For Quick Alerts
ALLOW NOTIFICATIONS  
For Daily Alerts

ಪಂಕಜ್ ಮುಡಿಗೆ 14ನೇ ವಿಶ್ವ ಚಾಂಪಿಯನ್ ಶಿಪ್ ಕಿರೀಟ

By Mahesh

ಅಡಿಲೇಡ್, ಸೆ. 28: ಬೆಂಗಳೂರು ನಿವಾಸಿ ವಿಶ್ವದ ಅಗ್ರಗಣ್ಯ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಅವರು ಐಬಿಎಸ್‌ಎಫ್ ವರ್ಲ್ಡ್ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ ಗೆದ್ದುಕೊಂಡಿದ್ದಾರೆ. ಈ ಮೂಲಕ ಅವರು ಗೆದ್ದಿರುವ ವಿಶ್ವ ಪ್ರಶಸ್ತಿಗಳ ಸಂಖ್ಯೆ 14ಕ್ಕೆ ಏರಿದೆ.

ಭಾನುವಾರ ನಡೆದ ಫೈನಲ್​ನಲ್ಲಿ ಪಂಕಜ್ ಅವರು ಸಿಂಗಪುರದ ಪೀಟರ್ ಗಿಲ್ ಕ್ರಿಸ್ಟ್ ಅವರನ್ನು 1168 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಸಾಧನೆ ಮಾಡಿದರು

30ರ ಹರೆಯದ ಅಡ್ವಾಣಿ ಅವರು ಸಮಯ ಮಾದರಿಯ ಫೈನಲ್‌ನಲ್ಲಿ ಸಿಂಗಪುರದ ಪೀಟರ್ ಗಿಲ್‌ಕ್ರಿಸ್ಟ್ ಅವರನ್ನು 2,408- 1,240 ಅಂತರದಿಂದ ಮಣಿಸಿ ಮತ್ತೊಮ್ಮೆ ಪ್ರಶಸ್ತಿಯನ್ನು ಮತ್ತೊಮ್ಮೆ ಗೆದ್ದುಕೊಂಡರು. ವಾರದ ಹಿಂದೆ ಅಂಕ ಮಾದರಿಯ ಚಾಂಪಿಯನ್‌ಶಿಪ್‌ನಲ್ಲಿ ಗಿಲ್‌ಕ್ರಿಸ್ಟ್‌ಗೆ ಅಡ್ವಾಣಿ ಶರಣಾಗಿದ್ದರು. ಅಡಿಲೇಡ್ ನಲ್ಲಿ ಈ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.

Pankaj Advani pockets 14th World title

ಪಂದ್ಯದ ಮೊದಲ ಅವಧಿಯಲ್ಲಿ 127 ಅಂಕಗಳೊಂದಿಗೆ ಮುನ್ನಡೆ ಗಳಿಸಿದ್ದ ಅಡ್ವಾಣಿ ಅವರು ಮುನ್ನಡೆಯನ್ನು ಕಾಯ್ಡುಕೊಂಡು ಗಿಲ್‌ಕ್ರಿಸ್ಟ್ ವಿರುದ್ಧ ಜಯ ದಾಖಲಿಸಿದರು. ಎರಡು ಬಾರಿ 300ಕ್ಕೂ ಅಧಿಕ (360 ಮತ್ತು 301) ಅಂಕಗಳನ್ನು ಗಳಿಸಿದ ಫೈನಲ್‌ನ ಅರ್ಧಕ್ಕೆ ತಲುಪುವಾಗ ಅಡ್ವಾಣಿ 1,100 ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದರು. ಐದು ಗಂಟೆಗಳ ಕಾಲ ನಡೆದ ಫೈನಲ್‌ನಲ್ಲಿ ಅಡ್ವಾಣಿ ಆಕ್ರಮಣಕಾರಿ ಆಟದಲ್ಲಿ ಹೆಚ್ಚಿನ ಯಶಸ್ಸು ಕಂಡರು. (ಪಿಟಿಐ)

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+