Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಯಾನಕ ಅಫಘಾತವಾಗಿಯೂ ಬದುಕುಳಿದ ಎಫ್‌3 ಚಾಲಕ: ವಿಡಿಯೋ

Australian F3 driver Alex Peroni unhurt after car takes flight at Monza

ಮೊನ್ಝಾ, ಸೆಪ್ಟೆಂಬರ್ 8: ಇಟಲಿಯ ಮೊನ್ಝಾದಲ್ಲಿ ಶನಿವಾರ (ಸೆಪ್ಟೆಂಬರ್ 7) ನಡೆದ ಇಟಾಲಿಯನ್ ಗ್ರ್ಯಾಂಡ್‌ ಪ್ರಿಕ್ಸ್ 2019 ಫಾರ್ಮುಲಾ 3 ರೇಸ್ ನಲ್ಲಿ ಭಯಾನಕ ಅಫಘಾತವಾಗಿಯೂ ಚಾಲಕ ಗಂಭೀರ ಗಾಯವಾಗದೆ ಬದುಕುಳಿದಿರುವ ವಿಡಿಯೋ ವೈರಲ್ ಆಗಿದೆ. ಆಸ್ಟ್ರೇಲಿಯಾದ ಅಲೆಕ್ಸ್ ಪೆರೋನಿ ಈ ಅದೃಷ್ಟವಂತ ಡ್ರೈವರ್.

ರೇಸ್‌ ವೇಳೆ ಪ್ಯಾರಾಬೋಲಿಕಾ ಕರ್ವ್‌ನಲ್ಲಿ ಕಾರ್ ಚಲಾಯಿಸುತ್ತಿದ್ದ ಪೆರೋನಿ ಅವರ ನಿಯಂತ್ರಣ ಕೈ ತಪ್ಪಿದೆ. ಅಲ್ಲಿ ಅಫಘಾತಕ್ಕೀಡಾದ ಕಾರು ಎತ್ತರಕ್ಕೆ ಜಿಗಿದು, ಆಗಸದಲ್ಲೇ ತಿರುತಿರುಗಿ ನೆಲಕ್ಕೆ ಅಂದರೆ ಟ್ರ್ಯಾಕ್‌ಗೆ ಉರುಳಿದೆ. ಆದರೆ ಚಾಲಕ ಪೆರೋನಿ ಮಾತ್ರ ಗಂಭೀರವಾಗಿ ಗಾಯಗೊಳ್ಳದೆ ಪಾರಾಗಿದ್ದಾರೆ.

ಬೆಲ್ಜಿಯನ್ ಗ್ರ್ಯಾಂಡ್‌ ಪ್ರಿಕ್ಸ್ ನ ಫಾರ್ಮುಲ 2 ರೇಸ್‌ನಲ್ಲಿ ಫ್ರೆಂಚ್‌ ಡ್ರೈವರ್ ಆಂಥೋಯಿನ್ ಹಬರ್ಟ್ ಸಾವಿಗೀಡಾಗಿ ಒಂದು ವಾರದಲ್ಲಿ ಈ ಘಟನೆ ಸಂಭವಿಸಿದೆ. ಅಫಘಾತವಾಗಿ ಅಲೆಕ್ಸ್ ಪೆರೋನಿ ತನ್ನ ಕಾರಿನಿಂದ ಹೊರ ಬೀಳುತ್ತಲೇ ಅವರನ್ನು ವೈದ್ಯಕೀಯ ಕಾರು ಚಿಕಿತ್ಸೆಗಾಗಿ ಕರೆದೊಯ್ಯಿತು. ಅಂತೂ ಅಲೆಕ್ಸ್ ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Story first published: Sunday, September 8, 2019, 0:25 [IST]
Other articles published on Sep 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+