For Quick Alerts
ALLOW NOTIFICATIONS  
For Daily Alerts

Paris Diamond League 2024: ತಮ್ಮದೆ ಸ್ಟೀಪಲ್‌ಚೇಸ್ ದಾಖಲೆ ಮುರಿದ ಭಾರತದ ಸ್ಟಾರ್ ಅಥ್ಲೀಟ್ ಅವಿನಾಶ್ ಸೇಬಲ್

ಜುಲೈ 8 ಸೋಮವಾರ, ಪ್ರತಿಷ್ಠಿತ ಪ್ಯಾರಿಸ್‌ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಭಾರತದ ಸ್ಟಾರ್ ಅಥ್ಲೀಟ್ ಅವಿನಾಶ್ ಸೇಬಲ್ ತಮ್ಮದೇ ಆದ ಸ್ಟೀಪಲ್‌ಚೇಸ್ ದಾಖಲೆಯನ್ನು ಮುರಿದಿದ್ದಾರೆ.

ಡೈಮಂಡ್ ಲೀಗ್‌ನಲ್ಲಿ 8 ನಿಮಿಷ 9.91 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ 3000 ಮೀಟರ್‌ ಸ್ಟೀಪಲ್‌ಚೇಸ್‌ ಸ್ಪರ್ಧೆಯನ್ನು ಅವಿನಾಶ್‌ ಸೇಬಲ್ ಪೂರ್ಣಗೊಳಿಸಿದರು. ಈ ಮೂಲಕ ಸೇಬಲ್ ಅವರು 2022ರಲ್ಲಿ ಹೊಂದಿದ್ದ 8 ನಿಮಿಷ 11.20 ಸೆಕೆಂಡ್‌ ದಾಖಲೆಯನ್ನು ಸುಮಾರು ಒಂದೂವರೆ ಸೆಕೆಂಡುಗಳಲ್ಲಿ ಸುಧಾರಿಸಿದ್ದಾರೆ.

Avinash Sable broke his own steeplechase record in Paris Diamond League 2024

ಇಥಿಯೋಪಿಯಾದ ಅಬ್ರಹಾಂ ಸಿಮ್ ಅವರು ಕೀನ್ಯಾದ ಅಮೋಸ್ ಸೆರೆಮ್ (8:02.36) ಅವರೊಂದಿಗೆ ಫಿನಿಶ್ ಮಾಡಿದ ಬಳಿಕ 8:02.36 ವೈಯಕ್ತಿಕ ಸಮಯದೊಂದಿಗೆ ಮೊದಲ ಸ್ಥಾನ ಪಡೆದರು. ಹೀಗಾಗಿ ಅಮೋಸ್ ಸೆರೆಮ್ ಎರಡನೇ ಸ್ಥಾನ ಪಡೆದರು.

2023ರ ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಮತ್ತು 2022 ಕಾಮನ್‌ವೆಲ್ತ್ ಗೇಮ್ಸ್‌ನಲಿ ಚಿನ್ನದ ಪದಕ ವಿಜೇತ ಕೀನ್ಯಾದ ಅಬ್ರಹಾಂ ಕಿಬಿವೊಟ್ ಅವರು 8:06.70 ಟೈಮಿಂಗ್‌ನೊಂದಿಗೆ ಮೂರನೇ ಸ್ಥಾನ ಪಡೆದರು.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಸರಿಯಾದ ಸಮಯದಲ್ಲಿ ತಮ್ಮದೆ ದಾಖಲೆ ಮುರಿದಿರುವುದು ಅವಿನಾಶ್‌ ಅವರಲ್ಲಿ ಉತ್ಸಾಹ ಹೆಚ್ಚಿಸಿದೆ. ಈ ಬಗ್ಗೆ ಮಾತನಾಡಿದ ಅವಿನಾಶ್‌, 'ಕಳೆದ ಎರಡು ವರ್ಷಗಳಲ್ಲಿ ನಾನು ತಪ್ಪು ಮಾಡಿದ್ದೇನೆ. ನಾನು ಎರಡು ವಿಶ್ವ ಚಾಂಪಿಯನ್‌ಶಿಪ್‌ಗಳಿಗೆ (2022 ಮತ್ತು 2023) ಉತ್ತಮ ಫಿಟ್‌ನೆಸ್‌ನೊಂದಿಗೆ ಹೋಗಿದ್ದೆ, ಆದರೆ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಈಗ ನಾನು ಆ ತಪ್ಪುಗಳನ್ನು ಸುಧಾರಿಸಲು ಬಯಸುತ್ತೇನೆ. ಈ ಒಲಿಂಪಿಕ್ಸ್ ನನ್ನ ಅತ್ಯುತ್ತಮವಾಗಿದೆ. ಈ ಬಾರಿ ನನ್ನ ಸ್ಪರ್ಧೆಯ ಋತುವನ್ನು ತಡವಾಗಿ ಪ್ರಾರಂಭಿಸುತ್ತಿದ್ದು, ವಿಭಿನ್ನವಾಗಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

Story first published: Monday, July 8, 2024, 8:05 [IST]
Other articles published on Jul 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+