
ಬೆಂಗಳೂರು, ನವೆಂಬರ್ 27: ಇಂಡಿಯನ್ ಆರ್ಮಿಯ ಹವಿಲ್ದಾರ್ ಅನುಜ್ ಕುಮಾರ್ ಅವರನ್ನು ಬೆಂಗಳೂರಿನಲ್ಲಿ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್(ಎಂಇಜಿ)ನ ಹಿರಿಯ ಆಧಿಕಾರಿಗಳು ಆದರದಿಂದ ಬರ ಮಾಡಿಕೊಂಡರು. ಸೌತ್ ಕೊರಿಯಾದಲ್ಲಿ ನಡೆದಿದ್ದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಅನುಜ್‌ಗೆ ಬಂಗಾರ ಲಭಿಸಿತ್ತು.
ಸೌತ್ ಕೊರಿಯಾದ ಜುಜು ಐಲ್ಯಾಂಡ್‌ನಲ್ಲಿ ನಡೆದಿದ್ದ 11ನೇ ವರ್ಲ್ಡ್ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ 100+ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸೈನಿಕ ಅನುಜ್‌ಗೆ ಚಿನ್ನದ ಪದಕ ಲಭಿಸಿತ್ತು. ಸ್ಪರ್ಧೆ ಮುಗಿಸಿ ಭಾರತಕ್ಕೆ ಆಗಮಿಸಿದ ಅನುಜ್ ಅವರನ್ನು ಎಂಇಜಿ ಅಧಿಕಾರಿಗಳು ಬೆಂಗಳೂರಿನಲ್ಲಿ ಸ್ವಾಗತಿಸಿದರು.
ಎಂಇಜಿ ಮೂಲಕ ಕುಮಾರ್, ಬಾಡಿ ಬಿಲ್ಡಿಂಗ್‌ನಲ್ಲಿ ಸ್ಪರ್ಧಿಸಿದ್ದರು. ಈ ಸ್ಪರ್ಧೆ ಕೊರಿಯಾದಲ್ಲಿ ನವೆಂಬರ್ 5-11ರ ವರೆಗೆ ನಡೆದಿತ್ತು. ಈ ಕ್ರೀಡಾ ಕೂಟದ ವರ್ಲ್ಡ್ ಬಾಡಿ ಬಿಲ್ಡಿಂಗ್ ಮತ್ತು ಫಿಸಿಕ್ ಸ್ಪೋರ್ಟ್ಸ್ ಚಾಂಪಿಯನ್‌ಷಿಪ್‌ನ ತಂಡ ವಿಭಾಗದಲ್ಲಿ ಭಾರತಕ್ಕೆ ದ್ವಿತೀಯ ಸ್ಥಾನ ಲಭಿಸಿತ್ತು.
ಇದೇ ಚಾಂಪಿಯನ್‌ಷಿಪ್‌ನಲ್ಲಿ ಚಿತರೇಶ್ ನಟೇಶನ್ ಕೂಡ ಮಿ. ಯೂನಿವರ್ಸ್ 2019 ಪ್ರಶಸ್ತಿ ಗೆದ್ದ ಮೊದಲ ಭಾರತೀಯನಾಗಿ ಗುರುತಿಸಿಕೊಂಡಿದ್ದಾರೆ.