Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ

 Chennai’s Praggnanandhaa becomes world’s second youngest Grand Master

ಚೆನ್ನೈ, ಜೂನ್ 24: ಚೆನ್ನೈ ಮೂಲದ ಭಾರತದ ಆರ್. ಪ್ರಜ್ಞಾನಂದ ಅವರು ದೇಶದ ಕಿರಿಯ ಹಾಗೂ ವಿಶ್ವದ ಎರಡನೇ ಕಿರಿಯ ಚೆಸ್ ಗ್ರಾಂಡ್‌ಮಾಸ್ಟರ್ ಎಂಬ ಕೀರ್ತಿ ಗಳಿಸಿದ್ದಾರೆ.

ಇಟಲಿಯಲ್ಲಿ ನಡೆಯುತ್ತಿರುವ ಗ್ರೆಂಡೈನ್ ಓಪನ್‌ನಲ್ಲಿ ಫೈನಲ್ ಸುತ್ತಿಗೆ ಪ್ರಜ್ಞಾನಂದ ತಲುಪಿದ್ದಾರೆ. 12 ವರ್ಷ, 10 ತಿಂಗಳು ಹಾಗೂ 13 ದಿನ ವಯಸ್ಸಿನ ಪ್ರಜ್ಞಾನಂದ ಅವರು ಚೆನ್ನೈ ಮೂಲದವರಾಗಿದ್ದಾರೆ.

ಚೆನ್ನೈ ಮೂಲದ ಆಟಗಾರ ಪ್ರಜ್ಞಾನಂದ ಫೈನಲ್ ಸುತ್ತಿನಲ್ಲಿ ಗ್ರಾಂಡ್‌ಮಾಸ್ಟರ್ ಪ್ರಜ್‌ಸರ್ಸ್ ರೊಲ್ಯಾಂಡ್ ವಿರುದ್ಧ ಆಡಲಿದ್ದು ಇದು ಅವರ ಪ್ರಶಸ್ತಿಯನ್ನು ಖಚಿತಪಡಿಸಿದೆ.

8ನೇ ಸುತ್ತಿನಲ್ಲಿ ಜಿಎಂ ಮೊರೊನಿ ಲಿಕಾ ಜೂನಿಯರ್‌ರನ್ನು ಸೋಲಿಸಿದ ಪ್ರಜ್ಞಾನಂದ ಅವರು, 2482 ರೇಟಿಂಗ್‌ಗಿಂತ ಹೆಚ್ಚಿರುವ ಆಟಗಾರರೊಂದಿಗೆ ಫೈನಲ್‌ನಲ್ಲಿ ಆಡುವ ಅವಕಾಶ ಗಳಿಸಿದರೆ, ಮೂರನೇ ಗ್ರಾಂಡ್‌ಮಾಸ್ಟರ್ ಮಾನದಂಡ ಪಡೆಯಬಹುದಾಗಿತ್ತು. 2514 ರೇಟಿಂಗ್ ಹೊಂದಿರುವ ರೊಲ್ಯಾಂಡ್ ಅವರು ಪ್ರಜ್ಞಾನಂದರ ಫೈನಲ್ ಎದುರಾಳಿಯಾಗಿದ್ದಾರೆ.

ಅಂಗವಿಕಲರ ಐಪಿಸಿಎ ವಿಶ್ವ ಚೆಸ್‌ ಚಾಂಪಿಯನ್ ಷಿಪ್ ನಲ್ಲಿ ಸಮರ್ಥ ಭಾಗಿ

ಉಕ್ರೇನ್‌ನ ಸರ್ಗಿ ಕರ್ಜಾಕಿನ್ ವಿಶ್ವದ ಅತ್ಯಂತ ಕಿರಿಯ ಗ್ರಾಂಡ್ ಮಾಸ್ಟರ್ ಆಗಿದ್ದು, 2002ರಲ್ಲಿ 12 ವರ್ಷ, 7 ತಿಂಗಳಲ್ಲಿ ಈ ಸಾಧನೆ ಮಾಡಿದ್ದರು. ಪ್ರಜ್ಞಾನಂದ 10 ವರ್ಷ, 10 ತಿಂಗಳು ಹಾಗೂ 19 ದಿನಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಂಟರ್‌ನ್ಯಾಶನಲ್ ಮಾಸ್ಟರ್ ಪ್ರಶಸ್ತಿ ಗಳಿಸಿದ್ದರು. ದೇಶದ ಮೊದಲ ಗ್ರಾಂಡ್‌ಮಾಸ್ಟರ್, ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ಪ್ರಜ್ಞಾನಂದ ಸಾಧನೆಯನ್ನು ಮೆಚ್ಚಿದ್ದಾರೆ.

Story first published: Monday, June 25, 2018, 13:58 [IST]
Other articles published on Jun 25, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+