ಸಾಧನೆಯ ಹಾದಿಯಲ್ಲಿ ಹಾಸನದ ಚಾರ್ವಿಗೆ ವಿಶ್ವ ಚೆಸ್ ಚಾಂಪಿಯನ್ ಗರಿಮೆ
ಹಾಸನ ಮೂಲದ ಕುಮಾರಿ ಚಾರ್ವಿ ಎ. ಅವರು 8 ವರ್ಷದೊಳಗಿನವರ ವಿಶ್ವ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ 'ವಿಶ್ವ ಚೆಸ್ ಚಾಂಪಿಯನ್' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭಾರತದ ಚಾರ್ವಿ ಅವರು ಜಾರ್ಜಿಯಾದ ಬಟುಮಿಯಲ್ಲಿ ನಡೆದ ಪ್ರತಿಷ್ಠಿತ '2022ರ ಚಾಂಪಿಯನ್‌ಶಿಪ್'ನಲ್ಲಿ ಮೊದಲ ಸ್ಥಾನದಲ್ಲಿ ಗೆದ್ದು ಜಾಗತಿಕ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಕುಮಾರಿ ಚಾರ್ವಿ ಎ. ಅವರು ಈ ಹಿಂದೆ ಶ್ರೀಲಂಕಾದಲ್ಲಿ ನಡೆದ 2022ರ ಚಾಂಪಿಯನ್‌ಶಿಪ್‌ನಲ್ಲಿ ಅಂಡರ್-8 ಕಾಮನ್ವೆಲ್ತ್ ಚೆಸ್ ಚಾಂಪಿಯನ್ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. ಅಲ್ಲದೆ, 2022ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಏಷ್ಯನ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಐದು ಚಿನ್ನದ ಪದಕಗಳನ್ನು ಮತ್ತು ಒಂದು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
2021 ಮತ್ತು 2022ರಲ್ಲಿ ನಡೆದ ವಿವಿಧ ಚಾಂಪಿಯನ್‌ಶಿಪ್‌ಗಳಲ್ಲಿನ ಅಂಡರ್-7, ಅಂಡರ್-8, ಮತ್ತು ಅಂಡರ್-10 ರಾಷ್ಟ್ರೀಯ ಚೆಸ್ ಚಾಂಪಿಯನ್ ಆಗಿ ಅವರು ಹೊರಹೊಮ್ಮಿದ್ದಲ್ಲದೆ, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಚಾರ್ವಿ ರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಪ್ರಾಬಲ್ಯವನ್ನು ಸಣ್ಣ ವಯಸ್ಸಿನಲ್ಲಿಯೇ ಸಾಬೀತುಪಡಿಸಿದ್ದಾರೆ.
ಚಾರ್ವಿ ಪ್ರಸ್ತುತ ಒಟ್ಟು ನಾಲ್ಕು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದು ಈ ಸಣ್ಣ ವಯಸ್ಸಿಗೆ ಗಮನಾರ್ಹ ಸಾಧನೆಯಾಗಿದೆ.
2022ರಲ್ಲಿ ಚಾರ್ವಿ ಆರು ಪ್ರಶಸ್ತಿಗಳನ್ನು ಗಳಿಸಿದ್ದಲ್ಲದೆ, ಕ್ರೀಡಾ ಜಗತ್ತಿನಲ್ಲಿ ದಾಖಲೆಯನ್ನು ಸ್ಥಾಪಿಸಿದರು. ಇದಲ್ಲದೆ, ಅವರು ಪ್ರಸ್ತುತ ಅಂಡರ್-8 ಮತ್ತು ಅಂಡರ್-10 ನ ಬಾಲಕಿಯರ ವಿಭಾಗದಲ್ಲಿ ಭಾರತದ ನಂ.1 ಶ್ರೇಯಾಂಕದ ಚೆಸ್ ಆಟಗಾರ್ತಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications