ಶೂಟಿಂಗ್: ಭಾರತಕ್ಕೆ ಬಂಗಾರ ಗೆದ್ದ ಮನು ಭಾಕರ್-ಅನ್ಮೋಲ್ ಜೋಡಿ

ಪ್ರೇಗ್, ಜುಲೈ 16: ಭಾರತದ ಭರವಸೆಯ ಶೂಟರ್ ಮನುಭಾಕರ್ ಮತ್ತು ಅನ್ಮೋಲ್ ಜೈನ್ ಅವರನ್ನೊಳಗೊಂಡ ಜೋಡಿ ಜೆಕ್ ರಿಪಬ್ಲಿಕ್ ನ ಪ್ಲಜನ್ ನಲ್ಲಿ ಭಾನುವಾರ ನಡೆದ 28ನೇ 'ಮೀಟಿಂಗ್ ಆಫ್ ಶೂಟಿಂಗ್ ಹೋಪ್ಸ್' ಅಂತಾರಾಷ್ಟ್ರೀಯ ಕೂಟದ ಮಿಶ್ರ ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದೆ.
ಒಟ್ಟು 763 ಪಾಯಿಂಟ್ ಗಳಿಂದ ಮನು ಭಾಕರ್-ಅನ್ಮೋಲ್ ಜೋಡಿ ಭಾರತದ ಮತ್ತೊಂದು ಜೋಡಿ ದೇವಾಂಶಿ ಮತ್ತು ಸೌರಭ್ ಚೌಧರಿ ಅವರನ್ನು 1.2 ಪಾಯಿಂಟ್ ಗಳಿಂದ ಸೋಲಿಸಿ ಪ್ರಥಮ ಪ್ರಶಸ್ತಿ ಬಾಚಿಕೊಂಡಿತು.
ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಗೆದ್ದುಕೊಂಡ ಭಾರತದ ಮಿಶ್ರ ಜೋಡಿ, ಇಟಲಿಯ ಸೋಫಿಯಾ ಬೆನೆಟ್ಟಿ ಮತ್ತು ಮಾರ್ಕೊ ಸುಪಿನಿ ತಂಡವನ್ನು ತೃತೀಯ ಸ್ಥಾನಕ್ಕೆ ತಳ್ಳಿತು. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತದ ಶೂಟರ್ ಗಳ ತಂಡ ಒಟ್ಟು 11 ಚಿನ್ನ, 7 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಬಾಚಿಕೊಂಡಿವೆ.
ಪುರುಷರ ಜೂನಿಯರ್ 10 ಮೀ. ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ರಷ್ಯಾದ ಗ್ರಿಗೋರಿ ಷಮಾಕೋವ್, ದ್ವಿತೀಯ ಮಸೆಜ್ ಕೋವಲ್ವಿಕ್ಜ್ (ಪೋಲ್ಯಾಂಡ್), ತೃತೀಯ ಸ್ಥಾನವನ್ನು ಭಾರತದ ಹೃದಯ್ ಹಜರಿಕ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications