Asian Championship: ಫೆನ್ಸಿಂಗ್‌ನಲ್ಲಿ ಮೊದಲ ಪದಕ ಖಚಿತ: ದಾಖಲೆ ಬರೆದ ಭವಾನಿ ದೇವಿ
ಭಾರತದ ಪೆನ್ಸರ್ ಸಿ ಎ ಭವಾನಿ ದೇವಿ ಸೋಮವಾರ ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್ ಕ್ವಾರ್ಟರ್‌ಫೈನಲ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಮಿಸಾಕಿ ಎಮುರಾ ಅವರನ್ನು ಸೋಲಿಸಿದ ಭವಾನಿ ದೇವಿ ಫೆನ್ಸಿಂಗ್‌ನಲ್ಲಿ ಭಾರತಕ್ಕೆ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲ ಮೊದಲ ಪದಕವನ್ನು ಖಚಿತಪಡಿಸಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಜಪಾನ್‌ನ ಮಿಸಾಕಿ ಎಮುರಾ ವಿರುದ್ಧ ನಡೆದ ಕ್ವಾರ್ಟರ್‌ಫೈನಲ್ ಸೆಣೆಸಾಟದಲ್ಲಿ ಭವಾನಿ ದೇವಿ 15-10 ಅಂತರದಿಂದ ಮಣಿಸಿದ್ದಾರೆ. 2022ರಲ್ಲಿ ಕೈರೋದಲ್ಲಿ ನಡೆದ ವಿಶ್ವ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಸಾಕಿ ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಭವಾನಿ ದೇವಿ ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಝೈನಾಬ್ ದೈಬೆಕೋವಾ ಅವರನ್ನು ಎದುರಿಸಲಿದ್ದು ಯಾವ ಪದಕಕ್ಕೆ ಮುತ್ತಿಕ್ಕಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. 29ರ ಹರೆಯದ ಭವಾನಿ ಮೊದಲಿಗೆ ಗ್ರೂಫ್ ಆಫ್ 64 ಹಂತದಲ್ಲಿ ಬೈ ಪಡೆದಿದ್ದರು ಅದಾದ ನಂತರ ಕಜಕಿಸ್ತಾನದ ದೋಸ್ಪೇ ಕರೀನಾ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದರು. ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಪೆನ್ಸರ್ ಒಜಕಿ ಸೆರಿ ಅವರನ್ನು 15-11 ಅಂತರದಿಂದ ಮಣಿಸಿದ್ದರು.
ಭವಾನಿ ದೇವಿ ಅವರ ಈ ಐತಿಹಾಸಿಕ ಸಾಧನೆಗೆ ಪೆನ್ಸಿಂಗ್ ಅಸೊಸಿಯೇಶನ್ ಆಫ್ ಇಂಡಿಯಾದ ಕಾರ್ಯದರ್ಶಿ ರಾಜೀವ್ ಮೆಹ್ತಾ ಅಭಿನಂದನೆ ಸಲ್ಲಿಸಿದ್ದಾರೆ. "ಭಾರತೀಯ ಪೆನ್ಸಿಂಗ್‌ಗೆ ಇದು ಐತಿಹಾಸಿಕ ಸಾಧನೆಯಾಗಿದೆ. ಭವಾನಿ ಈ ಹಿಂದೆ ಯಾರಿಂದಲೂ ಸಾಧ್ಯವಾಗದ ಸಾಧನೆಯನ್ನು ಮಾಡಿದ್ದಾರೆ. ಪ್ರತಿಷ್ಠಿತ ಏಷ್ಯನ್ ಚಾಂಪಿಯನ್‌ನಲ್ಲಿ ಪದಕವನ್ನು ಗೆಲ್ಲುವ ಮೊದಲ ಭಾರತೀಯ ಪೆನ್ಸರ್ ಎನಿಸಿಕೊಳ್ಳಲಿದ್ದಾರೆ. ಪೆನ್ಸಿಂಗ್‌ನ ಎಲ್ಲರ ಪರವಾಗಿಯೂ ಆಕೆಗೆ ಅಭಿನಂದನೆ ಸಲ್ಲಿಸುತ್ತೇನೆ. ಆಕೆ ಚಿನ್ನದೊಂದಿಗೆ ತವರಿಗೆ ವಾಪಾಸಾಗುತ್ತಾರೆ ಎಂಬ ವಿಶ್ವಾಸವಿದೆ" ಎಂದಿದ್ದಾರೆ ಮೆಹ್ತಾ.
ಇನ್ನು ಭವಾನಿ ದೇವಿ ಈ ಮೊದಲು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಪೆನ್ಸರ್ ಎನಿಸಿಕೊಂಡಿದ್ದರು. ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ 32ರ ಘಟ್ಟದಲ್ಲಿ ಸೋತು ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದ್ದರು ಭಾರತೀಯ ಪೆನ್ಸರ್. ಇದೀಗ ಮತ್ತೊಂದು ಪ್ರತಿಷ್ಠಿತ ಟೂರ್ನಿಯಲ್ಲಿ ಭವಾನಿ ದೇವಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications