WWE ದಿವಾ ಪೇಜ್ ಮತ್ತೆ ರಿಂಗ್ ಗೆ ಬರ್ತಾಳಂತೆ!
ಬೆಂಗಳೂರು, ಸೆ. 16: ಬ್ರಿಟನ್ ಮೂಲದ WWE ದಿವಾ ಪೇಜ್ ಗಾಯದ ಸಮಸ್ಯೆಯಿಂದ ನಿವೃತ್ತಿ ಹೊಂದುವುದಾಗಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟು ಒಂದು ತಿಂಗಳು ಕಳೆದಿಲ್ಲ ಅಷ್ಟರಲ್ಲೇ ಮತ್ತೊಮ್ಮೆ ರಿಂಗ್ ಗೆ ಇಳಿಯುವ ಬಗ್ಗೆ ಗುಸುಗುಸು ಸುದ್ದಿ ಬಂದಿದೆ.
ಪೇಜ್ ಅವರು ತಾಂತ್ರಿಕವಾಗಿ ಮಹಿಳಾ ವಿಭಾಗದ ಶ್ರೇಷ್ಠ ಕುಸ್ತಿಪಟುವಾಗಿ ಡಬ್ಲ್ಯೂಡಬ್ಲ್ಯೂಇನಲ್ಲಿ ಜನಪ್ರಿಯತೆ ಗಳಿಸಿದವರು. ಆದರೆ, WWE ಆಯೋಜಕರಿಂದ ಸರಿಯಾದ ಮನ್ನಣೆ ಸಿಗದ ಕಾರಣ ಪೇಜ್ ಅವರು WWE ತೊರೆಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯಿದೆ. ಗೆಳೆಯ ಅಲ್ಬರ್ಟ್ ಡೆಲ್ ರಿಯೋ ಕೂಡಾ ಇದೇ ಕಾರಣಕ್ಕೆ WWE ತೊರೆದು ಟಿಎನ್ ಎ ರೆಸ್ಲಿಂಗ್ ಸೇರಲು ಮುಂದಾಗಿದ್ದಾರೆ. [ಅಂಡರ್ ಟೇಕರ್ ಪತ್ನಿ ಮಿಷಲ್ ಗೆ ಕ್ಯಾನ್ಸರ್]

ಅಲ್ಬರ್ಟ್ ಹಾಗೂ ಪೇಜ್ ಇಬ್ಬರನ್ನು WWE ಹೊರಗಿಡಲು ನಿರ್ಧರಿಸಿದರೂ ಅಭಿಮಾನಿಗಳಿಗೆ ಇವರಿಬ್ಬರನ್ನು ರಿಂಗ್ ನಲ್ಲಿ ಮತ್ತೆ ಕಾಣಲು ಆಸೆಯಿದೆ. ಆದರೆ, pwinsider.com ವರದಿಯಂತೆ ಪೇಜ್ ಅವರನ್ನು ಸಡನ್ ಆಗಿ ರಿಂಗ್ ಗೆ ಇಳಿಸಿ ಅಭಿಮಾನಿಗಳಿಗೆ ಶಾಕ್ ನೀಡಲು ಆಯೋಜಕರು ಮುಂದಾಗಿದ್ದಾರಂತೆ.
WWE ರಾ ನಲ್ಲಿ ಪೇಜ್ ಮತ್ತೊಮ್ಮೆ ಕುಸ್ತಿಯಾಡಿದರೂ ಅಚ್ಚರಿ ಪಡಬೇಕಾಗಿಲ್ಲ. ಸೆಪ್ಟೆಂಬರ್ 17ಕ್ಕೆ ಪೇಜ್ ಮೇಲಿರುವ ಅಮಾನತು ಶಿಕ್ಷೆ ಕೊನೆಗೊಳ್ಳಲಿದೆ.[WWE ದಿವಾ ಪೇಜ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್]
ಪೇಜ್ ಇದ್ದರೆ ಟಿವಿ ವೀಕ್ಷಕರು ಹೆಚ್ಚಾಗುತ್ತಾರೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.24ರ ಹರೆಯದ ಪೇಜ್ ಗೆ ಈಗಲೇ ತನ್ನ ರೆಸ್ಲಿಂಗ್ ವೃತ್ತಿ ಕೊನೆಗೊಳಿಸುವುದು ಬೇಕಿಲ್ಲ. ಆಯೋಜಕರು ಮನಸ್ಸು ಮಾಡಿದರೆ ಪೇಜ್ ಮತ್ತೊಮ್ಮೆ ತಮ್ಮ ಮಾದಕ ಮೈಮಾಟದ ಜೊತೆ ರೆಸ್ಲಿಂಗ್ ಮಾಡುವುದನ್ನು ನೋಡಲಡ್ಡಿಯಿಲ್ಲ.(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications