್ತು ಭುವನೇಶ್ವರ್ (ಜಂಪ್ಸ್) ನಲ್ಲಿರುವ ರಿಲಯನ್ಸ್ ಫೌಂಡೇಷನ್ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದರು.

ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ರಿಲಯನ್ಸ್ ಫೌಂಡೇಷನ್ ಅಥ್ಲೀಟ್‌ಗಳು:

ಇ ಬರಾನಿಕಾ (ಪೋಲ್ ವಾಲ್ಟ್)
ವಿಕೆ ಎಲಕ್ದಾಸನ್ (60 ಮೀ)
ತೇಜಸ್ ಅಶೋಕ್ ಶಿರ್ಸೆ (60 ಮೀ ಹರ್ಡಲ್ಸ್)
ಮೊಹಮ್ಮದ್ ಅಫ್ಸಲ್ (800 ಮೀ)
ಗುಲ್ವೀರ್ ಸಿಂಗ್ (3000 ಮೀ)
ಧನ್ವೀರ್ (ಶಾಟ್ ಪುಟ್)

Story first published: Monday, February 19, 2024, 9:00 [IST]
Other articles published on Feb 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+