ಏಷ್ಯನ್ ಪ್ಯರಾ ಗೇಮ್ಸ್: ಹೈಜಂಪ್ ನಲ್ಲಿ ಶರದ್ ಗೆ ಏಷ್ಯನ್ ದಾಖಲೆಯ ಚಿನ್ನ

ಜಕಾರ್ತಾ, ಅಕ್ಟೋಬರ್ 11: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ ನ ಹೈ ಜಂಪ್ ನಲ್ಲಿ ಭಾರತದ ಶರದ್ ಕುಮಾರ್ ಎರಡು ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ಈ ವಿಭಾಗದಲ್ಲಿ ಚಿನ್ನ, ಬೆಳ್ಳಿ, ಕಂಚು ಮೂರೂ ಪದಕಗಳು ಭಾರತದ ಪಾಲಾಗಿದೆ ಎನ್ನುವುದು ವಿಶೇಷ.
ಗುರುವಾರ ನಡೆದ ಪುರುಷರ ಹೈ ಜಂಪ್ T42/63 ವಿಭಾಗದ ಸ್ಪರ್ಧೆಯಲ್ಲಿ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿನ ಬೆಳ್ಳಿ ಪದಕ ವಿಜೇತ ಶರದ್ 1.90 ಮೀ. ಎತ್ತರಕ್ಕೆ ಜಿಗಿದು ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಷ್ಟೇ ಅಲ್ಲ, ಏಷ್ಯನ್ ಪ್ಯಾರಾ ಗೇಮ್ಸ್ ಹೊಸ ದಾಖಲೆಯನ್ನೂ ಬರೆದಿದ್ದಾರೆ.
ರಿಯೋ ಪ್ಯಾರಾಲಿಂಪಿಕ್ ನಲ್ಲಿ ಕಂಚು ಗೆದ್ದಿದ್ದ ಭಾರತದ ವರುಣ್ ಭಾತಿ ಅವರಿಗೆ ಈ ವಿಭಾಗದಲ್ಲಿ ಬೆಳ್ಳಿ ಪದಕ (1.82 ಮೀ.) ಲಭಿಸಿತು. ರಿಯೋ ಬಂಗಾರ ಗೆದ್ದಿದ್ದ ಭಾರತೀಯ ತಾಂಗವೇಲುಮರಿಯಪ್ಪನ್ (1.67 ಮೀ.) ಕಂಚು ತನ್ನದಾಗಿಸಿಕೊಂಡರು. ಅಂತೂ ಒಂದೇ ವಿಜಯ ವೇದಿಕೆಯಲ್ಲಿ ಮೂರೂ ಭಾರತೀಯ ಮಿಂಚಿದ್ದು ಅಪೂರ್ವ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.
Story first published: Thursday, October 11, 2018, 22:01 [IST]
Other articles published on Oct 11, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications