ಬಜೆಟ್: ಕೇಂದ್ರದಿಂದ 'ನ್ಯಾಷನಲ್ ಸ್ಪೋರ್ಟ್ಸ್ ಎಜುಕೇಶನ್ ಬೋರ್ಡ್' ರಚನೆ

ನವದೆಹಲಿ, ಜುಲೈ 5: 'ಖೇಲೋ ಇಂಡಿಯಾ' ಕಾರ್ಯಕ್ರಮದಡಿಯಲ್ಲಿ ನ್ಯಾಷನಲ್ ಸ್ಪೋರ್ಟ್ಸ್ ಎಜುಕೇಶನ್ ಬೋರ್ಡ್ ಸ್ಫಾಪಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ (ಜುಲೈ 5) ಹೇಳಿದ್ದಾರೆ. 2019ರ ಬಜೆಟ್ ಮಂಡಣೆ ವೇಳೆ ನಿರ್ಮಲಾ ಈ ವಿಚಾರ ತಿಳಿಸಿದರು.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಪಾರ್ಲಿಮೆಂಟಿನಲ್ಲಿ 2019-20ರ ಬಜೆಟ್ ಮಂಡಿಸುತ್ತ ನಿರ್ಮಲಾ, 'ಖೇಲೋ ಇಂಡಿಯಾ' ಅಡಿಯಲ್ಲಿ ಕ್ರೀಡಾಪಟುಗಳ ಅಭಿವೃದ್ಧಿಗಾಗಿ ಮತ್ತು ಎಲ್ಲಾ ವಿಧದ, ಎಲ್ಲಾ ಹಂತದ ಕ್ರೀಡೆಗಳ ಜನಪ್ರಿಯತೆಗಾಗಿ ನ್ಯಾಷನಲ್ ಸ್ಪೋರ್ಟ್ಸ್ ಎಜುಕೇಶನ್ ಬೋರ್ಡ್ (ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ) ರಚಿಸಲು ನಿರ್ಧರಿಸಲಾಗಿದೆ' ಎಂದರು.
ಕ್ರೀಡಾಪಟುಗಳು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರ ಖೇಲೋ ಇಂಡಿಯಾ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ. ಇದೇ ಕಾರ್ಯಕ್ರಮದ ಉಪಕ್ರಮವಾಗಿ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ ಸ್ಥಾಪನೆಗೊಳ್ಳಲಿದೆ.
2017ರಲ್ಲಿ ಸ್ಥಾಪನೆಯಾಗಿರುವ ಖೇಲೋ ಇಂಡಿಯಾ ಯೋಜನೆ ಕ್ರೀಡೆಯ ಬಗ್ಗೆ ಅರಿವು ಮೂಡಿಸುವಲ್ಲಿ, ಕ್ರೀಡೆಯನ್ನು ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ. ದೇಶದಾದ್ಯಂತ ಕ್ರೀಡೆಯನ್ನು ಇನ್ನಷ್ಟು ಪ್ರಚುರಗೊಳಿಸಲು ಅಗತ್ಯ ಸಂಪನ್ಮೂಪವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications