ಟೋಕಿಯೋ ಒಲಿಂಪಿಕ್ಸ್‌ಗೆ ಅಥ್ಲೀಟ್ ತಾಜೀಂದರ್ ತೂರ್ ಅರ್ಹತೆ

ನವದೆಹಲಿ: ಭಾರತದ ಶಾಟ್‌ಪುಟ್ ಥ್ರೋವರ್ ತಾಜೀಂದರ್ ತೂರ್ 2021ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇಂಡಿಯನ್ ಗ್ರ್ಯಾಂಡ್‌ಪ್ರಿಕ್ಸ್ 4 ಕ್ರೀಡಾಕೂಟದಲ್ಲಿ ದಾಖಲೆಯ ಎಸೆತದೊಂದಿಗೆ ತಾಜೀಂದರ್ ಪ್ರತಿಷ್ಠಿತ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಭಾರತದ ಮಹಿಳಾ ರಿಲೇ ತಂಡ 4X400 ಮೀಟರ್ ರಿಲೇಯಲ್ಲಿ ಹಿಂದಿನ ದಾಖಲೆ ಮುರಿದಿದೆ. ಜೊತೆಗೆ ಸ್ಪ್ರಿಂಟರ್ ದ್ಯುತೀ ಚಂದ್ ಕೂಡ ಹಿಂದಿನ ಸಾಧನೆಗಿಂತ ಉತ್ತಮ ಸಾಧನೆ ತೋರಿದ್ದಾರೆ. ಹಿಮಾ ದಾಸ್, ದ್ಯುತೀ ಚಂದ್, ಎಸ್ ಧನಲಲಕ್ಷ್ಮೀ ಮತ್ತು ಅರ್ಚನಾ ಸುಸೀಂದ್ರನ್ ತಂಡ ಚಿನ್ನದ ಪದಕದ ಸಾಧನೆ ತೋರಿದೆ.
26ರ ಹರೆಯದ ತಾಂಜೀಂದರ್ ತೂರ್ 2018ರ ಏಷ್ಯನ್ ಗೇಮ್ಸ್‌ನ ಶಾಟ್‌ಪುಟ್‌ನಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. ತಾಜೀಂದರ್ ಒಲಿಂಪಿಕ್ಸ್ ಅರ್ಹತೆಗೆ ನಿಗದಿಪಡಿಸಲಾಗಿದ್ದ 21.10 ಮೀಟರ್ ದೂರಕ್ಕಿಂತ 21.49 ಮೀಟರ್ ದೂರ ಸಾಧನೆಯೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಹಿಮಾ, ದ್ಯುತೀ, ಧನಲಕ್ಷ್ಮೀ ಮತ್ತು ಅರ್ಚನಾ ಅವರಿದ್ದ ರಿಲೇ ತಂಡ 43.37 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಭಾರತ ಬಿ ತಂಡ (48.02 ಸೆ.), ಮಾಲ್ಡೀವ್ಸ್ (50.74 ಸೆ.) ತಂಡವನ್ನು ಹಿಂದಿಕ್ಕಿದೆ. ಈ ತಂಡ 2016ರ 43.42 ಸೆಕೆಂಡ್ ಸಾಧನೆಯನ್ನು ಉತ್ತಮಗೊಳಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications