ಸ್ಟುವರ್ಟ್ ಬಿನ್ನಿಗೆ 6 ವಿಕೆಟ್, ಭಾರತಕ್ಕೆ ಏಕದಿನ ಸರಣಿ
ಢಾಕಾ, ಜೂ.17 : ಮಳೆಕಾಟಕ್ಕೆ ಒಳಗಾದ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಕಂಗಾಲಾಗಿದ್ದ ಟೀಂ ಇಂಡಿಯಾಗೆ ಕರ್ನಾಟಕದ ಆಟಗಾರ ಸ್ಟುವರ್ಟ್ ಬಿನ್ನಿ ಆಶಾಕಿರಣವಾಗಿ ಬಿಟ್ಟರು. ವೇಗಿ ಬಿನ್ನಿ 6 ವಿಕೆಟ್ ಕಿತ್ತು ಭಾರತಕ್ಕೆ ಜಯ ತಂದಿತ್ತರು. ಬಾಂಗ್ಲಾದೇಶ ವಿರುದ್ಧ 47 ರನ್ ಗಳ ಅಮೋಘ ಗೆಲುವು ಟೀಂ ಇಂಡಿಯಾಗೆ ಸಿಕ್ಕಿತು.
ಬಾಂಗ್ಲಾದೇಶ ವಿರುದ್ಧ 47 ರನ್ ಗಳ ಅಮೋಘ ಗೆಲುವು ಟೀಂ ಇಂಡಿಯಾಗೆ ಸಿಕ್ಕಿತು. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ 2-0 ಅಂತರದಿಂದ ಗೆದ್ದುಕೊಂಡಿದೆ.[ಮೊದಲ ಪಂದ್ಯದ ವರದಿ]
ಸ್ಕೋರ್ ಕಾರ್ಡ್ ನೋಡಿ
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸುರೇಶ್ ರೈನಾ ಪಡೆ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 105 ರನ್ ಗಳಿಗೆ ಆಲೌಟ್ ಆಯಿತು. ಮಳೆ ಕಾರಣ ಪಂದ್ಯವನ್ನು 41 ಓವರ್ ಗಳಿಗೆ ಇಳಿಸಲಾಗಿತ್ತು.
ಗೆಲುವಿನ ಗುರಿ ಹಿಂದೆ ಬಿದ್ದ ಬಾಂಗ್ಲಾ ಹುಲಿಗಳನ್ನು ಬಿನ್ನಿ(6/4) ಹಾಗೂ ಮೋಹಿತ್ ಶರ್ಮ (4/22) ಕಟ್ಟಿ ಹಾಕಿದರು. ಬಾಂಗ್ಲಾದೇಶ 17.4 ಓವರ್ ಗಳಲ್ಲಿ ಕೇವಲ 58 ರನ್ ಗಳಿಗೆ ಆಲೌಟ್ ಆಗಿ ಭಾರತಕ್ಕೆ ಜಯದ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಬಾಂಗ್ಲಾದ ಯುವ ವೇಗಿ ತಸ್ಕಿನ್ ಅಹ್ಮದ್ ಅವರು ಭಾರತದ ಬಲಿಷ್ಠ ಬ್ಯಾಟಿಂಗ್ ಬೆನ್ನಲುಬನ್ನು ಮುರಿದಿದ್ದರು. ಅಹ್ಮದ್ ತಮ್ಮ ಮೊದಲ ಏಕದಿನ ಪಂದ್ಯದಲ್ಲೇ 28 ರನ್ನಿತ್ತು 5 ವಿಕೆಟ್ ಕಿತ್ತರು ಭಾರತ 25.3 ಓವರ್ ಗಳಲ್ಲಿ 105 ಸ್ಕೋರಿಗೆ ಆಲೌಟ್ ಆಗಿ ಬಾಂಗ್ಲಾದೇಶ ವಿರುದ್ಧ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ದಾಖಲೆ ಬರೆಯಿತು. ನಂತರ ಬಾಂಗ್ಲಾ ಕೂಡಾ ಭಾರತ ವಿರುದ್ಧ ಕಡಿಮೆ ಮೊತ್ತಕ್ಕೆ ಅಲೌಟ್ ಆಯಿತು.

1993ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು 12 ರನ್ನಿತ್ತು 6 ವಿಕೆಟ್ ಕಿತ್ತು ಶ್ರೇಷ್ಠ ಬೌಲಿಂಗ್ ಪ್ರದರ್ಶನ ದಾಖಲೆಯನ್ನು ಕರ್ನಾಟಕದ ಬಿನ್ನಿ ಅವರು ಮಂಗಳವಾರ(ಜೂ.17) ಮುರಿದಿರುವುದು ವಿಶೇಷ.
ತಸ್ಕಿನ್ ದಾಳಿಗೆ ಭಾರತ ತತ್ತರ: ಉತ್ತಪ್ಪ 14 ರನ್, ಪೂಜಾರ 11, ಅಂಬಟಿ ರಾಯುಡು 1, ಬಿನ್ನಿ 3, ಮಿಶ್ರಾ 4 ವಿಕೆಟ್ ಕೀಳುವ ಮೂಲಕ ತಸ್ಕಿನ್ ಅಹ್ಮದ್ ಅದ್ಭುತ ಪ್ರದರ್ಶನ ನೀಡಿದರು. ಮೋರ್ತಜಾ 2 ವಿಕೆಟ್ ಕಿತ್ತು ಉತ್ತಮ ಬೆಂಬಲ ನೀಡಿದರು. ಭಾರತದ ಪರ ಏಕೈಕ ಸಿಕ್ಸರ್ ಬಾರಿಸಿದ ಉಮೇಶ್ ಯಾದವ್ 17 ರನ್ ಹಾಗೂ ನಾಯಕ ಸುರೇಶ್ ರೈನಾ 27 ರನ್ ಗಳಿಸಿ ತಂಡದ ಮೊತ್ತ ನೂರರ ಗಡಿ ದಾಟಿಸಿದರು.
ಬಾಂಗ್ಲಾದೇಶ ಪರ ಮಿಥುನ್ ಅಲಿ 26, ನಾಯಕ ಮುಶ್ಫಿಕರ್ ರಹೀಮ್ 11 ಕೊಂಚ ಪ್ರತಿರೋಧ ತೋರಿದರು. ಐವರು ಡಕ್ ಔಟಾದರು. ಬಿನ್ನಿ 6 ಮೋಹಿತ್ ಶರ್ಮ 4 ವಿಕೆಟ್ ಕಿತ್ತು ಪಂದ್ಯವನ್ನು ಮುಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications