Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋಪಾ ಅಮೆರಿಕ:ಅತಿಥೇಯ ಚಿಲಿ ಚಾಂಪಿಯನ್

ಸಾಂಟಿಗುವಾ, ಜುಲೈ 5: ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಕೋಪಾ ಅಮೆರಿಕಾ ಪ್ರಶಸ್ತಿಯನ್ನು ಗಳಿಸುವ ಮೂಲಕ ಅತಿಥೇಯ ಚಿಲಿ ತನ್ನ ಫುಟ್ಬಾಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.

ಎಸ್ಟಾಡಿಯೋ ನ್ಯಾಷನಲ್ ಮೈದಾನದಲ್ಲಿ ಸುಮಾರು 46 ಸಾವಿರ ಅಭಿಮಾನಿಗಳ ಮುಂದೆ ನಡೆದ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಚಿಲಿ, ಆರ್ಜೆಂಟೀನಾ ತಂಡವನ್ನು ಪೆನಾಲ್ಟೀಸ್ ನಲ್ಲಿ 4-1 ಅಂತರದಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

Chile won Copa America after beating Argentina

ಭಾರತೀಯ ಕಾಲಮಾನ ಶನಿವಾರ (ಜು 4)ಮಧ್ಯರಾತ್ರಿ ಒಂದು ಗಂಟೆಗೆ ಆರಂಭವಾದ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಸಮಯದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಯಿತು.

Extra ಟೈಂನಲ್ಲಿ ಚಿಲಿ ತಂಡ ಆರ್ಜೆಂಟೀನಾ ತಂಡವನ್ನು ಪೆನಾಲ್ಟಿ ಮೂಲಕ ಸೋಲಿಸಿ ಚೊಚ್ಚಲ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಚಿಲಿ ತಂಡದ ವೀಡಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದಕ್ಕೆ ಮೊದಲು ಕಾನ್ಸ್ ಪಿಕಾನ್ ನಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪೆರು ತಂಡ ಉರುಗ್ವೆ ತಂಡವನ್ನು 2-0 ಅಂತರದಿಂದ ಸೋಲಿಸಿ ಕಂಚಿನ ಪದಕ ಪಡೆಯಿತು.

ಹನ್ನೆರಡು ರಾಷ್ಟ್ರಗಳು ಭಾಗವಹಿಸಿದ್ದ ಈ ಟೂರ್ನಿ ಜೂನ್ ಹನ್ನೊಂದಕ್ಕೆ ಆರಂಭವಾಗಿತ್ತು.

ಟೂರ್ನಿಯಲ್ಲಿ ಭಾಗವಹಿಸಿದ್ದ ತಂಡಗಳು :ಆರ್ಜೆಂಟೀನಾ, ಕೊಲಂಬಿಯಾ, ಪರಗ್ವೆ, ಬೊಲಿವಿಯಾ, ಈಕ್ವೆಡಾರ್, ಪೆರು, ಬ್ರೆಜಿಲ್, ಜಮೈಕಾ, ಉರುಗ್ವೆ, ಚಿಲಿ, ಮೆಕ್ಸಿಕೋ ಮತ್ತು ವೆನಿಜುವಾಲ.(ಫೋಟೋ: ದಿ ಗಾರ್ಡಿಯನ್)

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+