For Quick Alerts
ALLOW NOTIFICATIONS  
For Daily Alerts

ಏಷ್ಯನ್ ಪ್ಯಾರಾ ಗೇಮ್ಸ್ 2018: ಭಾರತಕ್ಕೆ ನಾಲ್ಕನೇ ಬಂಗಾರ ತಂದ ಎಕ್ತಾ ಭ್ಯಾನ್

Asian Para Games 2018: Ekta Bhyan bags gold in club throw

ಜಕಾರ್ತಾ, ಅಕ್ಟೋಬರ್ 9: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ ನ ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ಭಾರತ ಎಕ್ತಾ ಭ್ಯಾನ್ ಬಂಗಾರ ಗೆದ್ದಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಭಿಸುತ್ತಿರುವ ನಾಲ್ಕನೇ ಬಂಗಾರವಿದು.

ಮಂಗಳವಾರ ನಡೆದ ಮಹಿಳಾ ವಿಭಾಗದ F32/51 ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ಎಕ್ತಾ ಅವರು 16.02 ಮೀಟರ್ ದೂರ ಸಾಧನೆಯೊಂದಿಗೆ ಯುಎಇಯ ಅಲ್ಕಾಬಿ ಥೆಕ್ರಾ ಅವರನ್ನು ಹಿಂದಿಕ್ಕಿದ್ದರು. ಅಲ್ಕಾಬಿ ಅವರು 15.75 ಮೀ. ದೂರ ಎಸೆತದ ಮೂಲಕ ಬೆಳ್ಳಿ ಜಯಿಸಿದರು.

ಮಂಗಳವಾರದ ಸ್ಪರ್ಧೆಯಲ್ಲಿ ಭಾರತಕ್ಕೆ ಇನ್ನೂ ಮೂರು ಕಂಚಿನ ಪದಕಗಳು ಲಭಿಸಿವೆ. ಮೋನು ಘಂಗಸ್ ಅವರು ಶಾಟ್ ಪುಟ್ F11 ಸ್ಪರ್ಧೆಯಲ್ಲಿ ಮೂರನೆಯವರಾಗಿ ಸ್ಥಾನ ಪಡೆದರೆ, ಗುಣಶೇಖರನ್ ಅವರು ಪುರುಷರ 200 ಮೀ. T44/62/64 ಕ್ಲಾಸ್ ವಿಭಾಗದಲ್ಲಿ ಮತ್ತು ಜಯಂತಿ ಬೆಹೆರಾ ಅವರು ಮಹಿಳಾ T45/46/47 ವಿಭಾಗದ 200 ಮೀ. ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡರು.

Story first published: Tuesday, October 9, 2018, 20:31 [IST]
Other articles published on Oct 9, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+