For Quick Alerts
ALLOW NOTIFICATIONS  
For Daily Alerts

ಹೋಬಾರ್ಟ್ ನಲ್ಲಿ ಸ್ಮಿತ್ ಆರ್ಭಟ, ದಾಖಲೆ ಧೂಳಿಪಟ

By Mahesh

ಹೋಬಾರ್ಟ್, ಜ.23: ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಪ್ರತಿಭೆ ತಕ್ಕಂತೆ ಲಕ್ ಕೂಡಾ ಸಾಥ್ ನೀಡುತ್ತಿದೆ. ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದಾಖಲೆಗಳನ್ನು ಧ್ವಂಸ ಮಾಡಿದ ಸ್ಮಿತ್ ಈಗ ತ್ರಿಕೋನ ಏಕದಿನ ಸರಣಿಯಲ್ಲೂ ತಮ್ಮ ಆಟ ಬೊಂಬಾಟ ಶುರು ಮಾಡಿದ್ದಾರೆ.

ನಾಯಕ ಸ್ಮಿತ್ ಶುಕ್ರವಾರ ಇಂಗ್ಲೆಂಡ್ ವಿರುದ್ಧ ಭರ್ಜರಿ ಶತಕ ದಾಖಲಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು. ಟೆಸ್ಟ್ ಹಾಗೂ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಪ್ರಥಮ ಆಟಗಾರ ಎನಿಸಿದರು.

Australia captain Steve Smith sets world record

ಕಳೆದ ತಿಂಗಳು ಬಲಗೈ ಆಟಗಾರ ಸ್ಮಿತ್ ಅವರು ಮೈಕಲ್ ಕ್ಲಾರ್ಕ್ ಬದಲಿಗೆ ಆಸ್ಟ್ರೇಲಿಯಾ ಸಾರಥ್ಯ ವಹಿಸಿಕೊಂಡು ಬ್ರಿಸ್ಬೇನ್ ನಲ್ಲಿ ಭಾರತ ವಿರುದ್ಧ ಶತಕ(133 ರನ್) ಬಾರಿಸಿದ್ದರು. ಟೀಂ ಇಂಡಿಯಾ ವಿರುದ್ಧದ ಸರಣಿಯಲ್ಲಿ 4 ಪಂದ್ಯಗಳಲ್ಲಿ 4 ಶತಕ ಗಳಿಸಿ 769 ರನ್ ಹೊಡೆದು ಹೊಸ ದಾಖಲೆ ಬರೆದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.

ಏಕದಿನ ಸರಣಿಗೆ ಜಾರ್ಜ್ ಬೈಲಿ ನಾಯಕರಾಗಿದ್ದರು. ಅದರೆ, ಮೊದಲ ಪಂದ್ಯದಲ್ಲಿ ಹೆಚ್ಚುವರಿ ಓವರ್ ರೇಟ್ ದಂಡ ಅನುಭವಿಸಿ ಇಂಗ್ಲೆಂಡ್ ವಿರುದ್ಧ ಇಂದು ನಡೆದ ಪಂದ್ಯದಿಂದ ಹೊರಗುಳಿಯಬೇಕಾಯಿತು. ಮತ್ತೊಮ್ಮೆ ತಂಡದ ನಾಯಕತ್ವ ವಹಿಸಿಕೊಂಡ ಸ್ಮಿತ್ 102ರನ್ ರನ್ ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಜಯ ಗಳಿಸಿಕೊಟ್ಟರು. ಇದು 48 ಏಕದಿನ ಪಂದ್ಯಗಳಲ್ಲಿ 3ನೇ ಶತಕವಾಗಿದೆ.

ಸ್ಮಿತ್ ದಾಖಲೆಯ ಶತಕದ ನೆರವಿನಿಂದ ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಫೈನಲ್ ತಲುಪಿದೆ.. ಫೆ.1 ರಂದು ಅಂತಿಮ ಹಣಾಹಣಿ ನಡೆಯಲಿದೆ.

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+