For Quick Alerts
ALLOW NOTIFICATIONS  
For Daily Alerts

ಭಾರತೀಯ ಅಥ್ಲೆಟಿಕ್ಸ್ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದ ಬಹದ್ದೂರ್ ಸಿಂಗ್

Bahadur Singh resigns as Indian athletics chief coach after 25 years

ನವದೆಹಲಿ, ಜುಲೈ 7: ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಮುಖ್ಯ ಕೋಚ್ ಸ್ಥಾನದಿಂದ ಬಹದ್ದೂರ್ ಸಿಂಗ್ ಅವರು ಕೆಳಗಿಳಿಸಿದ್ದಾರೆ. 25 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಸಿಂಗ್, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಿಂಗ್ ಅವರ ಸೇವೆಗೆ ಭಾರತೀಯ ಕ್ರೀಡಾಲೋಕ ಮೆಚ್ಚುಗೆ ವ್ಯಕ್ತಪಡಿಸಿದೆ.

ಸಿಂಗ್ ಅವರ ಉಸ್ತುವಾರಿ ಅಡಿಯಲ್ಲಿ, 2010ರ ದೆಹಲಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಎರಡು ಚಿನ್ನ ಸೇರಿದಂತೆ ಒಂದು ಡಜನ್ ಅಥ್ಲೆಟಿಕ್ಸ್ ಪದಕಗಳನ್ನು ಗೆದ್ದಿದೆ. 1946ರಲ್ಲಿ ಜನಿಸಿರುವ ಸಿಂಗ್ ಅವರ ಮುಂದಾಳತ್ವದಲ್ಲಿ ಅತ್ಯುತ್ತಮ ಕ್ಷಣವೆಂದರೆ 2018ರ ಜಕಾರ್ತಾ ಏಷ್ಯಾನ್ ಗೇಮ್ಸ್‌. ಈ ಕ್ರೀಡಾಕೂಟದಲ್ಲಿ ಭಾರತ 8 ಚಿನ್ನ ಮತ್ತು 9 ಬೆಳ್ಳಿ ಪದಕ ಸೇರಿ ಒಟ್ಟಿಗೆ 20 ಪದಕಗಳನ್ನು ಗೆದ್ದಿತ್ತು.

ವಿಶ್ವ ವೇದಿಕೆಯಲ್ಲಿ ಎಣಿಸಲ್ಪಡುವ ಸಾಧನೆಯ ಮೇಲೆ ನಾವು ಗಮನ ಹರಿಸುತ್ತಿರುವಾಗ, ಭಾರತೀಯ ಅಥ್ಲೆಟಿಕ್ಸ್‌ಗೆ ಬಹದ್ದೂರ್ ಸಿಂಗ್ ನೀಡಿದ ಅಪಾರ ಕೊಡುಗೆಯನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ, 70 ಮತ್ತು 80ರ ದಶದ ಆರಂಭದಲ್ಲಿ ಶಾಟ್‌ಪುಟರ್ ಆಗಿದ್ದವರು ಆ ಬಳಿಕ 1995ರಿಂದ ಮುಖ್ಯ ಕೋಚ್ ಆಗಿ ಭಾರತಕ್ಕೆ ಕೊಡುಗೆ ನೀಡಿದ್ದಾರೆ,' ಎಂದು ಎಎಫ್‌ಐ ಅಧ್ಯಕ್ಷ ಅಡಿಲ್ಲೆ ಜೆ ಸುಮರಿವಾಲ್ಲ ಹೇಳಿದ್ದಾರೆ.

'ಒಲಿಂಪಿಕ್ ಕ್ರೀಡಾಕೂಟದಲ್ಲಿ ಅವರು ತಂಡದ ಚುಕ್ಕಾಣಿ ಹಿಡಿಯುವುದನ್ನು ನೋಡಲು ನಾವು ಬಯಸಿದ್ದೆವು, ಆದರೆ COVID-19 ಏಕಾಏಕಿ ಟೋಕಿಯೊ 2020 ಅನ್ನು ಮುಂದೂಡುವಂತಾಯಿತು. ಹೀಗಾಗಿ ಹಿರಿಯ ನಾಗರಿಕರ ಸಂಚಾರವನ್ನು ನಿರ್ಬಂಧಿಸುವ ಗೃಹ ಸಚಿವಾಲಯದ ಸಲಹೆಯ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ,' ಎಂದು ಸುಮರಿವಾಲ್ಲ ತಿಳಿಸಿದ್ದಾರೆ.

Story first published: Wednesday, July 8, 2020, 9:56 [IST]
Other articles published on Jul 8, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+