Chess World Cup 2023 Final: ಟೈಬ್ರೇಕರ್‌ನಲ್ಲಿ ಎಡವಿದ ಪ್ರಜ್ಞಾನಂದ: ಕಾರ್ಲ್ಸನ್ ಚಾಂಪಿಯನ್
FIDE ವಿಶ್ವಕಪ್ ಫೈನಲ್ ಟೈಬ್ರೇಕರ್‌ನಲ್ಲಿ ಭಾರತದ ಪ್ರಜ್ಞಾನಂದ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಸೋಲು ಕಂಡಿದ್ದಾರೆ. ಈ ಮೂಲಕ ನಾರ್ವೆಯ ದಿಗ್ಗಜ ಆಟಗಾರ ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ಚಾಂಪಿಯನ್ ಪಟ್ಟವನ್ನು ಅಲಂಕರಿಸುವವರು ಯಾರು ಎಂದು ನಿರ್ಧರಿಸುವ ಈ ಟೈಬ್ರೇಕರ್ ತೀವ್ರ ಪೈಪೊಟಿಯಿಂದ ಕೂಡಿತ್ತು. ಈ ನಿರ್ಣಾಯಕ ಸೆಣೆಸಾಟದಲ್ಲಿ ಚೆಸ್‌ನ ಸಾರ್ವಕಾಲಿಕ ಶ್ರೇಷ್ಠ ಎನಿಸಿಕೊಳ್ಳುವ ಕಾರ್ಲ್ಸನ್ ತನ್ನ ಅನುಭವದ ಆಟವನ್ನು ಆಡುವ ಮೂಲಕ ಭಾರತದ 18ರ ಹರೆಯದ ಯುವ ಆಟಗಾರನಿಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೈಪೋಟಿ ನೀಡಿದ ಪ್ರಜ್ಞಾನಂದ
ಮೊದಲ ರ್ಯಾಪಿಡ್‌ನಲ್ಲಿ ಪ್ರಜ್ಞಾನಂದ ವಿರುದ್ಧ ಕಾರ್ಲ್ಸನ್ ಗೆಲುವು ಸಾಧಿಸುವ ಮೂಲಕ 1-0 ಅಂತರದ ಮುನ್ನಡೆ ಸಾಧಿಸಿ ಮೇಲುಗೈ ಸಾಧಿಸಿದರು. ಕಪ್ಪು ಕಾಯಿಗಳೊಂದಿಗೆ ಆಡಿದ ಕಾರ್ಲ್ಸನ್ 47 ನಡೆಗಳ ಆಟದಲ್ಲಿ ಗೆಲುವು ಸಾಧಿಸಿದ್ದರು. ಆರಂಭದಲ್ಲಿ ಹಿನ್ನಡೆ ಕಂಡಿದ್ದರೂ 27ನೇ ನಡೆಯ ಬಳಿಕ ಕೆಲ ಅದ್ಭುತ ಹೆಜ್ಜೆಗಳನ್ನು ಇಡುವ ಮೂಲಕ ತಮ್ಮ ಸ್ಥಿತಿಯನ್ನು ಉತ್ತಮ ಪಡಿಸಿಕೊಂಡಿದ್ದರು ಪ್ರಜ್ಞಾನಂದ. ಹೀಗಾಗಿ ಇಬ್ಬರು ಕುಡ ತೀವ್ರ ಜಿದ್ದಾಜಿದ್ದಿನ ಸೆಣೆಸಾಟ ನಡೆಸಿದರು. ಆದರೆ ಅಂತಿಮ ನಂತರ ಕಾರ್ಲ್ಸನ್ ಕೈ ಮೇಲಾಗುತ್ತಾ ಸಾಗಿತ್ತು. ಹೀಗಾಗಿ ಪ್ರಜ್ಞಾನಂದ ಚಾಂಪಿಯನ್ ಕನಸು ನನಸಾಗಬೇಕಿದ್ದರೆ ಎರಡನೇ ರ್ಯಾಪಿಡ್‌ನಲ್ಲಿ ವಿಶ್ವದ ನಂಬರ್ ೧ ಆಟಗಾರನ ವಿರುದ್ಧ ಗೆಲುವು ಅನಿವಾರ್ಯವಾಗಿತ್ತು.
ಪ್ರಜ್ಞಾನಂದ ಕನಸು ಭಗ್ನ
ಇನ್ನು ಎರಡನೇ ರ್ಯಾಪಿಡ್‌ನಲ್ಲಿ ಮೊದಲ 10 ನಡೆಗಳಲ್ಲಿಯೇ ನಾರ್ವೆಯ ದಿಗ್ಗಜ ಆಟಗಾರ ಪ್ರಜ್ಞಾನಂದ ವಿರುದ್ಧ ಅದ್ಭುತ ಮೇಲುಗೈ ಸಾಧಿಸಿದ್ದರು. ಮೊದಲ ರ್ಯಾಪಿಡ್‌ನ ಗೆಲುವು ಹಾಗೂ ಎರಡನೇ ರ್ಯಾಪಿಡ್‌ನಲ್ಲಿನ ಆರಂಭಿಕ ಮುನ್ನಡೆಯಿಂದಾಗಿ ನಂತರ ಕಾರ್ಲ್ಸನ್ ಅವರನ್ನು ಹಿಡಿದಿರುವುದು ಪ್ರಜ್ಞಾನಂದಾಗೆ ಸಾಧ್ಯವಾಗಲಿಲ್ಲ. ಹೀಗಾಗಿ ನಂತರ ಪ್ರಜ್ಞಾನಂದಾಗೆ ಹೆಚ್ಚಿನ ಅವಕಾಶಗಳು ಕೂಡ ದೊರೆಯಲಿಲ್ಲ.
ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಮತ್ತು ವಿಶ್ವದ ನಂಬರ್ 1 ಮ್ಯಾಗ್ನಸ್ ವಿರುದ್ಧದ FIDE ವಿಶ್ವಕಪ್‌ನ ಫೈನಲ್‌ನ ಮೊದಲ ಎರಡು ಪಂದ್ಯಗಳು ಡ್ರಾದಲ್ಲಿ ಅಂತ್ಯವಾಗಿದ್ದವು. ಹೀಗಾಗಿ ಇಬ್ಬರು ಆಟಗಾರರು ಕೂಡ ತಮ್ಮ ಅದೃಷ್ಟವನ್ನು ಟೈಬ್ರೇಕರ್‌ನಲ್ಲಿ ಇಂದು ನಿರ್ಧರಿಸಬೇಕಾಗಿತ್ತು. ಕ್ಷಿಕರ್ ಟೈಮ್ ಕಂಟ್ರೋಲ್ ಮಾದರಿಯಲ್ಲಿ ನಡೆದ ಈ ಟೈ ಬ್ರೇಕರ್‌ನ ಮೊದಲ ಪಂದ್ಯವನ್ನು ಕಾರ್ಲ್ಸನ್ ಗೆದ್ದು 1-0 ಮುನ್ನಡೆ ಸಾಧಿಸಿದ್ದರು.
ಕಳೆದ ಮಂಗಳವಾರ ಫೈನಲ್‌ನ ಮೊದಲ ಗೇಮ್ ನಡೆದಿತ್ತು. ಈ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಈ ಪಂದ್ಯದ ಆರಂಭದಲ್ಲಿ ಪ್ರಜ್ಷಾನಂದ ಮೇಲುಗೈ ಸಾಧಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಅಉಭವಿ ಕಾರ್ಲ್ಸನ್ ಅವರ ಕೆಲ ನಡೆಗಳು ಪ್ರಜ್ಞಾನಂದಗೆ ಹಿನ್ನಡೆಯುಂಟು ಮಾಡಿತ್ತು. ಅಂತಿಮವಾಗಿ 35 ನಡೆಗಳ ಬಳಿಕ ಡ್ರಾ ಕಂಡಿತ್ತು.
ನಂತರ ಬುಧವಾರ ಎರಡನೇ ಗೇಮ್ಸ್‌ನಲ್ಲಿ ಕಾರ್ಲ್ಸೆನ್ ಕಪ್ಪು ಕಾಯಿಗಳೊಂದಿಗೆ ಆಡಿದ್ದರು. ಗೆಲುವಿಗಾಗಿ ಕಾರ್ಲ್ಸನ್ ಸಾಕಷ್ಟು ಕಾದಾಟ ನಡೆಸಿದ ಕಾರಣ ಎರಡೇ ಪಂದ್ಯ ಮೊದಲ ಆಟಕ್ಕಿಂತ ಹೆಚ್ಚು ದೀರ್ಘವಾಗಿತ್ತು. ಗೇಮ್ 2ರಲ್ಲಿ ಪ್ರಜ್ಞಾನಂದ ಬಿಳಿ ಕಾಯಿಗಳೊಂದಿಗೆ ಆಟವಾಡುತ್ತಾ, ಸ್ಪರ್ಧೆಯ ಪ್ರಾರಂಭದಲ್ಲಿ ಮೇಲುಗೈ ಸಾಧಿಸಿದ್ದರೂ ಅದರ ಪ್ರಯೋಜನವನ್ನು ನಂತರ ಪಡೆಯಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ತಾವಾಗಿಯೇ ಸಯದ ಸಂಕಷ್ಟಕ್ಕೆ ಸಿಲುಕಿದ್ದರು. ಈ ಪಂದ್ಯ 30 ನಡೆಗಳ ಬಳಿಕ ಇದು ಕೂಡ ಡ್ರಾಗೊಂಡಿತ್ತು. ಹೀಗಾಗಿ ಟೈ ಬ್ರೇಕರ್ ಆಯೋಜನೆಯಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications