For Quick Alerts
ALLOW NOTIFICATIONS  
For Daily Alerts

ಜಗದೇಕ ಬಾಕ್ಸಿಂಗ್ ವೀರ ಮೇವೆದರ್ ಗೆ ಸಕತ್ ಪಂಚ್

By Mahesh

ಬೆಂಗಳೂರು, ಜುಲೈ 07: ಶತಮಾನದ ಬಿಗ್ ಬಾಕ್ಸಿಂಗ್ ಫೈಟ್ ಗೆದ್ದ ಫ್ಲಾಯ್ಡ್ ಮೇವೆದರ್‌ ಜಗದೇಕ ಬಾಕ್ಸಿಂಗ್ ಪಟು ಫ್ಲಾಯ್ಡ್ ಮೇವೆದರ್ ಗೆ ವಿಶ್ವ ಬಾಕ್ಸಿಂಗ್ ಸಂಘಟನೆ(WBO) ಸಕತ್ ಪಂಚ್ ಕೊಟ್ಟಿದೆ. ಮ್ಯಾನಿ ಪ್ಯಾಕ್ವಿಯೋ ಸೋಲಿಸಿ ಗೆದ್ದಿದ್ದ ಹಣದ

ವಿಶ್ವವೇ ಕುತೂಹಲಕಾರಿಯಾಗಿ ವೀಕ್ಷಿಸಿದ್ದ ಬಾಕ್ಸಿಂಗ್ ಪಂದ್ಯದಲ್ಲಿ ಫ್ಲಾಯ್ಡ್ ಮೇವೆದರ್‌ ಅವರು 12ನೇ ಸುತ್ತಿನ ನಂತರ ಮ್ಯಾನಿ ಪ್ಯಾಕ್ವಿಯೋ ಅವರನ್ನು ಮಣಿಸಿ ಭಾರಿ ಮೊತ್ತದ ಬಹುಮಾನ ಗೆದ್ದಿದ್ದರು. ಈ ಮೂಲಕ 1142 ಕೋಟಿ ರು ಬಹುಮಾನ ಮೊತ್ತ ಜೇಬಿಗಿಳಿಸಿಕೊಂಡಿದ್ದರು. ಆದರೆ, 200,000 ಯುಎಸ್ ಡಾಲರ್ ಅನುದಾನ ಮೊತ್ತವನ್ನು ಮೇವೆದರ್ ವಿಶ್ವ ಬಾಕ್ಸಿಂಗ್ ಸಂಘಟನೆಗೆ ಪಾವತಿಸಬೇಕಿತ್ತು.

Mayweather

ಅದರೆ, ಮೇವೆದರ್ ಮೊತ್ತವನ್ನು ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಹಾಗೂ ನಿಯಮಗಲನ್ನು ಪಾಲಿಸದ ಕಾರಣ ಅವರ ಕೈಯಿಂದ ವಿಶ್ವ ಬ್ಯಾಕ್ಸಿಂಗ್ ಪದಕವನ್ನು ಹಿಂದಕ್ಕೆ ಪಡೆಯಲಾಗಿದೆ. ವಿವಿಧ ವಿಭಾಗಳಲ್ಲಿ ಪ್ರಶಸ್ತಿ ಗೆದ್ದಿದ್ದರೆ ಗರಿಷ್ಠ ಪ್ರಮಾಣದ ಪ್ರಶಸ್ತಿ ಮೊತ್ತ ಹಾಗೂ ಪದಕವನ್ನು ಉಳಿಸಿಕೊಂಡು ಮಿಕ್ಕಿದ್ದನ್ನು ಹಿಂತಿರುಗಿಸಬೇಕು ಎಂಬ ನಿಯಮವಿದೆ. ಆದರೆ, ಮೇವೆದರ್ ಈ ನಿಯಮ ಮೀರಿದ್ದಾರೆ.

ವಿಶ್ವದೆಲ್ಲೆಡೆ ಸುಮಾರು 1400 ಕೋಟಿ ರುಪಾಯಿಗಳ ಬೆಟ್ಟಿಂಗ್ ನಡೆಸಲಾಗಿತ್ತು. ಈ ಸ್ಪರ್ಧೆಯಿಂದ ಒಟ್ಟು 2400 ಕೋಟಿ ರು ಆದಾಯ ಬಂದಿತ್ತು. ಈಗ ಮೇವೆದರ್ ಅವರಿಗೆ ತಮ್ಮ ಪ್ರಶಸ್ತಿ ಪದಕ ಉಳಿಸಿಕೊಳ್ಳಲು ಎರಡು ವಾರಗಳ ಕಾಲಾವಕಾಶವಿದೆ. ಬಾಕ್ಸಿಂಗ್ ರಿಂಗ್ ನಲ್ಲಿ ಎದುರಾಳಿಯನ್ನು ಚೆಚ್ಚಿ ಬಿಸಾಡುವ ಮೇವೆದರ್ ಗೆ ಈ ನಿಯಮಗಳ ಪಂಚ್ ಭಾರಿ ಪೆಟ್ಟು ನೀಡಿದೆ.

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+