
ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ಅಮೆರಿಕಾದ ಬಾಡಿಬಿಲ್ಡರ್ ಸೆಡ್ರಿಕ್ ಮೆಕ್ ಮಿಲನ್ ಅವರು 44ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯ ಸಮಸ್ಯೆಗಳಿಂದಾಗಿ ದೇಹದಾರ್ಢ್ಯ ಸ್ಪರ್ಧೆಗೆ ಹಿಂದಿರುಗುವುದನ್ನು ಮುಂದೂಡುತ್ತಿದ್ದ ಅವರು ಇದೀಗ ದಿಢೀರನೆ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ.
ಅಮೆರಿಕಾ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೆಡ್ರಿಕ್ ಮಿಲನ್ ಬಹು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಸಾವಿಗೆ ನಿಜಕ್ಕೂ ಏನು ಕಾರಣ ಎಂಬ ಅಂಶಗಳನ್ನು ಕುಟುಂಬದ ಮೂಲಗಳು ಈವರೆಗೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ಮೆಕ್ ಮಿಲನ್ ಈ ಹಿಂದೆ ಹೃದಯ ಸಂಬಂಧಿತ ಸಮಸ್ಯೆಗಳ ಹೇಳಿಕೊಂಡಿದ್ದರು. ಈ ಹಿಂದಿನ ಅನಾರೋಗ್ಯದ ಅನುಭವ ಕುರಿತು ಮೊದಲು ಮಾತನಾಡಿದ್ದ ಸೆಡ್ರಿಕ್ 2017 ರ ಅರ್ನಾಲ್ಡ್ ಕ್ಲಾಸಿಕ್ ಚಾಂಪಿಯನ್ ಪ್ರೊ ಬಾಡಿಬಿಲ್ಡರ್ ಸ್ಪರ್ಧೆಗೆ, ಟ್ರೆಡ್ ಮಿಲ್‌ನಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ನವೆಂಬರ್ 2021 ರಲ್ಲಿ ನೀಡಿದ ಸಂದರ್ಶನದಲ್ಲಿವೊಂದರಲ್ಲಿ , ಮೆಕ್ ಮಿಲನ್ ಅವರು 2020 ರಲ್ಲಿ ಕೊರೊನಾ ಸೋಂಕು ತಗುಲಿರುವ ವಿಷಯವನ್ನು ಹೇಳಿಕೊಂಡಿದ್ದರು.
ಕೊರೊನಾ ಬಂದ ನಂತರದಲ್ಲಿ ಹೃದಯ ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಿದ್ದಲ್ಲದೆ, ನ್ಯುಮೋನಿಯಾ ರೋಗವು ಆಕ್ರಮಿಸಿಕೊಂಡಿತ್ತು ಎಂದು ಹೇಳಿದ್ದರು. ಚಿಕಿತ್ಸಾ ಹಂತದಲ್ಲಿನ ಆ ಘಟನೆಯನ್ನು ನೆನೆದುಕೊಂಡು ನಾನು ಬಹುತೇಕ ಸತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಸೆಡ್ರಿಕ್ ಮೆಕ್ ಬೇಸರ ವ್ಯಕ್ತಪಡಿಸಿದ್ದರು.
ಕೋವಿಡ್-19 ಚೇತರಿಕೆಯ ಬಳಿಕ ಅವರು ಸಶಸ್ತ್ರ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಸಹ, ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದನ್ನು ಮುಂದೂಡುತ್ತಿದ್ದರು. ಆದ್ರೀಗ ತೀವ್ರ ಅನಾರೋಗ್ಯದಿಂದಾಗಿ ಮೂವರು ಮಕ್ಕಳನ್ನು ಸೇರಿದಂತೆ ಕುಟುಂಬವನ್ನು ಅಗಲಿದ್ದಾರೆ.
ನ್ಯೂಯಾರ್ಕ್ ಮ್ಯಾಪಲ್‌ವುಡ್‌ನಲ್ಲಿ ಆಗಸ್ಟ್ 16, 1977 ರಂದು ಜನಿಸಿದ ಮೆಕ್ , ಬಾಲ್ಯದಿಂದಲೇ ಖ್ಯಾತ ಬಾಡಿಬಿಲ್ಡರ್ ಅರ್ನಾಲ್ಡ್ ಶ್ವಾರ್ಜಿನೆಗರ್ ಅವರಿಂದ ಪ್ರೆರಣೆಗೊಂಡು 8 ಮುಕ್ತ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಗೆಲವು ಸಾಧಿಸಿದ್ದರು. ಪ್ರಮುಖ ಸ್ಪರ್ಧೆಗಳಲ್ಲಿ ಅಗ್ರ 5 ರಲ್ಲಿ ಸ್ಥಾನ ಪಡೆದಿದ್ದ ಅವರು 2009 ರಲ್ಲಿ ತಮ್ಮ ಪ್ರೊ ಕಾರ್ಡ್ ಅನ್ನು ಪಡೆಯುವ ಮೂಲಕ ವಿಶ್ವದ ಅತ್ಯುತ್ತಮ ತೆರೆದ ದೇಹದಾರ್ಢ್ಯಕಾರ ಪಟ್ಟಿಯಲ್ಲಿದ್ದರು.
2017ರಲ್ಲಿ ಓಹಿಯೋದಲ್ಲಿ ಜರುಗಿದ ಅರ್ನಾಲ್ಡ್ ಕ್ಲಾಸಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯಂತ ಸ್ಮರಣೀಯ ಗೆಲುವು ಸಾಧಿಸುವ ಮೂಲಕ ಅರ್ನಾಲ್ಡ ಅವರನ್ನು ಭೇಟಿಯಾಗಿ ಅವರಿಂದಲೇ ಪ್ರಶಸ್ತಿಯನ್ನು ಪಡೆದಿದ್ದರು. ಅರ್ನಾಲ್ಡ್ ಕ್ಲಾಸಿಕ್‌ನಲ್ಲಿ ಯಶಸ್ಸನ್ನು ಸಾಧಿಸಿದ್ದ ಅವರು, ಮಿಸ್ಟರ್ ಒಲಿಂಪಿಯಾ ಸ್ಪರ್ಧೆಯಲ್ಲಿ ಫೈನಲ್ ವರೆಗೂ ತಲುಪಿದ್ದರು.