Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಲಿ ಆಲೀವ್ ರಸ್ಲಿಂಗ್‌ನಲ್ಲಿ ಬಂಗಾರ ಗೆದ್ದ ಮೊದಲ ಭಾರತೀಯ ಭಜರಂಗ್

Bajrang Punia bags gold at Ali Aliev wrestling tournament

ಕಪಿಸ್ಕ್, ಮೇ 3: ವಿಶ್ವ ನಂ.1 ರಸ್ಲರ್ ಭಜರಂಗ್ ಪೂನಿಯಾ ಅವರು ಅಲಿ ಆಲೀವ್ ರಸ್ಲಿಂಗ್ ಟೂರ್ನಮೆಂಟ್‌ನಲ್ಲಿ ಬಂಗಾರ ಗೆದ್ದ ಭಾರತದ ಮೊದಲ ರಸ್ಲರ್ ಹಿರಿಮೆಗೆ ಪಾತ್ರರಾಗಿದ್ದಾರೆ. ರಷ್ಯಾದ ಕಪಿಸ್ಕ್ ನಲ್ಲಿ ನಡೆದ ಪುರುಷರ 65 ಕೆಜಿ ಫ್ರೀ ಸ್ಟೈಲ್ ವಿಭಾಗದ ಸ್ಪರ್ಧೆಯಲ್ಲಿ ಭಜರಂಗ್ ಚಿನ್ನ ಕೊರಳಿಗೇರಿಸಿಕೊಂಡರು (ಚಿತ್ರಕೃಪೆ: ದ ಬ್ರಿಡ್ಜ್).

ರಷ್ಯಾದ ಕುಸ್ತಿಪಟು ವಿಕ್ಟರ್ ರಾಸ್ಸಾಡಿನ್‌ಗೆ ಸೋಲುಣಿಸಿದ ಭಜರಂಗ್, ಬಂಗಾರ ತನ್ನದಾಗಿಸಿಕೊಂಡಿದ್ದಾರೆ. ಕಳೆದ ವಾರ ಚೀನಾದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್ ನಲ್ಲೂ ಪೂನಿಯಾಗೆ ಚಿನ್ನ ಲಭಿಸಿತ್ತು. ಸ್ಥಳೀಯ ಸ್ಪರ್ಧಿ ರಾಸ್ಸಾಡಿನ್ ಪ್ರಬಲ ಹೋರಾಟ ನಡೆಸಿದರಾದರೂ ವಿಶ್ವದಲ್ಲೇ ಅಗ್ರ ಸ್ಥಾನಿ ಏಷ್ಯನ್ ರಸ್ಲರ್ ಎನಿಸಿರುವ ಭಜರಂಗ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.

'ಕಳೆದ ಮೂರು ವಾರಗಳಲ್ಲಿ ನಾನು ಮೂರು ಬೇರೆಬೇರೆ ಖಂಡಗಳಲ್ಲಿ ಸ್ಪರ್ಧಿಸಿ ಜಯಿಸಿದ್ದೇನೆ ಎಂಬ ವಾಸ್ತವ ತಿಳಿಸಲು ಬಯಸುತ್ತೇನೆ. ಈ ಮೂರು ವಾರಗಳ ಅವಧಿಯಲ್ಲಿ ನನ್ನ ಬೆಂಬಲಕ್ಕೆ ನಿಂತವರಿಗೆ ನಾನು ಅಭಾರಿ' ಎಂದು ಅಭಿಪ್ರಾಯ ಹಂಚಿಕೊಳ್ಳುತ್ತ ಭಜರಂಗ್ ಹೇಳಿದರು.

Story first published: Friday, May 3, 2019, 17:16 [IST]
Other articles published on May 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+