ಬ್ರಿಜ್ ಭೂಷಣ್ ಶರಣ್ ಸಿಂಗ್ ಕೆಳಗಿಳಿಸಲು ಬಬಿತಾ ಫೋಗಟ್ ಸಂಚು: ಸಾಕ್ಷಿ
ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸ್ಟಾರ್ ಕುಸ್ತಿ ಪಟು ಸಾಕ್ಷಿ ಮಲಿಕ ಅವರು ಬಿಜೆಪಿ ಪಕ್ಷದ ನಾಯಕಿ ಹಾಗೂ ಮಾಜಿ ಕುಸ್ತಿ ಪಟು ಬಬಿತಾ ಫೋಗಟ್ ವಿರುದ್ಧ ಬಹಿರಂಗವಾಗಿ ದೊಡ್ಡ ಹೇಳಿಕೆ ನೀಡಿದ್ದಾರೆ. ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಅವರನ್ನು ಕೆಳಗಿಳಿಸಲು ಬಬಿತಾ ಅವರು ಸಂಚು ರೂಪಿಸಿದ್ದರು. ದೇಶದ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ಮಾಡುವಂತೆ ಪ್ರಚೋದಿಸಿದ್ದರು ಎಂದು ಹೇಳಿದ್ದಾರೆ.
ಕಳೆದ ವರ್ಷ ಕುಸ್ತಿ ಪಟುಗಳು ಜಂತರ್ ಮಂತರ್‌ನಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಆಗಿನ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಧ್ವನಿ ಎತ್ತಿದ್ದರು. ಈ ವೇಳೆ ಸ್ಟಾರ್ ಕುಸ್ತಿ ಪಟು ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವರು ಈ ವೇಳೆ ಕಾಣಿಸಿಕೊಂಡಿದ್ದರು. ಈ ವೇಳೆ ಪ್ರತಿಭಟನಾಕಾರರು ಅಧ್ಯಕ್ಷರು, ಮಹಿಳಾ ಆಟಗಾರರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರತಿಭಟನೆಯ ಕಿಚ್ಚು ಹಚ್ಚುವಲ್ಲಿ ಮಾಜಿ ಮಹಿಳಾ ಕುಸ್ತಿಪಟು ಬಬಿತಾ ಕೈವಾಡವಿದೆ ಎಂದು ಸಾಕ್ಷಿ ತಿಳಿಸಿದ್ದಾರೆ.

ಸಾಕ್ಷಿ ಹೇಳಿದ್ದೇನು?
ಇಂಡಿಯಾ ಟುಡೆ ಟಿವಿ ಜೊತೆ ಮಾತನಾಡಿರುವ ಸಾಕ್ಷಿ, ಹಳೆಯ ಪ್ರಕರಣಕ್ಕೆ ಮರು ಜೀವ ತುಂಬಿದ್ದಾರೆ. ಕುಸ್ತಿ ಪಟು ಬಬಿತಾ ಕುಸ್ತಿಪಟುಗಳನ್ನು ಒಟ್ಟುಗೂಡಿಸಿ ಫೆಡರೇಶನ್‌ನಲ್ಲಿ ಸಮಸ್ಯೆಗಳು ಹಾಗೂ ಆಗುತ್ತಿರುವ ಶೋಷಣೆಗಳ ಬಗ್ಗೆ ಧ್ವನಿ ಎತ್ತುವಂತೆ ಪ್ರಚೋದನೆ ನೀಡಿದ್ದರು. ಬ್ರಿಜ್ ಭೂಷಣ್ ಪ್ರತಿಭಟಿಸಲು ಬಬಿತಾ ಕುಸ್ತಿ ಪಟುಗಳನ್ನು ಸಂಪರ್ಕಿಸಿದ್ದರು. ಇದರ ಹಿಂದೆ ಅವರ ಸ್ವ ಹಿತಾಸಕ್ತಿ ಅಡಗಿದೆ ಎಂದಿದ್ದಾರೆ.
ಇನ್ನು ಪ್ರತಿಭಟನೆಗೆ ಪಕ್ಷದ ಬಣ್ಣ ಹಚ್ಚುವ ಕಾರ್ಯವನ್ನು ನಡೆಸಲಾಗುತ್ತಿದೆ. ಈ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ ಇದು ಸತ್ಯಕ್ಕೆ ದೂರವಾದ ಮಾತು. ಬಿಜೆಪಿ ನಾಯಕರಾದ ಬಬಿತಾ ಮತ್ತು ತಿರತ್ ರಾಣಾ ನಮಗೆ ಪ್ರತಿಭಟನೆ ನಡೆಸಲು ಅನುಕೂಲ ಮಾಡಿಕೊಟ್ಟರು. ಬಬಿತಾ ಡಬ್ಲ್ಯುಎಫ್‌ಐ ಅಧ್ಯಕ್ಷರಾಗುವ ಕನಸು ಹೊಂದಿದ್ದರು ಎಂದು ಸಾಕ್ಷಿ ಬಹಿರಂಗ ಪಡಿಸಿದ್ದಾರೆ.
ಸಾಕ್ಷಿ ಪುಸ್ತಕದಲ್ಲೂ ಈ ವಿಚಾರ ಪ್ರಸ್ತಾಪ
ಸ್ಟಾರ್ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು ತಮ್ಮ ಆತ್ಮಚರಿತ್ರೆಯನ್ನು ಹೊರ ತಂದಿದ್ದಾರೆ. ಈ ಪುಸ್ತಕದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಪ್ರತಿಭಟನೆಯ ವೇಳೆ ಭಜರಂಗ್ ಪೂನಿಯಾ ಹಾಗೂ ವಿನೇಶ್ ಪೋಗಟ್ ಅವರ ಮೇಲೆ ಯಾವ ಅಂಶಗಳು ಪರಿಣಾಮ ಬೀರಿದ್ದವು ಎಂಬುದನ್ನು ಮಾತ್ರ ಅವರು ಬರೆದಿಲ್ಲ. ಆದರೆ ಕುಸ್ತಿ ಪಟುಗಳ ದುರಾಸೆಗೆ ನಾವೆಲ್ಲ ಬಲಿಯಾದೆವು. ಹಲವರ ಕಣ್ಣಿಗೆ ನಾವು ಸ್ವಾರ್ಥಿಗಳು ಎಂದು ಬಿಂಬಿತವಾದೆವು. ಆದರೆ ಆಗಿದ್ದೇ ಬೆರೆಯದ್ದಾಗಿದೆ ಎಂದು ಬರೆದು ಕೊಂಡಿದ್ದಾರೆ.
ಬಬಿತಾ ಬಗ್ಗೆ ಬರೆದಿದ್ದೇನು?
ಭಜರಂಗ್ ಹಾಗೂ ವಿನೇಶ್‌ಗೆ ಬ್ರಿಜ್ ಭೂಷಣ್ ಶರಣ್ ಅವರ ಅಧಿಕಾರಾವಧಿಯನ್ನು ಕೊನೆಗೊಳಿಸುವ ಉದ್ದೇಶವಿತ್ತು ಎಂದು ನನಗೆ ಅರಿವಿದೆ. ಇದು ಬಬಿತಾ ಅವರ ಆಸೆಯನ್ನು ತಿಳಿದು ನಾನು ತಪ್ಪು ಮಾಡಿದೆ. ಬಬಿತಾ ಬ್ರಿಜ್ ಭೂಷಣ್, ಅವರನ್ನು ಕೆಳಗಿಳಿಸಿ ಆ ಸ್ಥಾನದಲ್ಲಿ ಅವರು ಕುಳಿತು ಕೊಳ್ಳುವ ಯೋಚನೆಯನ್ನು ಮಾಡಿದ್ದರು ಎಂದು ಬರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications