Diamond League Final: ಅವಿನಾಶ್ ಸಾಬಳೆಗೆ 9ನೇ ಸ್ಥಾನ
ವಿಶ್ವ ಕ್ರೀಡಾಭಿಮಾನಿಗಳ ಚಿತ್ತ ಈಗ ಡೈಮಂಡ್ ಲೀಗ್ ಮೇಲೆ ನೆಟ್ಟಿದೆ. ಈ ಲೀಗ್‌ನಲ್ಲಿನ ಭಾರತದ ಪರ ಇಬ್ಬರು ಅಥ್ಲೀಟ್‌ಗಳು ಭಾಗವಹಿಸುತ್ತಿದ್ದಾರೆ. ಜಾವೆಲಿನ್ ಥ್ರೋದಲ್ಲಿ ನೀರಜ್ ಚೋಪ್ರಾ ಹಾಗೂ ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ್ ಸಾಬಳೆ ಭಾಗವಹಿಸುತ್ತಿದ್ದಾರೆ. ಭಾರತದ ಭರವಸೆಯ ಅಥ್ಲೀಟ್‌ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಅವಿನಾಶ್ ಸಾಬಲೆ ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಶುಕ್ರವಾರ ತಡ ರಾತ್ರಿ ನಡೆದ ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯ ಫೈನಲ್ ನಲ್ಲಿ ಅವಿನಾಶ್ ಸೇಬಲ್ 9ನೇ ಸ್ಥಾನ ಪಡೆದರು. ಶುಕ್ರವಾರ, ಸೆಪ್ಟೆಂಬರ್ 13 ರಂದು, ಸಾಬಲೆ 8:17.09 ಸೆಕೆಂಡುಗಳಲ್ಲಿ ಕ್ರಮಿಸಿದರು. ಇದರೊಂದಿಗೆ ಅವರು ತಮ್ಮ ಋತುವನ್ನು ಅದ್ಭುತವಾಗಿ ಅಂತ್ಯಗೊಳಿಸಿದ್ದಾರೆ.

ಯಾರಿಗೆ ಪ್ರಶಸ್ತಿ?
ಡೈಮಂಡ್ ಲೀಗ್ ಫೈನಲ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ಮೊರಾಕೊದ ಸೌಫಿಯಾನ್ ಎಲ್ ಬಕ್ಕಲಿ ನಿರಾಸೆ ಅನುಭವಿಸಿದರು. ಕೀನ್ಯಾದ ಯುವ ಅಥ್ಲಿಟ್ ಅಮೋಸ್ ಸೆರೆಮ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಇವರು ನಿಗದಿತ ದೂರವನ್ನು 8:06.90 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬಂಗಾರಕ್ಕೆ ಕೊರಳು ಒಡ್ಡಿದರು.
ಈ ವಿಭಾಗದ ಬೆಳ್ಳಿಯನ್ನು ಎಲ್ ಬಕ್ಕಲಿ (8:08.60 ಸೆಕೆಂಡ) ಪಡೆದರು. ಟ್ಯುನೀಶಿಯಾದ ಮೊಹಮದ್ ಅಮೀನ್ ಜಿನೂಯಿ (8:09.68 ಸೆಕೆಂಡ್) ಮೂರನೇ ಸ್ಥಾನ ಗಳಿಸಿದರು. ಈ ರೇಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಪದಕ ಗೆಲ್ಲುವ ಆಸೆಯನ್ನು ಕಂಡಿದ್ದ ಅವಿನಾಶ್‌ಗೆ ನಿರಾಸೆ ಕಾದಿದೆ. ಆದರೆ ಅವರು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ಸ್ಟಾರ್ ಅಥ್ಲೀಟ್ ಅವಿನಾಶ್ ಸಾಬಲೆ ಸ್ಟೀಪಲ್ ಚೇಸ್ ವಿಭಾಗದಲ್ಲಿ ಭರವಸೆ ಮೂಡಿಸಿರುವ ಆಟಗಾರ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಪ್ರವೇಶ ಪಡೆದಿದ್ದ ಅವಿನಾಶ್ ಅಬ್ಬರಿಸಿದ್ದರು. ಈಗ ಡೈಮಂಡ್ ಲೀಗ್‌ನ ಪುರುಷರ 3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿಸ್ಥಿರ ಪ್ರದರ್ಶನವನ್ನು ನೀಡಿ 10 ನೇ ಬಾರಿಗೆ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಅಲ್ಲದೆ ಡೈಮಂಡ್ ಲೀಗ್‌ನಲ್ಲಿ ಒಂಬತ್ತನೇ ಸ್ಥಾನವನ್ನು ಪಡೆದು ಬೀಗಿದರು. ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಕನಸು ಅವಿನಾಶ್ ಅವರದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications