Avni Lekhara: ಎರಡು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಅವನಿ ಲೆಖರಾ ಯಾರು?
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಎಲ್ಲರು ಇಟ್ಟಿದ್ದ ಭರವಸೆಯನ್ನು ಭಾರತದ ಅಥ್ಲೀಟ್‌ಗಳು ಉಳಿಸಿಕೊಂಡಿದ್ದಾರೆ. ಭಾರತ ಎರಡನೇ ದಿನ ಅಮೋಘ ಪ್ರದರ್ಶನ ನೀಡಿದ್ದು ಪದಕದ ಬೇಟೆಯನ್ನು ಆರಂಭಿಸಿದೆ. ಶುಕ್ರವಾರ ಎಲ್ಲರ ಚಿತ್ತ ಕದ್ದ ಕ್ರೀಡಾ ಪಟು ಅವನಿ ಲೆಖರಾ. ಮಹಿಳೆಯರ ಸ್ಟ್ಯಾಂಡಿಂಗ್ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಅವರು ಸ್ವರ್ಣ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ದೇಶಕ್ಕೆ ಕೀರ್ತಿ ತಂದಿದ್ದ ಅವನಿ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಎರಡು ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸ್ಟ್ಯಾಂಡಿಂಗ್ ಎಸ್‌ಎಚ್1 ಸ್ಪರ್ಧೆಯಲ್ಲಿ ಅಮೋಘ ಸಾಧನೆ ಮಾಡಿದ ಅವನಿ ಬಂಗಾರ ಪಡೆದರು. ಇವರು ಒಟ್ಟು 249.7 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು. ಈ ಸ್ಪರ್ಧೆಯ ಎರಡನೇ ಸ್ಥಾನವನ್ನು ಕೋರಿಯಾದ ಲೀ ಯುನ್ರಿ ಪಡೆದರೆ, ಮೂರನೇ ಸ್ಥಾನ ಸಹ ಭಾರತದ ಪಾಲಾಯಿತು. ಮೊನು ಅಗರ್‌ವಾಲ್ ಕಂಚು ಪಡೆದು ಬೀಗಿದರು.
ಅಪಘಾತದಲ್ಲಿ ಪೆಟ್ಟು
ಎರಡು ಪ್ಯಾರಾಲಿಂಪಿಕ್ಸ್‌ನಲ್ಲಿ ಬಂಗಾರದ ಸಾಧನೆ ಮಾಡಿರುವ ಅವನಿ ಸಾಧನೆಯ ಹಾದಿ ಕಲ್ಲು ಮುಳ್ಳುಗಳಿಂದ ಕೂಡಿದ್ದಾಗಿದೆ. ಅವನಿ ಲೆಖರಾ ರಾಜಸ್ಥಾನದಲ್ಲಿ ನವೆಂಬರ್ 8, 2001ರಲ್ಲಿ ಜನಿಸಿದರು. ಅವರು 12 ವರ್ಷದವರಿದ್ಧಾಗ ಒಂದು ಅಪಘಾತ ಸಂಭವಿಸಿತು. ಈ ಕಾರು ಅಪಘಾತದಲ್ಲಿ ಅವರು ತೀವ್ರ ಗಾಯಕ್ಕೆ ತುತ್ತಾದರು. ಅಲ್ಲದೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಚಿಕ್ಕ ವಯಸ್ಸಿನಲ್ಲಿ ಬಿದ್ದ ಪೆಟ್ಟುಗಳನ್ನೇ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡ ಅವನಿ ಮುಂದೆ ಸಾಗಿದರು. ದೇಶಕ್ಕೆ ಕೀರ್ತಿ ತಂದರು.
ಪ್ರಶಸ್ತಿ ಗರಿ
ಅವನಿ ಲೇಖರಾ ರಾಜಸ್ಥಾನ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಮತ್ತೊಂದೆಡೆ, ವೃತ್ತಿಪರ ಶೂಟಿಂಗ್‌ನಲ್ಲಿ, ಅವರು ಜೂನಿಯರ್ ಮತ್ತು ಹಿರಿಯ ಮಟ್ಟದಲ್ಲಿ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಶೂಟಿಂಗ್‌ನಲ್ಲಿ ಇವರು ನೀಡಿರುವ ಅಮೋಘ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಇವರಿಗೆ ಪದ್ಮಶ್ರೀ ಹಾಗೂ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

2008 ರ ಬೀಜಿಂಗ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರಿಂದ ಸ್ಫೂರ್ತಿ ಪಡೆದ ಅವನಿ 2015 ರಲ್ಲಿ ಶೂಟಿಂಗ್ ಅನ್ನು ವೃತ್ತಿಯಾಗಿ ಆರಿಸಿಕೊಂಡರು. ಅವನಿಯ ತಂದೆಯೇ ಪ್ರೋತ್ಸಾಹದಿಂದ ಇವರು ಈ ಎತ್ತರಕ್ಕೆ ಬೆಳೆದಿದ್ದಾರೆ.
SH1 ವಿಭಾಗದ ಅಂದರೇನು?
ಪ್ಯಾರಾಲಿಂಪಿಕ್ಸ್‌ನಲ್ಲಿ ಅವನಿ ಲೆಖರ್ ಶೂಟಿಂಗ್‌ನ SH1 ವಿಭಾದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಾಗದ್ದರೆ ಎಸ್‌ಎಚ್1 ವಿಭಾಗ ಎಂದು ಏಕೆ ಕರೆಯುತ್ತಾರೆ ಗೊತ್ತಾ?, ಕೈಗಳು ಸರಿಯಾಗಿ ಚಲಿಸಲು ಸಾಧ್ಯವಾಗದ ಮತ್ತು ಅವರ ಬೆನ್ನಿನ ಕೆಳಭಾಗವು ಸರಿಯಾಗಿ ಕೆಲಸ ಮಾಡದ ಕ್ರೀಡಾಪಟುಗಳು. ಅಥವಾ ಅವರ ಕಾಲುಗಳ ಚಲನೆಯಲ್ಲಿ ಸಮಸ್ಯೆಗಳನ್ನು ಹೊಂದಿರುವ ಅಥ್ಲೀಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications