Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಅಮಿತ್ ಪಂಗಲ್‌ಗೆ ವೈಯಕ್ತಿಕ ಕೋಚ್ ಪಡೆಯುವ ಅವಕಾಶ ಸಿಗುವುದು ಅನುಮಾನ!

ಜುಲೈ 17 ಬುಧವಾರ, 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಮಿಂಚಲು ಸಜ್ಜಾಗಿದ್ದಾರೆ. ಒಲಿಂಪಿಕ್ ಗೇಮ್ಸ್ ಜುಲೈ 26 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯಲಿದೆ.

ಈ ನಡುವೆ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಮುನ್ನ ಪುರುಷರ 51 ಕೆಜಿ ವಿಭಾಗದಲ್ಲಿ ಭಾರತದ ಏಸ್ ಬಾಕ್ಸರ್ ಅಮಿತ್ ಪಂಗಲ್ ಮಹತ್ವದ ಸವಾಲು ಎದುರಾಗಿದೆ. ಭಾರತದ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ)ನ ಪ್ರಧಾನ ಕಾರ್ಯದರ್ಶಿ ಹೇಮಂತ ಕುಮಾರ್ ಕಲಿತಾ ಅವರು ಪಂಗಲ್ ಅವರ ವೈಯಕ್ತಿಕ ಕೋಚ್‌ಗೆ ಸ್ಥಳಾವಕಾಶ ನೀಡದಿರಬಹುದು ಎಂದು ಹೇಳಿದ್ದಾರೆ.

BFI instructs boxer Amit Pangal not to get personal coach

"ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಓಎ)ಗೆ ನೀಡಲಾದ ದೀರ್ಘ ಪಟ್ಟಿಯಲ್ಲಿ ಹೆಸರುಗಳಿರುವ ಅಧಿಕಾರಿಗಳು/ತರಬೇತುದಾರರು ಮಾತ್ರ ಉಳಿಯಲು ಅರ್ಹರಾಗಿರುತ್ತಾರೆ. ಪಂಗಲ್ ಅವರ ವೈಯಕ್ತಿಕ ತರಬೇತುದಾರರಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಥಳಾವಕಾಶ ಸಿಗುವುದು ಅನುಮಾನ" ಹೇಮಂತ ಕುಮಾರ್ ತಿಳಿಸಿದ್ದಾರೆ.

ಈ ಬೆಳವಣಿಗೆನ ನಂತರ ಸ್ಟಾರ್‌ ಬಾಕ್ಸರ್‌ನ ತರಬೇತಿ ಮೇಲೆ ಪರಿಣಾಮಗಳು ಬೀರುವ ಸಾಧ್ಯತೆಗಳಿವೆ. ಈಗಾಗಲೇ ಅಂತರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಸೇರಿಕೊಳ್ಳದಿರುವ 28 ವರ್ಷದ ಬಾಕ್ಸರ್ ಅಮಿತ್ ಪಂಗಲ್ ರೋಹ್ಟಕ್‌ನಲ್ಲಿರುವ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ತನ್ನ ಬೇಸಿಕ್ಸ್ ಕೋಚ್ ಅನಿಲ್ ಧಂಖರ್ ಮತ್ತು ಕ್ಯೂಬಾದ ಕೋಚ್ ಬಿಐ ಫರ್ನಾಂಡಿಸ್ ಅವರ ಮಾರ್ಗದರ್ಶನದಲ್ಲಿ ತಯಾರಿ ನಡೆಸಲು ನಿರ್ಧರಿಸಿದ್ದಾರೆ.

ಇಬ್ಬರು ಸ್ಟಾರ್ ಅಥ್ಲೀಟ್‌ಗಳಾದ ಬ್ಯಾಡ್ಮಿಂಟನ್ ಚಾಂಪಿಯನ್ ಪಿವಿ ಸಿಂಧು ಅವರ ಮಾರ್ಗದರ್ಶಕ ಪ್ರಕಾಶ್ ಪಡುಕೋಣೆ ಮತ್ತು ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರ ಕೋಚ್ ವೋಲರ್ ಅಕೋಸ್ ಅವರ ವೈಯಕ್ತಿಕ ತರಬೇತುದಾರರಿಗೆ ಅವಕಾಶ ಕಲ್ಪಿಸುವ ನಿರ್ಧಾರವನ್ನು ಮಾಡಿದ ನಂತರ ಈ ಬೆಳವಣಿಗೆಯಾಗಿದೆ ಎಂದು 'ದಿ ಟ್ರಿಬ್ಯೂನ್' ವರದಿ ಮಾಡಿದೆ.

Story first published: Wednesday, July 17, 2024, 22:51 [IST]
Other articles published on Jul 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+