'ಚಿನ್ನದ ಹುಡುಗ' ನೀರಜ್ ಚೋಪ್ರಾಗೆ 1 ಕೋಟಿ ಮತ್ತು ವಿಶೇಷ ಜೆರ್ಸಿ ಉಡುಗೊರೆ ನೀಡಿದ ಸಿಎಸ್‌ಕೆ

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾ ಪಟು ನೀರಜ್ ಚೋಪ್ರಾ ಆಗಸ್ಟ್ 7ರಂದು ನಡೆದಿದ್ದ ಪುರುಷರ ಜಾವೆಲಿನ್ ಥ್ರೋ ಫೈನಲ್ ಸುತ್ತಿನಲ್ಲಿ ಚಿನ್ನದ ಪದಕ ಗೆಲ್ಲುವುದರ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ನೂತನ ದಾಖಲೆಯನ್ನು ಸೃಷ್ಟಿಸಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಅಥ್ಲೆಟಿಕ್ಸ್ ವಿಭಾಗದಲ್ಲಿ ಅದುವರೆಗೂ ಭಾರತ ಯಾವುದೇ ಚಿನ್ನದ ಪದಕವನ್ನು ಗೆದ್ದಿರಲಿಲ್ಲ. ಆದರೆ ಅದೇ ಮೊದಲ ಬಾರಿಗೆ ನೀರಜ್ ಚೋಪ್ರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದ್ದರು.
ಹೀಗೆ ಒಲಿಂಪಿಕ್ಸ್ ಹುಟ್ಟಿದಾಗಿನಿಂದಲೂ ಭಾರತದ ಯಾವುದೇ ಅಥ್ಲೀಟ್ ಮಾಡದ ಸಾಧನೆ ಮಾಡಿದ ಭಾರತದ ನೀರಜ್ ಚೋಪ್ರಾಗೆ ದೇಶದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಕೇವಲ ಶುಭಾಶಯಗಳು ಮಾತ್ರವಲ್ಲದೇ ನೀರಜ್ ಚೋಪ್ರಾಗೆ ವಿವಿಧ ಸಂಸ್ಥೆಗಳು ಮತ್ತು ವಿವಿಧ ರಾಜ್ಯ ಸರಕಾರಗಳು ನಗದು ಪುರಸ್ಕಾರ ಮತ್ತು ಬಹುಮಾನಗಳನ್ನು ಘೋಷಿಸಿ ನೀರಜ್ ಚೋಪ್ರಾ ಮಾಡಿರುವ ಸಾಧನೆಗೆ ಗೌರವ ಸೂಚಿಸಿದ್ದವು.
ಹೀಗೆ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದ ನೀರಜ್ ಚೋಪ್ರಾಗೆ ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫ್ರಾಂಚೈಸಿಗಳಲ್ಲೊಂದಾದ ಚೆನ್ನೈ ಸೂಪರ್ ಕಿಂಗ್ಸ್ ವಿಶೇಷ ಗೌರವ ಧನ ನೀಡುವುದಾಗಿ ಮತ್ತು ವಿಶೇಷ ಜರ್ಸಿಯನ್ನು ತಯಾರಿಸುವುದಾಗಿ ಘೋಷಣೆಯನ್ನು ಮಾಡಿತ್ತು. ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆದ್ದ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ಘೋಷಣೆಯನ್ನು ಹೊರಡಿಸಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಯಶಸ್ವಿ ತಂಡ ಎಂದು ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಕೂಡ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದ ನೀರಜ್ ಚೋಪ್ರಾಗೆ ನಗದು ಪುರಸ್ಕಾರವನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಚಿನ್ನದ ಪದಕ ಗೆದ್ದು ಇಡೀ ಭಾರತಕ್ಕೆ ಹೆಮ್ಮೆ ತಂದಿರುವ ನೀರಜ್ ಚೋಪ್ರಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ಕೋಟಿ ನಗದು ಪುರಸ್ಕಾರವನ್ನು ನೀರಜ್ ಚೋಪ್ರಾಗೆ ಘೋಷಿಸಿತ್ತು.
ಅಂದು ತಾವು ಹೊರಡಿಸಿದ ಘೋಷಣೆಯಂತೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀರಜ್ ಚೋಪ್ರಾ ಅವರನ್ನು ಭೇಟಿ ಮಾಡಿದ್ದು 1 ಕೋಟಿ ನಗದು ಪುರಸ್ಕಾರದ ಜೊತೆಗೆ ವಿಶೇಷವಾದ ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದೆ.
ಹೀಗೆ ನೀರಜ್ ಚೋಪ್ರಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿರುವ ವಿಶೇಷ ಜೆರ್ಸಿಯ ಹಿಂದೆ ನೀರಜ್ 8758 ಎಂದು ಬರೆಯಲಾಗಿದೆ. ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಅಂತರಕ್ಕೆ ಜಾವೆಲಿನ್ ಎಸೆದಿದ್ದರು. ಈ ಕಾರಣದಿಂದ ಚೆನ್ನೈ ಸೂಪರ್ ಕಿಂಗ್ಸ್ 8758 ಸಂಖ್ಯೆಯನ್ನು ನೀರಜ್ ಚೋಪ್ರಾಗಾಗಿ ವಿಶೇಷವಾಗಿ ರಚಿಸಿರುವ ಜೆರ್ಸಿಯ ಹಿಂದೆ ಮುದ್ರಿಸಿದೆ.
"ನೀರಜ್ ಅವರ ಅದ್ಭುತ ಸಾಧನೆಗಾಗಿ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ. ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಪದಕ (ಚಿನ್ನ) ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು ಮುಂದಿನ ಪೀಳಿಗೆಗೆ ಒಂದು ಮಾನದಂಡವನ್ನು ಸ್ಥಾಪಿಸಿದ್ದಾರೆ. 87.58 ಭಾರತೀಯ ಕ್ರೀಡಾ ಇತಿಹಾಸದಲ್ಲಿ ಶಾಶ್ವತವಾಗಿ ಅಚ್ಚಳಿಯದ ಸಂಖ್ಯೆಯಾಗಿದೆ ಮತ್ತು ನೀರಜ್ ಅವರಿಗೆ ಈ ವಿಶೇಷ ಜೆರ್ಸಿಯನ್ನು ಉಡುಗೊರೆಯಾಗಿ ನೀಡುವುದು ನಮಗೆ ಗೌರವವಾಗಿದೆ. ಅವರು ರಾಷ್ಟ್ರಕ್ಕೆ ಇನ್ನಷ್ಟು ಕೀರ್ತಿ ತರಲಿ ಎಂದು ಹಾರೈಸುತ್ತೇವೆ" ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕೆ.ಎಸ್ ವಿಶ್ವನಾಥನ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications