'ಚದುರಂಗದ ಕಿಂಗ್' ಗ್ಯಾರಿ ಕ್ಯಾಸ್ಪರೋವ್ ಮತ್ತೆ ಎಂಟ್ರಿǃ
ಬೆಂಗಳೂರು, ಜುಲೈ : ವಿಶ್ವ ಚದುರಂಗ ಲೋಕವನ್ನು ಸುಮಾರು 15ಕ್ಕೂ ಅಧಿಕ ವರ್ಷಗಳ ಕಾಲ ಆಳಿ, ಕಿಂಗ್ ಎನಿಸಿಕೊಂಡಿದ್ದ ಗ್ಯಾರಿ ಕ್ಯಾಸ್ಪರೋವ್ ಅವರು ಈಗ ಮತ್ತೊಮ್ಮೆ ರೀ ಎಂಟ್ರಿ ಕೊಡುತ್ತಿದ್ದಾರೆ.
2005ರಲ್ಲಿ ಚೆಸ್ ಲೋಕಕ್ಕೆ ವಿದಾಯ ಹೇಳಿದ್ದ ಗ್ಯಾರಿ ಅವರು ಮುಂದಿನ ತಿಂಗಳು ಯುಎಸ್ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ನಂ.1 ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್, ಹೈಕರು ನಕುಮರಾ ಮುಂತಾದವರು ಈ ಟೂರ್ನಮೆಂಟ್ ನಲ್ಲಿ ಆಡಲಿದ್ದಾರೆ.

54 ವರ್ಷ ವಯಸ್ಸಿನ ಕ್ಯಾಸ್ಪರೋವ್ ಅವರು ಚದುರಂಗ ಕ್ಷೇತ್ರದಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಕ್ಯಾಸ್ಪರೋವ್ ನಂತರದ ಸ್ಥಾನದಲ್ಲಿ 47 ವರ್ಷ ವಯಸ್ಸಿನ ಭಾರತದ ವಿಶ್ವನಾಥನ್ ಆನಂದ್ ಇದ್ದಾರೆ.
1985ರಲ್ಲಿ ತಮ್ಮ 22ನೇ ವಯಸ್ಸಿನ ಸೋವಿಯೆಟ್ ನ ಗ್ರ್ಯಾನ್ ಮಾಸ್ಟರ್ ಅನತೋಲಿ ಕಾರ್ಪೊವ್ ಅವರನ್ನು ಸೋಲಿಸುವ ಮೂಲಕ ಸ್ಟಾರ್ ಆಗಿ ಬೆಳೆದ ಕ್ಯಾಸ್ಪರೋವ್ ಅವರು ವಿಶ್ವ ಚದುರಂಗ ಕ್ಷೇತ್ರದಲ್ಲಿ ಅನೇಕ ವರ್ಷಗಳ ಕಾಲ ಮಿಂಚಿದವರು. ಅಜರ್ ಬೈಜಾನ್ ನಲ್ಲಿ ಜನಿಸಿದ ಕ್ಯಾಸ್ಪರೋವ್ ಅವರು 2008ರಲ್ಲಿ ರಷ್ಯಾದ ಅಧ್ಯಕ್ಷೀಯ ಚುನಾವಣೆಗೂ ಸ್ಪರ್ಧಿಸಿದ್ದರು. ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications