ಚೆಸ್ ವಿಶ್ವಕಪ್: ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ ಭಾರತದ ಆರ್ ಪ್ರಜ್ಞಾನಂದ
ಅಜರ್ಬೈಜಾನ್‌ನಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೆಮಿಫೈನಲ್‌ನಲ್ಲಿ ಪ್ರಜ್ಞಾನಂದ ಗೆಲುವು ಸಾಧಿಸಿರುವ ಪ್ರಜ್ಞಾನಂದ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಕೇವಲ ಎರಡನೇ ಭಾರತೀಯ ಚೆಸ್ ಪಟು ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿಶ್ವನಾಥನ್ ಆನಂದ್ 2000 ಮತ್ತು 2002ನೇ ಇಸವಿಯಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದರು. ಸುದೀರ್ಘ ಎರಡು ದಶಕಗಳ ಬಳಿಕ ಈ ಸಾಧನೆ ಈಗ ಮತ್ತೋರ್ವ ಭಾರತೀಯನಿಂದ ಆಗಿದೆ.
ಭಾನುವಾರ ಸೆಮಿಫೈನಲ್‌ನ ಎರಡು ಗೇಮ್ಸ್‌ಗಳಲ್ಲಿಯೂ ಪ್ರಜ್ಞಾನಂದ ಡ್ರಾ ಸಾಧಿಸಿದ್ದರು. ಹೀಗಾಗಿ ಸೋಮವಾರ ನಡೆದ ಟೈ ಬ್ರೇಕರ್‌ನಲ್ಲಿ ಫಲಿತಾಂಶ ಪಡೆದುಕೊಳ್ಳಲಾಗಿದೆ. ಟೈಬ್ರೇಕರ್‌ನಲ್ಲಿ 2ನೇ ಶ್ರೇಯಾಂಕಿ ಚೆಸ್ ಪಟು ಫ್ಯಾಬಿಯಾನೋ ಕರುವಾನ ಭಾರೀ ಪೈಪೋಟಿ ನೀಡಿದ್ದರು. ಆದರೆ ಕೆಲವೊಂದು ಪ್ರಮುಖ ನಡೆಗಳಲ್ಲಿ ಭಾರತೀಯ ಆಟಗಾರ ಮೇಲುಗೈ ಸಾಧಿಸಿದ್ದರು. ಹೀಗಾಗಿ ಇಲ್ಲಿಯೂ ಡ್ರಾನತ್ತ ಮುನ್ನಡೆಸುವಲ್ಲಿ ಭಾರತೀಯ ಆಟಗಾರ ಯಶಸ್ವಿಯಾಗಿದ್ದರು.

ಎರಡನೇ ಟೈ ಬ್ರೇಕರ್‌ನಲ್ಲಿಯೂ ಪ್ರಜ್ಞಾನಂದ ಫ್ರಾಬಿಯಾನೋ ಗೆಲುವಿಗೆ ಅಡ್ಡಿಯಾದರು. ಇಲ್ಲಿಯೂ ಪಂದ್ಯ 10+10 ಟೈ ಬ್ರೇಕರ್‌ನತ್ತ ಮುನ್ನಡೆದಿತ್ತು. ಬಳಿಕ ರ್ಯಾಪಿಡ್ ಟೈಬ್ರೇಕರ್‌ನಲ್ಲಿ ಪ್ರಜ್ಞಾನಂದ ಫ್ಯಾಬಿಯಾನೋ ವಿರುದ್ಧ ಮೇಲುಗೈ ಸಾಧಿಸಿದರು. ಇಲ್ಲಿ ಗೆಲುವು ಸಾಧಿಸುವಲ್ಲಿ ಭಾರತೀಯ ಯಶಸ್ವಿಯಾಗಿದ್ದರು. ಅಂತಿಮವಾಗಿ ಪ್ರಜ್ಞಾನಂದ 3.5-2.5 ಅಂತರದಿಂದ ಫ್ಯಾಬಿಯಾನೋ ಕರುವಾನ ಅವರನ್ನು ಸೋಲಿಸಿ ಐತಿಹಾಸಿಕ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಇನ್ನು ಫೈನಲ್‌ನಲ್ಲಿ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದಗೆ ಎದುರಾಳಿಯಾಗಿರುವವರು ವಿಶ್ವದ ನಂಬರ್ 1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್ಸನ್. ಈ ಪಂದ್ಯದಲ್ಲಿ ಪ್ರಜ್ಞಾನಂದ ಅವರ ಪ್ರದರ್ಶನದ ಮೇಲೇ ಕೋಟ್ಯಂತರ ಭಾರತೀಯರ ನಿರೀಕ್ಷೆಯಿದೆ.
ಈ ಸಾಧನೆಯೊಂದಿಗೆ 18ರ ಹರೆಯದ ಪ್ರಜ್ಞಾನಂದ ಭಾರತ ಹೆಮ್ಮೆ ಪಡುವಂತಾ ಸಾಧನೆ ಮಾಡಿದ್ದಾರೆ. ಐದು ಬಾರಿಯ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ಈ ಸಾಧನೆ ಮಾಡಿದ ಖೇವಲ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ ತಮಿಳುನಾಡು ಮೂಲದ ಆರ್ ಪ್ರಜ್ಞಾನಂದ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications