Paris Olympics 2024: ಸ್ವೀಪಲ್ ಚೇಸ್ ಫೈನಲ್ ತಲುಪುವ ಮೂಲಕ ಇತಿಹಾಸ ಬರೆದ ಅವಿನಾಶ್ ಸಾಬ್ಲೆ!
ಆಗಸ್ಟ್ 6 ಮಂಗಳವಾರ, ಭಾರತದ ದೂರ ಓಟಗಾರ ಅವಿನಾಶ್ ಸಾಬ್ಲೆ ಅದ್ಭುತ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಸೋಮವಾರ 3000 ಮೀಟರ್ ಸ್ಟೀಪಲ್ ಚೇಸ್ ಫೈನಲ್ ತಲುಪುವ ಮೂಲಕ ಅವಿನಾಶ್ ಇತಿಹಾಸ ನಿರ್ಮಿಸಿದ್ದು, ಈ ಸ್ಪರ್ಧೆಯಲ್ಲಿ ಫೈನಲ್‌ಗೆ ಆರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ರಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳಾ ವಿಭಾಗದಲ್ಲಿ ಲಲೀಲಾ ಬಾಬರ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅದರೆ ಇದುವರೆಗೆ ಯಾವುದೇ ಭಾರತೀಯ ಪುರುಷ ಅಥ್ಲೀಟ್ಸ್ ಒಲಿಂಪಿಕ್ಸ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಫೈನಲ್ ತಲುಪಿರಲಿಲ್ಲ.

ಮೊದಲನೇ ಸುತ್ತಿನ ಹೀಟ್ 2 ರಲ್ಲಿ ಅವಿನಾಶ್ ಸಾಬ್ಲೆ 8:15.43 ಸಮಯದೊಂದಿಗೆ ಐದನೇ ಸ್ಥಾನ ಪಡೆದರು. ಪ್ರಸ್ತುತ ವಿಶ್ವ ಶ್ರೇಯಾಂಕದಲ್ಲಿ 15ನೇ ಸ್ಥಾನದಲ್ಲಿದ್ದಾರೆ.
ಆದಾಗ್ಯೂ ಈ ಓಟದಲ್ಲಿ ಮೊಹಮ್ಮದ್ ಟಿಂಡಾಫ್ಟ್‌ಗಿಂತ ಸಾಬ್ಲೆ ಹಿಂದೆ ಉಳಿದಿದ್ದರು. ಟಿಂಡಾಫ್ಟ್ ಅವರು ತಮ್ಮ 8:10.62 ರ ಅದ್ಭುತ ಸಮಯದೊಂದಿಗೆ ಸಾಬ್ಲೆ ಅವರಿಗಿಂತ ಬೇಗ ಓಟವನ್ನು ಕೊನೆಗೊಳಿಸಿದರು.
ಇದಲ್ಲದೆ, ವಿಶ್ವದ 4ನೇ ಶ್ರೇಯಾಂಕದ ಇಥಿಯೋಪಿಯಾದ ಓಟಗಾರ ಸ್ಯಾಮ್ಯುಯೆಲ್ ಫೈರ್ವು, 3ನೇ ಕ್ರಮಾಂಕದ ಕೀನ್ಯಾದ ಅಬ್ರಹಾಂ ಕಿಬಿವೊಟೆ ಮತ್ತು 9ನೇ ಕ್ರಮಾಂಕದ ಜಪಾನ್‌ನ ರ್ಯುಜಿ ಮಿಯುರಾ ಕೂಡ ಅವಿನಾಶ್‌ಗಿಂತ ಹಿಂದುಳಿದಿದ್ದಾರೆ.
ಸ್ಟೀಪಲ್ ಚೇಸ್ ಫೈನಲ್ ಸ್ಪರ್ಧೆ ಇಂದು (ಮಂಗಳವಾರ) ಮಧ್ಯಾಹ್ನ 1.13 ಗಂಟೆಗೆ ಆರಂಭವಾಗಲಿದ್ದು. 15 ಓಟಗಾರರೊಂದಿಗೆ ಸಾಬ್ಲೆ ಪದಕ ಗೆಲ್ಲಲು ಪೈಪೋಟಿ ನಡೆಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications