ಟೋಕಿಯೋ ಒಲಿಂಪಿಕ್ಸ್: ಬಾಕ್ಸರ್ ಮನೀಶ್ ಕೌಶಿಕ್ ಪದಕದಾಸೆ ಭಗ್ನ

ಟೋಕಿಯೋ: ಭಾರತದ ಬಾಕ್ಸರ್ ಮನೀಶ್ ಕೌಶಿಕ್ (57-63 ಕೆಜಿ) ಟೋಕಿಯೋ ಒಲಿಂಪಿಕ್ಸ್ ಪುರುಷರ ಬಾಕ್ಸಿಂಗ್‌ನ ಆರಂಭಿಕ ಸುತ್ತಿನಲ್ಲಿ ಹೊರ ಬಿದ್ದಿದ್ದಾರೆ. ಗ್ರೇಟ್ ಬ್ರಿಟನ್‌ನ ಲ್ಯೂಕ್ ಮೆಕ್‌ಕಾರ್ಮಾಕ್ ಎದುರು ಕೌಶಿಕ್ 1-4ರ ಸೋಲನುಭವಿಸಿದ್ದಾರೆ. ಶನಿವಾರ ಭಾರತದ ಮತ್ತೊಬ್ಬ ಬಾಕ್ಸರ್ ವಿಕಾಸ್ ಕ್ರಿಶನ್ ಕೂಡ ಸೋತು ಹೊರ ನಡೆದಿದ್ದರು.
ಭಾನುವಾರ ನಡೆದ ಪುರುಷರ 63 ಕೆಜಿ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಮನೀಶ್ ಕೌಶಿಕ್ ಪರಾಭವಗೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಇದೇ ಚೊಚ್ಚಲ ಬಾರಿಗೆ ಸ್ಪರ್ಧಿಸಿದ್ದ ಮನೀಶ್ ಪದಕ ನಿರೀಕ್ಷೆಯಲ್ಲಿದ್ದರು. ಆದರೆ ಮನೀಶ್‌ಗೆ ನಿರಾಸೆಯಾಗಿದೆ.
ಕೌಶಿಕ್ ಮತ್ತು ಲ್ಯೂಕ್ ಮೆಕ್‌ಕಾರ್ಮಾಕ್ ಮಧ್ಯೆ ಜಿದ್ದಾಜಿದ್ದಿಯ ಕಾಳಗ ನಡೆಯಿತಾದರೂ ಅಂತಿಮ ಫಲಿತಾಂಶ ಬ್ರಿಟನ್ ಬಾಕ್ಸರ್ ಪರವಾಯ್ತು. ಭಾನುವಾರ ಇದಕ್ಕೂ ಮೊದಲು ನಡೆದ ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತದ ಖ್ಯಾತ ಬಾಕ್ಸರ್ ಮೇರಿ ಕೋಮ್ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
3ನೇ ದಿನ ಸಂಜೆ 6 PM ಹೊತ್ತಿಗೆ ಭಾರತದ ಪದಕ ಖಾತೆಯಲ್ಲಿ ಒಂದು ಪದಕ ಮಾತ್ರವಿತ್ತು. ಅದು ಆರಂಭಿಕ ದಿನ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಗೆದ್ದಿರುವ ಬೆಳ್ಳಿ ಪದಕ. ಅದು ಬಿಟ್ಟರೆ ಬೇರೆ ಪದಕ ಲಭಿಸಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications