
ಜಕಾರ್ತಾ, ಆಗಸ್ಟ್ 20: ಇಂಡೋನೇಷ್ಯ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಪರ ಚಿನ್ನ ಗೆದ್ದಿರುವ ಕುಸ್ತಿಪಟು ವಿನೇಶ್ ಫೋಗಾಟ್ ಅವರು ಟ್ವಿಟರ್ ನಲ್ಲೀಗ ಸಕ್ಕತ್ ಟ್ರೆಂಡ್ ಆಗಿದ್ದಾರೆ. ವಿನೇಶ್ ಚಿನ್ನ ಗೆಲ್ಲುತ್ತಲೇ ಸಾಮಾಜಿಕ ಜಾಲತಾಣಿಗರು 'ದಂಗಲ್' ಬಾಲಿವುಡ್ ಸಿನಿಮಾವನ್ನು ನೆನಪಿಸಿಕೊಂಡು ಟ್ವೀಟ್ ಮಾಡುತ್ತಿದ್ದಾರೆ.
ಸೋಮವಾರ ನಡೆದ ಮಹಿಳಾ ಫ್ರೀ ಸ್ಟೈಲ್ ಕುಸ್ತಿ 50 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ವಿನೇಶ್ ಬಂಗಾರ ಗೆದ್ದಿದ್ದರು. ಇದು ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮಹಿಳಾ ರಸ್ಲಿಂಗ್ ವಿಭಾಗದಲ್ಲಿ ಗೆದ್ದಿರುವ ಚೊಚ್ಚಲ ಪದಕ. ಹೀಗಾಗಿ ವಿನೇಶ್ ಗೆ ಟ್ವಿಟರ್ ನಲ್ಲಿ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಫೈನಲ್ ನಲ್ಲಿ ವಿನೇಶ್ ಅವರು ಜಪಾನ್ ಆಟಗಾರ್ತಿ ಸನ್ ಯಾನನ್ ಎದುರು ಚಿನ್ನ ಗೆದ್ದಿದ್ದರು.
ಏಷ್ಯನ್ ಗೇಮ್ಸ್ 2018ರ ಮುಖಪುಟಕ್ಕಾಗಿ ಕ್ಲಿಕ್ ಮಾಡಿ
ಫೋಗಟ್ ಕುಟುಂಬವನ್ನು ಪರಿಚಯಿಸಿದ್ದ 'ದಂಗಲ್' ಸಿನಿಮಾವನ್ನು ನೆನಪಿಸಿಕೊಂಡಿರುವ ಕ್ರೀಡಾಸಕ್ತರು ಟ್ವಿಟರ್ ನಲ್ಲಿ ದಂಗಲ್ ಸಿನಿಮಾದ ಸಾಲುಗಳನ್ನು ಬರೆದು ವಿನೇಶ್ ಗೆ ವಿಶ್ ಮಾಡಿದ್ದಾರೆ. ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾದಲ್ಲಿ ಗೀತಾ ಫೋಗಟ್ ಮಿಂಚಿದ್ದರು. ಗೀತಾ 2010ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಚೊಚ್ಚಲ ಪದಕಗೆದ್ದ ಮಹಿಳೆಯಾಗಿ ಗುರುತಿಸಿಕೊಂಡಿದ್ದರು.
ನಮ್ಮ ಹುಡುಗಿ ಹುಡುಗರಿಗೇನೂ ಕಮ್ಮಿಯಿಲ್ಲವೆಂದು ಇಲ್ಲೊಬ್ಬರು ಟ್ವೀಟ್ ಮಾಡಿದ್ದಾರೆ.
ಹುಡುಗನೋ ಅಥವಾ ಹುಡುಗಿಯೋ ಒಟ್ಟಿನಲ್ಲಿ ಚಿನ್ನ ಚಿನ್ನವೇ ತಾನೆ?
ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ವಿನೇಶ್ ನಮ್ಮ ರಾಷ್ಟ್ರಗೀತೆ ಕೇಳುವಂತೆ ಮಾಡಿ ನಮಗೆ ಹೆಮ್ಮೆ ತಂದಿದ್ದಾರೆ ಎಂದು ದೇಬು ಅವರ ಟ್ವೀಟ್ (ದಂಗಲ್ ನಲ್ಲೂ ಗೀತಾ ಅವರು ಕಾಮನ್ವೆಲ್ತ್ ಗೇಮ್ಸ್ ಚಿನ್ನ ಗೆದ್ದಾಗ ರಾಷ್ಟ್ರ ಗೀತೆ ಕೇಳಿ ಗೀತಾ ಕೋಚ್ ಮತ್ತು ತಂದೆ ಮಹವೀರ್ ಸಿಂಗ್ ಅತೀವ ಸಂಭ್ರಮಿಸುವ ಚಿತ್ರಣವಿದೆ).
2018ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಚಿನ್ನ ಗೆದ್ದ ವಿನೇಶ್ ಗೆ ಶುಭ ಹಾರೈಸಿದ ಕೆಲ ಟ್ವೀಟ್ ಗಳು.