Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಿ ಗೆದ್ದ ವಿಶ್ವದ ಅತ್ಯಂತ ಕಿರಿಯ ಚಾಣ‍ಕ್ಷ ಆಟಗಾರ ಯಾರು ಗೊತ್ತೆ?

ಜಗತ್ತೇ ನಿಬ್ಬೆರಗಾಗುವಂತೆ 17 ವರ್ಷದ ಚೆಸ್‌ ಆಟಗಾರನೊಬ್ಬ ದಾಖಲೆ ನಿರ್ಮಿಸಿದ್ದಾರೆ. ಕೆನಡದ ಟೊರೆಂಟೊದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಮೆಂಟ್‌ ಗೆಲ್ಲುವ ಮೂಲಕ ಭಾರತದ ತಮಿಳುನಾಡು ಮೂಲದ ಚೆಸ್‌ ಆಟಗಾರ ಡಿ. ಗುಕೇಶ್‌ ಅವರು ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿದ್ದಾರೆ.

ಹದಿಯರೆಯದ ವಯಸ್ಸಿನಲ್ಲಿ ವಿಶ್ವ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಡಿ.ಗುಕೇಶ್‌ ಅತ್ಯಂತ ಕಿರಿಯ ಚೆಸ್‌ ಆಟಗಾರ ಎಂಬ ಸಾಧನೆ ಮಾಡಿದ್ದು, ಚೆಸ್‌ ದಂತಕಥೆ ವಿಶ್ವನಾಥನ್‌ ಆನಂದ್‌ ನಂತರ ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಮೆಂಟ್‌ ಗೆದ್ದ ಎರಡನೇ ಭಾರತೀಯ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

Candidates Chess Tournament win by World youngest chess player

ಅಂತಿಮ ಸುತ್ತಿನಲ್ಲಿ ಅಮೆರಿಕ ಹಿಕರು ನಕಮುರಾ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಂಡ ಗುಕೇಶ್‌ ನಂತರ ಒಟ್ಟು 14 ಅಂಕಗಳಲ್ಲಿ ಒಂಬತ್ತು ಅಂಕಗಳನ್ನು ಗಳಿಸಿ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಈ ವರ್ಷದ ಕೊನೆಯಲ್ಲಿ ಗುಕೇಶ್‌ ತಮ್ಮ ಮುಂದಿನ ಮಹತ್ವದ ಪಂದ್ಯವಾಗಿರುವ ವಿಶ್ವ ಚಾಂಪಿಯನ್‍ಷಿಪ್‍ನಲ್ಲಿ ಚೀನಾದ ಡಿಂಗ್ ಲಿರೆನ್ ವಿರುದ್ಧ ಸೆಣಸಾಡಲಿದ್ದಾರೆ.

ಈವರೆಗೆ ಚೆಸ್‌ನಲ್ಲಿ ಡಿ.ಗುಕೇಶ್‌ ಸಾಧನೆ :

ಬಾಲ್ಯದಿಂದಲೂ ಚೆಸ್‌ನಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡು ಆಕಾಶದೆತ್ತರದ ಸಾಧನೆ ಕಡೆ ಮುಖ ಮಾಡಿರುವ ಡಿ.ಗುಕೇಶ್‌ ತಮ್ಮ 12ನೇ ವಯಸ್ಸಿನಲ್ಲೆ ಗ್ರ್ಯಾಂಡ್‌ ಮಾಸ್ಟರ್‌ ಪಟ್ಟವನ್ನು ಅಲಂಕರಿಸಿದ್ದು, ಇದಕ್ಕೂ ಮುನ್ನ ಹಲವು ಪ್ರಶಸ್ತಿಗಳನ್ನು ಎತ್ತಿಹಿಡಿದ್ದಾರೆ.

2015 ರಲ್ಲಿ ನಡೆದ ಏಷ್ಯನ್‌ ಸ್ಕೂಲ್‌ ಚೆಸ್‌ ಚಾಂಪಿಯನ್‌ ಶಿಪ್‌ನ 9 ವರ್ಷದೊಳಗಿನವರ ವಿಭಾಗದಲ್ಲಿ ಮತ್ತು 2018ರ ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ ಶಿಪ್‌ನ 12 ವರ್ಷದೊಳಗಿನವರ ವಿಭಾಗದಲ್ಲಿ ಗೆಲುವು ಸಾಧಿಸಿದ್ದಾರೆ. ಜೊತೆಗೆ 2018ರ ಏಷ್ಯಾನ್‌ ಯೂತ್‌ ಚೆಸ್‌ ಚಾಂಪಿಯನ್‌ ಶಿಪ್‌ಗಳಲ್ಲಿ ಒಟ್ಟು ಐದು ಚಿನ್ನದ ಪದಕಗಳನ್ನು ತಮ್ಮಗಿಸಿಕೊಂಡಿದ್ದಾರೆ. 2017 ರಲ್ಲಿ 34ನೇ ಕ್ಯಾಪೆಲ್ಲೆ-ಲಾ-ಗ್ರ್ಯಾಂಡೆ ಓಪನ್‌ ಟೂರ್ನಮೆಂಟ್‌ನಲ್ಲಿ ಜಯ ದಾಖಲಿಸಿದ್ದಾರೆ.

Story first published: Monday, April 22, 2024, 16:32 [IST]
Other articles published on Apr 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+