ಜುಲೈ 26 ಶುಕ್ರವಾರ, ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಬಹು ನಿರೀಕ್ಷಿತ ವಿಶ್ವ ಕ್ರೀಡಾಕೂಟದಲ್ಲಿ ಅಥ್ಲೀಟ್ಸ್ ಪದಕಗಳ ಬೇಟೆಗೆ ಸಜ್ಜಾಗಿದ್ದಾರೆ. 35 ಸ್ಥಳಗಳಲ್ಲಿ ನಡೆಯುವ 32 ಕ್ರೀಡೆಗಳ 329 ಈವೆಂಟ್‌ಗಳಲ್ಲಿ ವಿಶ್ವದ 10,500 ಅತ್ಯುತ್ತಮ ಅಥ್ಲೀಟ್ಸ್ ಭಾಗವಹಿಸುತ್ತಿದ್ದಾರೆ.
ಆದರೆ, ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊಟ್ಟೆಗಳ ಕೊರತೆಯಿದೆ. ಮೊಟ್ಟೆ ಕೊರತೆಯಿಂದ ಕ್ರೀಡಾಪಟುಗಳು ತೊಂದರೆಗೀಡಾಗಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳು ಮೊಟ್ಟೆಗಳ ಕೊರತೆಯ ಬಗ್ಗೆ ದೂರು ನೀಡಿದ್ದಾರೆ. ವರದಿಗಳ ಪ್ರಕಾರ, ಪ್ಯಾರಿಸ್‌ನ ಒಲಿಂಪಿಕ್ ವಿಲೇಜ್‌ನಲ್ಲಿ ಆಹಾರದ ಕೊರತೆಯ ಬಗ್ಗೆ ಅನೇಕ ಕ್ರೀಡಾಪಟುಗಳು ದೂರು ನೀಡಿದ್ದಾರೆ.
ಫ್ರೆಂಚ್ ಪತ್ರಿಕೆ L'Equipe ಪ್ರಕಾರ, ಲಭ್ಯವಿರುವ ಆಹಾರದ ಪ್ರಮಾಣದಲ್ಲಿ ನಿರ್ದಿಷ್ಟವಾಗಿ ಬುಧವಾರ ಬೆಳಗಿನ ಉಪಾಹಾರದಲ್ಲಿ ನೀಡಲಾದ ಮೊಟ್ಟೆಗಳು ಮತ್ತು ಬೇಯಿಸಿದ ಮಾಂಸಗಳು ಸಾಕಾಗುವುದಿಲ್ಲ ಎಂದು ಪ್ಯಾರಿಸ್‌ನ ಒಲಿಂಪಿಕ್ ವಿಲೇಜ್‌ನಲ್ಲಿ ಆಹಾರದ ಕೊರತೆಯ ಬಗ್ಗೆ ಅನೇಕ ಕ್ರೀಡಾಪಟುಗಳು ದೂರಿದ್ದಾರೆ ಎಂದು ವರದಿ ಮಾಡಿದೆ. ಆರು ದಿನಗಳ ನಂತರ ಈ ಸಮಸ್ಯೆ ಮುನ್ನಲೆಗೆ ಬಂದಿದೆ.
ಭಾರತದ 117 ಸದಸ್ಯರ ಅಥ್ಲೀಟ್ಸ್ ತಂಡವು ಮೂರು ಕ್ರೀಡೆಗಳ ಅರ್ಧದಷ್ಟು ಆಟಗಾರರನ್ನು ಒಳಗೊಂಡಿದೆ. ಅಥ್ಲೆಟಿಕ್ಸ್ (29), ಶೂಟಿಂಗ್ (21) ಮತ್ತು ಹಾಕಿ (19).
ಈ 69 ಆಟಗಾರರ ಪೈಕಿ 40 ಆಟಗಾರರು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ 7 ಪದಕಗಳನ್ನು ಗೆದ್ದಿತ್ತು. ಇದು ಒಲಿಂಪಿಕ್ ಕ್ರೀಡಾಕೂಟದಲ್ಲಿ ಇದುವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ.
ಭಾರತೀಯ ಅಥ್ಲೀಟ್ಸ್ ಇದನ್ನು ಸುಧಾರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕಗಳ ಸಂಖ್ಯೆಯನ್ನು ಎರಡಂಕಿಗೆ ದಾಟಿಸುವ ಅವಕಾಶವನ್ನು ಭಾರತದ ಅಥ್ಲೀಟ್ಸ್ ಹೊಂದಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ದಾಖಲೆಯನ್ನು ಭಾರತ ಮುರಿಯಲಿದೆ.