Amol Kolpe: ನಕಲಿ ವಯಸ್ಸಿನ ದಾಖಲೆ ಸಲ್ಲಿಕೆ; ಕ್ರಿಕೆಟಿಗನನ್ನು ಬಂಧಿಸಿದ ಬಾರಾಮತಿ ಪೊಲೀಸರು
ನಕಲಿ ವಯಸ್ಸಿನ ದಾಖಲೆ ಸಲ್ಲಿಕೆ ಆರೋಪದ ಮೇಲೆ ಬಾರಾಮತಿ ನಗರ ಪೊಲೀಸರು ಮಾಲೆಗಾಂವ್ ಮೂಲದ ಕ್ರಿಕೆಟಿಗ ಅಮೋಲ್ ಕೋಲ್ಪೆ ಅವರನ್ನು ಬಂಧಿಸಿದ್ದಾರೆ. ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಅಮೋಲ್ ಕೋಲ್ಪೆಯನ್ನು, ಇದೀಗ 14 ದಿನಗಳ ಮ್ಯಾಜಿಸ್ಟ್ರೇಟ್ ಕಸ್ಟಡಿಗೆ ಕಳುಹಿಸಲಾಗಿದೆ.
ಈ ವರ್ಷದ ಜನವರಿಯಲ್ಲಿ ನಡೆದ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನ ಅಂಡರ್-19 ಆಹ್ವಾನಿತ ಲೀಗ್ ಪಂದ್ಯಗಳಿಗಾಗಿ ಅಮೋಲ್ ಕೋಲ್ಪೆ ತಮ್ಮ ನಕಲಿ ಜನ್ಮದಿನಾಂಕವನ್ನು ಸಲ್ಲಿಕೆ ಮಾಡಿದ್ದಾರೆ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ)ಯ ಅಂಡರ್-19 ಆಮಂತ್ರಣ ಲೀಗ್ ಪಂದ್ಯಗಳಿಗಾಗಿ ಸಲ್ಲಿಸಿದ ದಾಖಲೆಗಳಲ್ಲಿ ಅಮೋಲ್ ಕೋಲ್ಪೆ ತನ್ನ ಜನ್ಮ ದಿನಾಂಕವನ್ನು ಸೆಪ್ಟೆಂಬರ್ 28, 2007 ಎಂದು ನಮೂದಿಸಿದ್ದನು.
ಆದರೆ, ತನಿಖೆಯ ನಂತರ ಅಮೋಲ್ ಕೋಲ್ಪೆ ಜನ್ಮ ದಿನಾಂಕಕ್ಕೆ ವಿರುದ್ಧವಾದ ಹಳೆಯ ದಾಖಲೆಗಳನ್ನು ಪತ್ತೆ ಹಚ್ಚಲಾಗಿದೆ. ಹಳೆಯ ದಾಖಲೆಗಳ ಪ್ರಕಾರ, ಅವರ ಜನ್ಮ ದಿನಾಂಕವನ್ನು ಫೆಬ್ರವರಿ 15, 1999 ಎಂದು ಬಹಿರಂಗಪಡಿಸಿದೆ.

"ದೂರುದಾರರು ಸಲ್ಲಿಸಿದ ದಾಖಲೆಗಳನ್ನು ನಾವು ಪರಿಶೀಲಿಸಿದ್ದೇವೆ. ಪರಿಶೀಲನೆಯ ನಂತರ, ನಾವು ಮಾಲೆಗಾಂವ್ ಕ್ರಿಕೆಟಿಗನ ನೈಜ ವಯಸ್ಸನ್ನು ಮರೆಮಾಚಿದ ವಿಷಯದ ಬಗ್ಗೆ ಪ್ರಶ್ನಿಸಿ ನಂತರ ಬಂಧಿಸಿದ್ದೇವೆ. ಭಾನುವಾರ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆತನ ಮೂರು ದಿನಗಳ ಕಸ್ಟಡಿಯಲ್ ರಿಮಾಂಡ್ ಅನ್ನು ಮಂಗಳವಾರ ಕೊನೆಗೊಳಿಸಿತು".
ಇದೀಗ ಕ್ರಿಕೆಟಿಗ ಅಮೋಲ್ ಕೋಲ್ಪೆ ಅವರನ್ನು 14 ದಿನಗಳ ಮ್ಯಾಜಿಸ್ಟ್ರೇಟ್ ಕಸ್ಟಡಿಗೆ ಕಳುಹಿಸಲಾಗಿದೆ. ಅಮೋಲ್ ಕೋಲ್ಪೆ ಅವರು ನಿಯಮಿತ ಜಾಮೀನು ಕೋರಬಹುದು," ಎಂದು ಇನ್ಸ್‌ಪೆಕ್ಟರ್ ಸುನಿಲ್ ಮಹಾದಿಕ್ ಅವರು ಹೇಳಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕಾರಭಾರಿ ಕ್ಲಬ್‌ನ ನಾನಾ ಸತವ್ ಎಂಬುವವರಿಂದ ಈ ಬಗ್ಗೆ ದೂರು ದಾಖಲಾಗಿದ್ದರಿಂದ ಕ್ರಿಕೆಟಿಗ ಅಮೋಲ್ ಕೋಲ್ಪೆ ಅವರ ನಕಲಿ ವಯಸ್ಸಿನ ದಾಖಲೆ ಸಲ್ಲಿಕೆ ಕೃತ್ಯ ಬೆಳಕಿಗೆ ಬಂದಿದೆ.
"ಸಂಬಂಧಿತ ಅಧಿಕಾರಿಗಳು ಪ್ರಕರಣವನ್ನು ಅಸಮರ್ಥವಾಗಿ ನಿಭಾಯಿಸಿದ ಕಾರಣ, ನಾನು ಪೊಲೀಸರಿಗೆ ದೂರು ನೀಡಬೇಕಾಯಿತು. ಮಿತಿಮೀರಿದ ಸಮಸ್ಯೆಯನ್ನು ಸರಿಯಾಗಿ ಪರಿಹರಿಸದಿರುವುದು, ಕ್ರಿಕೆಟ್ ನಿಯಮಾವಳಿಗಳನ್ನು ಅನುಸರಿಸುವ ಯುವ ಆಟಗಾರರ ವೃತ್ತಿಜೀವನದೊಂದಿಗೆ ಆಟವಾಡುವುದಲ್ಲದೆ ಬೇರೇನೂ ಅಲ್ಲ," ಎಂದು ದೂರುದಾರ ನಾನಾ ಸತವ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications