ಬಾಕ್ಸಿಂಗ್ ಲೋಕದ ದಿಗ್ಗಜ ಆಟಗಾರ ಜಾರ್ಜ್ ಫೋರ್‌ಮನ್ ಶುಕ್ರವಾರ ನಿಧನರಾಗಿದ್ದಾರೆ. ಇವರು ತಮ್ಮ 76ನೇ ವಯಸ್ಸಿನಲ್ಲಿ ನಿಧನರಾದರು. ಈ ಮಾಹಿತಿಯನ್ನು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಇವರ ಅಗಲಿಕೆಯಿಂದ ಬಾಕಿಂಗ್ ಲೋಕಕ್ಕೆ ಭಾರೀ ನಷ್ಟವಾಗಿದೆ. ಮಾರ್ಚ್ 21, 2025 ರಂದು ನಮ್ಮನ್ನು ಅಗಲಿದ ನಮ್ಮ ಪ್ರೀತಿಯ ಜಾರ್ಜ್ ಎಡ್ವರ್ಡ್ ಫೋರ್‌ಮನ್ ನಿಧನರಾಗಿದ್ದಾರೆ ಎಂದು ಘೋಷಿಸಲು ನಮಗೆ ತುಂಬಾ ದುಃಖವಾಗಿದೆ ಎಂದು ತಿಳಿಸಿದ್ದಾರೆ.
ಜಾರ್ಜ್ ಫೋರ್‌ಮನ್ ಸಾವಿನ ಸುದ್ದಿಯನ್ನು ತಿಳಿಸುವ ವೇಳೆ ಕುಟುಂಬಸ್ಥರು ಬರೆದ ಸಂದೇಶದಲ್ಲಿ, ಒಬ್ಬ ಧರ್ಮನಿಷ್ಠ, ಪ್ರೀತಿಯ ತಂದೆ, ಮಾನವತಾವಾದಿ, ಒಲಿಂಪಿಯನ್ ಮತ್ತು ಎರಡು ಬಾರಿ ವಿಶ್ವದ ಹೆವಿವೇಯ್ಟ್ ಚಾಂಪಿಯನ್ ಎಂದು ಬರೆದುಕೊಂಡಿದ್ದಾರೆ. ಅವರ ಜೀವನದ ಮೇಲಿನ ಪ್ರೀತಿ, ನಂಬಿಕೆಯಿಂದಲೆ ಜೀವನವನ್ನು ಸಾಗಿಸಿದರು. ಇವರು ಕುಟುಂಬಕ್ಕೆ ಯಾವಾಗಲೂ ಒಂದು ಶಕ್ತಿ ಆಗಿದ್ದರು ಎಂದು ಬರೆದುಕೊಂಡಿದ್ದಾರೆ.

ರಿಂಗ್‌ನಲ್ಲಿ ಪೋರ್‌ಮನ್ ಅಮೋಘ ಸ್ಕಿಲ್‌ಗಳಿಂದ ಹೆಸರುವಾಸಿ. ಇವರು ತಮ್ಮ ಅದ್ಭುತ ಅಂಕಿ ಅಂಶಗಳಿಂದ ಎಲ್ಲರ ಗಮನ ಸೆಳೆದ ಆಟಗಾರ. ಇವರು ತಮ್ಮ ವೃತ್ತಿ ಜೀವನದಲ್ಲಿ ಈ ವರೆಗೆ 81 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 76 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಇವರು ತಮ್ಮ ವೃತ್ತಿ ಜೀವನದಲ್ಲಿ 68 ಪಂದ್ಯಗಳನ್ನು ನಾಕೌಟ್ ಮೂಲಕವೇ ಗೆದ್ದಿದ್ದರು. 1974 ರಲ್ಲಿ 'ರಂಬಲ್ ಇನ್ ದಿ ಜಂಗಲ್' ನಲ್ಲಿ ಜಾರ್ಜ್ ಫೋರ್‌ಮನ್ ಶ್ರೇಷ್ಠ ಬಾಕ್ಸರ್ ಮುಹಮ್ಮದ್ ಅಲಿ ಅವರಿಗೆ ಜಾರ್ಜ್ ಫೋರ್‌ಮನ್ ಕಾದಾಟ ಅಭಿಮಾನಿಗಳನ್ನು ಸೆಳೆದಿತ್ತು. ಅಲಿ ವಿರುದ್ಧ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಸೋಲನ್ನು ಕಾಣಬೇಕಾಗಿತ್ತು.
ಮುಹಮ್ಮದ್ ಅಲಿ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ಜಾರ್ಜ್ ರಿಂಗ್‌ಗೆ ಗುಡ್ ಬಾಯ್ ಹೇಳಿ ಗ್ಲೌಸ್‌ಗಳನ್ನು ಬಿಚ್ಚಿಡುವ ನಿರ್ಧಾರವನ್ನು ಮಾಡಿದರು. ಅಲಿ ವಿರುದ್ಧದ ಪಂದ್ಯದ ಬಳಿಕ ಇವರು ಹೆಚ್ಚಿನ ಪಂದ್ಯಗಳನ್ನು ಆಡಲಿಲ್ಲ. ತಮ್ಮ 28ನೇ ವಯಸ್ಸಿನಲ್ಲಿ ಕ್ರೀಡೆಗೆ ವೃತ್ತಿ ಘೋಷಿಸಿದರು.