ಟ್ರ್ಯಾಕಿಂಗ್ ಫೀಲ್ಡ್ ಕಳೆದ ಕೆಲವು ವರ್ಷಗಳಿಂದ ಭಾರತದ ಪರ ಕಣಕ್ಕೆ ಇಳಿಯುತ್ತಿರುವ ರೇಸ್‌ಗಳಿಗೆ ಕರ್ನಾಟಕದ ಕುಶ್ ಮೈನಿ ಹಾಗೂ ಅವರ ಸಹೋದರ ಅರ್ಜುನ್ ಮೈನಿಗೆ ಅಗ್ರಸ್ಥಾನ. ಹಲವು ಅಂತಾರಾಷ್ಟ್ರೀಯ ಸರ್ಕಿಟ್‌ನಲ್ಲಿ ತಮ್ಮ ಧಮಾಕೆದಾರ್ ಸ್ಕಿಲ್ ಪ್ರದರ್ಶಿಸಿದ್ದ ಕುಶ್ ಮೈನಿ ಇತಿಹಾಸ ನಿರ್ಮಿಸಿದ್ದಾರೆ. ಮೊನಾಕೊ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಫಾರ್ಮುಲಾ 2 ಸ್ಪ್ರಿಂಟ್ ರೇಸ್ ಅನ್ನು ಗೆಲ್ಲುವ ಮೂಲಕ ಕುಶ್ ಮೈನಿ ದಾಖಲೆ ನಿರ್ಮಿಸಿದ್ದಾರೆ.
ಕುಶ್ ಮೈನಿ ಐಕಾನಿಕ್ ಟ್ರ್ಯಾಕ್‌ನಲ್ಲಿ ಜಯ ಸಾಧಿಸಿದ ಮೊದಲ ಭಾರತೀಯ ರೇಸರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಎಫ್2 ರೇಸ್ ಗೆಲ್ಲುವ ಮೂಲಕ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಪೋಡಿಯಂ ಫಿನಿಷ್ ಸಹ ಮಾಡಿದೆ. ಡಿಎಎಮ್‌ಎಸ್ ಲ್ಯೂಕಾಸ್ ಆಯಿಲ್ ತಂಡಕ್ಕಾಗಿ ರೇಸ್ ಮಾಡುವ ಕುಶ್, ಆರಂಭದಿಂದಲೂ ಪೋಲ್ ಪೋಸಿಷನ್‌ನಿಂದ ಆರಂಭಿಸಿದರು. ರೇಸ್‌ನ ಅಂತ್ಯದ ವರೆಗೆ ಕುಶ್ ತಮ್ಮ ಅಸಾಧಾರಣ ಚಾಲನಾ ಸಾಮರ್ಥ್ಯವನ್ನು ಮೆರೆದರು.

ಶನಿವಾರ ನಡೆದ ಸ್ಪ್ರಿಂಟ್ ರೇಸ್‌ನಲ್ಲಿ ಕುಶ್ ಮೈನಿ ಅಮೋಘ ಸಾಧನೆ ಮಾಡಿದರು. ಇವರು 30 ಲ್ಯಾಪ್‌ಗಳ ಸರ್ಕಿಟ್‌ನ್ನು 44.57 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದರು. ಇವರು ತಮ್ಮ ಹತ್ತಿರದ ಪ್ರತಿ ಸ್ಪರ್ಧಿ ಗೇಬ್ರಿಯೆಲ್ ಮಿನಿ ಅವರಿಗಿಂತ 3.705 ಸೆಕೆಂಡ್‌ಗೂ ಮುನ್ನ ಗುರಿ ತಲುಪಿ ಇತಿಹಾಸ ನಿರ್ಮಿಸಿದರು. ಈ ಅಭುತ್ ಪೂರ್ವ ಜಯದ ಬಳಿಕ ಭಾವುಕರಾಗಿ ಮಾತನಾಡಿರುವ ಮೈನಿ, ಮೊನಾಕೊದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ್ದು ನಿಜಕ್ಕೂ ಕನಸು ನನಸಾಯಿತು ಎಂದು ಹೇಳಿದರು. ಈ ಗೆಲುವಿನ ಪ್ರಯಾಣದಲ್ಲಿ ತಮ್ಮ ಜೊತೆಗಿದ್ದ ತಮ್ಮ ತಂಡ ಡಿಎಎಂಎಸ್‌ಗೆ ಕೃತಜ್ಞತೆ ತಿಳಿಸಿದರು.
ಕುಶ್ ಮೈನಿ ಭಾನುವಾರ ನಡೆಯಲಿರುವ ಫೀಚರ್ ರೇಸ್‌ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಈ ರೇಸ್ ನಂತರ ಅವರ ಮುಂದಿನ ನಿಲ್ದಾಣ ಬಾರ್ಸಿಲೋನಾ ಗ್ರ್ಯಾಂಡ್ ಪ್ರಿಕ್ಸ್ ಆಗಿರುತ್ತದೆ.
ಮೇ 24 ರಂದು ಸರ್ಕ್ಯೂಟ್ ಡಿ ಮೊನಾಕೊದಲ್ಲಿ ನಡೆದ ಓಟದಲ್ಲಿ ಕುಶ್ ಮೈನಿ ಪೋಲ್ ಪೊಸಿಷನ್ ಅನ್ನು ಗೆಲುವಾಗಿ ಪರಿವರ್ತಿಸಿದರು. ಮೊನಾಕೊದಲ್ಲಿ ಓಟವನ್ನು ಗೆದ್ದ ಮೊದಲ ಭಾರತೀಯ ಚಾಲಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಫಾರ್ಮುಲಾ 2 ಗ್ರ್ಯಾಂಡ್ ಪ್ರಿಕ್ಸ್ ಮೋಟಾರ್‌ಸ್ಪೋರ್ಟ್ ಜಗತ್ತಿನಲ್ಲಿ ಭವಿಷ್ಯದ ಫಾರ್ಮುಲಾ 1 ಚಾಂಪಿಯನ್‌ಗಳನ್ನು ಸಿದ್ಧಪಡಿಸುವ ವೇದಿಕೆ. ಕುಶ್ ಮೈನಿ ಫಾರ್ಮುಲಾ ಒನ್‌ನಲ್ಲಿ ಆಲ್ಪೈನ್‌ಗೆ ಮತ್ತು ಫಾರ್ಮುಲಾ ಇಯಲ್ಲಿ ಮಹೀಂದ್ರಾಗೆ ಮೀಸಲು ಚಾಲಕನಾಗಿದ್ದಾರೆ. ಕುಶ್ ಅವರ ಈ ಮಹಾನ್ ಸಾಧನೆಗೆ ಆನಂದ್ ಮಹೀಂದ್ರಾ ಅಭಿನಂದಿಸಿದ್ದಾರೆ.