Paris Olympics 2024: ಭಾರತಕ್ಕೆ ಪದಕ ಜಸ್ಟ್ ಮಿಸ್!
ಆಗಸ್ಟ್ 4 ಭಾನುವಾರ, ಪ್ಯಾರಿಸ್ ಒಲಿಂಪಿಕ್ಸ್ 202ರಲ್ಲಿ ಭಾರತ ಮತ್ತೊಂದು ಪದಕವನ್ನು ಅಲ್ಪ ಅಂತರದಿಂದ ಕಳೆದುಕೊಂಡಿದೆ. ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್-ಫೈನಲ್‌ನಲ್ಲಿ ಭಾರತದ ಸ್ಟಾರ್ ಬಾಕ್ಸರ್ ನಿಶಾಂತ್ ದೇವ್ ಸೋಲನುಭವಿಸಿದ್ದಾರೆ.
ತಮ್ಮ ಚೊಚ್ಚಲ ಒಲಿಂಪಿಕ್ಸ್ ಆಡುತ್ತಿರುವ ನಿಶಾಂತ್ ದೇವ್ ಅವರು ಮೆಕ್ಸಿಕೊದ ಬಾಕ್ಸರ್ ಮಾರ್ಕೊ ವರ್ಡೆ ವಿರುದ್ಧ 4-1 ಸೋಲನ್ನು ಎದುರಿಸಬೇಕಾಯಿತು. ಇದೀಗ ಕಂಚಿನ ಪದಕ ಗೆಲ್ಲಲು ನಿಶಾಂತ್ ದೇವ್ ತೀವ್ರ ಹೋರಾಟ ನಡೆಸಬೇಕಾಗಿದೆ.

ರೋಚಕ ಕ್ವಾರ್ಟರ್‌ಫೈನಲ್‌ನಲ್ಲಿನ ನಿಶಾಂತ್ ದೇವ್ ಸೋಲಿನೊಂದಿಗೆ, ಪ್ಯಾರಿಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕವನ್ನು ಖಚಿತಪಡಿಸುವ ಅವಕಾಶವನ್ನು ಕಳೆದುಕೊಂಡರು. ಕಠಿಣ ಸೆಮಿಫೈನಲ್ ಪಂದ್ಯದಲ್ಲಿ ನಿಶಾಂತ್ ಅವರನ್ನು ಎರಡನೇ ಶ್ರೇಯಾಂಕದ ಮೆಕ್ಸಿಕೊದ ಮಾರ್ಕೊ ವರ್ಡೆ ಸೋಲಿಸಿದರು.
ಈಗ ನಿಶಾಂತ್ ದೇವ್ 2022ರ ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಗ್ರೇಟ್ ಬ್ರಿಟನ್‌ನ ಲೂಯಿಸ್ ರಿಚರ್ಡ್‌ಸನ್ ಅವರನ್ನು ಎದುರಿಸಲಿದ್ದಾರೆ.
ಮೊದಲ ಸುತ್ತಿನಲ್ಲಿ ನಿಶಾಂತ್ ಮುನ್ನಡೆ ಸಾಧಿಸಿದ್ದರು . ಆದರೆ, ವರ್ಡೆ ಮರಳಿ ಬಂದು ಎರಡನೇ ಸುತ್ತಿನಲ್ಲಿ ಗೆದ್ದು ನಂತರ ಮೂರನೇ ಸುತ್ತಿನಲ್ಲಿ ಪ್ರಾಬಲ್ಯ ಸಾಧಿಸಿ ಪಂದ್ಯವನ್ನು ಗೆದ್ದರು.
ಟೋಕಿಯೊ 2020ರ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಈಗ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಬಾಕ್ಸಿಂಗ್‌ನಲ್ಲಿ ಭಾರತದ ಏಕೈಕ ಪದಕ ಗೆಲ್ಲುವ ಪ್ರಬಲ ಕ್ರೀಡಾಪಟುವಾಗಿದ್ದಾರೆ.
ದಾಖಲೆ ಬರೆಯುವ ಅವಕಾಶ ಮಿಸ್
ನಿಶಾಂತ್ ದೇವ್ ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಗೆದ್ದು ಇತಿಹಾಸ ಸೃಷ್ಟಿಸುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ. ನಿಶಾಂತ್ ಗೆದ್ದಿದ್ದರೆ, ವಿಜೇಂದರ್ ಸಿಂಗ್ ನಂತರ ಬಾಕ್ಸಿಂಗ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಎರಡನೇ ಪುರುಷ ಮತ್ತು ನಾಲ್ಕನೇ ಭಾರತೀಯ ಬಾಕ್ಸರ್ ಆಗುತ್ತಿದ್ದರು.
ಭಾರತದ ಸ್ಟಾರ್ ಬಾಕ್ಸರ್ ಎಂಸಿ ಮೇರಿ ಕೋಮ್ ಮತ್ತು ಲೊವ್ಲಿನಾ ಬೊರ್ಗೊಹೈನ್ ಒಲಿಂಪಿಕ್ ಪದಕ ಗೆದ್ದ ಇತರ ಭಾರತೀಯ ಮಹಿಳಾ ಬಾಕ್ಸರ್‌ಗಳಾಗಿದ್ದಾರೆ.
ಪ್ಯಾರಿಸ್‌ನಲ್ಲಿ ತಮ್ಮ ಚೊಚ್ಚಲ ಒಲಿಂಪಿಕ್ಸ್ ಅನ್ನು ಭಾರತದ ಬಾಕ್ಸರ್ ನಿಶಾಂತ್ ದೇವ್ ಅವರು ಅದ್ಭುತವಾಗಿ ಆರಂಭ ಮಾಡಿದರು . ಗುರುವಾರ ನಡೆದ ಪುರುಷರ 71 ಕೆಜಿ ವಿಭಾಗದ 16ರ ಸುತ್ತಿನ ಪಂದ್ಯದಲ್ಲಿ ನಿಶಾಂತ್ ಈಕ್ವೆಡಾರ್‌ನ ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು.
ನಿಶಾಂತ್ ದೇವ್ ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications