ಬಜರಂಗ್ ಪೂನಿಯಾಗೆ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ

ನವದೆಹಲಿ, ಆಗಸ್ಟ್ 16: ಭಾರತದ ಖ್ಯಾತ ರಸ್ಲರ್ ಬಜರಂಗ್ ಪೂನಿಯಾಗೆ ದೇಶದ ಅತ್ಯುನ್ನತ ಗೌರವವಾದ 'ರಾಜೀವ್ ಗಾಂಧಿ ಖೇಲ್ ರತ್ನ 2019' ಪುರಸ್ಕಾರ ಲಭಿಸಲಿದೆ. ಲಭಿಸಿರುವ ಮಾಹಿತಿಯ ಪ್ರಕಾರ, ದೇಶದ ಪರ ಉತ್ಯುತ್ತಮ ಸಾಧನೆ ತೋರುತ್ತಿರುವ ಬಜರಂಗ್ ಖೇಲ್ ರತ್ನಾ ಪಡೆದುಕೊಳ್ಳಲಿದ್ದಾರೆ.
ಪ್ರತಿಷ್ಠಿತ ಪುಸ್ಕಾರಕ್ಕೆ ಬಜರಂಗ್ ಜೊತೆ ಮಹಿಳಾ ರಸ್ಲರ್ ವಿನೇಶ್ ಫೋಗಟ್ ಹೆಸರನ್ನೂ ಭಾರತದ ಕುಸ್ತಿ ಪ್ರಾಧಿಕಾರ (ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ) ಶಿಫಾರಸು ಮಾಡಿದೆ. ಇತ್ತೀಚೆಗೆ ಜಾರ್ಜಿಯಾದಲ್ಲಿ ನಡೆದ 'ಟಿಬಿಲಿಸಿ ಗ್ರ್ಯಾಂಡ್ ಪ್ರಿಕ್ಸ್'ನ 65 ಕೆಜಿ ವಿಭಾಗದಲ್ಲಿ ಇರಾನ್‌ನ ಪೀಮನ್ ಬಿಬಯಾನಿ ಸೋಲಿಸಿ ಪೂನಿಯಾ ಪ್ರಶಸ್ತಿ ಉಳಿಸಿಕೊಂಡಿದ್ದರು.
ಚೀನಾದ ಕ್ಸಿಯಾನ್‌ನಲ್ಲಿ ನಡೆದಿದ್ದ ಏಷ್ಯಾನ್ ರಸ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಗೆದ್ದಿದ್ದ ಬಜರಂಗ್, ಏಷ್ಯಾದಲ್ಲಿ ಪ್ರಭುತ್ವ ಸಾಧಿಸಿದ್ದಲ್ಲದೆ, ಸದ್ಯ ರಸ್ಲಿಂಗ್ ರ್ಯಾಕಿಂಗ್‌ನಲ್ಲಿ ನಂ.1 ಸ್ಥಾನದಲ್ಲೂ ಗುರುತಿಸಿಕೊಂಡಿದ್ದಾರೆ. ಜಕಾರ್ತಾದಲ್ಲಿನ ಏಷ್ಯಾನ್ ಗೇಮ್ಸ್‌ನಲ್ಲೂ ಪೂನಿಯಾಗೆ ಬಂಗಾರ ಒಲಿದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications