Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಛಲಬಿಡದ ಗಟ್ಟಿಗಿತ್ತಿ ಚಿತ್ರದುರ್ಗ ಎಕ್ಸ್‌ಪ್ರೆಸ್ ಪ್ರಕೃತಿ ಬಿ. ರಾವ್: ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಮಿಂಚು

ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಅಂತರ-ರಾಜ್ಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಚಿತ್ರದುರ್ಗದ ಪ್ರಕೃತಿ ಬಿ. ರಾವ್ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಇವರು ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಅಥ್ಲೆಟಿಕ್ಸ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಹೊಸ ಭರವಸೆಯ ಬೆಳಕು ಮೂಡಿಸಿರುವ ಇವರ ಕಥೆ ಕೇವಲ ಪದಕ ಗೆದ್ದಿದ್ದಲ್ಲ, ಸವಾಲುಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ.

24 ವರ್ಷದ ಓಟಗಾರ್ತಿ ಪ್ರಕೃತಿ ಬಿ. ರಾವ್ ಜೂನ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಮಹಿಳೆಯರ 100 ಮೀಟರ್ ಓಟದ ಫೈನಲ್‌ ರೇಸ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದ ಉನ್ನತಿ ಅಯ್ಯಪ್ಪ, ದಾನೇಶ್ವರಿ, ಅವರನ್ನು ಹಿಂದಿಕ್ಕಿ 11.65 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಪಡೆದರು. ಈ ಮೂಲಕ ತನ್ನಲ್ಲಿರುವ ಸಾಮರ್ಥ್ಯವನ್ನು ಬಹಿರಂಗ ಪಡಿಸಿದರು.

Chitradurga Sprinter Prakruthi B Rao

ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಂತರ-ರಾಜ್ಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಕೃತಿ ತಮ್ಮ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. 200 ಮೀಟರ್ ಓಟವನ್ನು ಕೇವಲ 23.58 ಸೆಕೆಂಡುಗಳಲ್ಲಿ ಕ್ರಮಿಸಿ ಕಂಚಿನ ಪದಕ ಗೆದ್ದಿದ್ದಲ್ಲದೆ, ಮುಂಬರುವ ಏಷ್ಯನ್ ಗೇಮ್ಸ್‌ನ ಅರ್ಹತಾ ಮಾನದಂಡವನ್ನು (23.70 ಸೆಕೆಂಡ್) ಯಶಸ್ವಿಯಾಗಿ ದಾಟಿದ್ದಾರೆ.

ಇಷ್ಟೇ ಅಲ್ಲದೆ ಪ್ರಕೃತಿ ರಾವ್ 4x100 ಮೀಟರ್ ರಿಲೇಯಲ್ಲಿ ತಂಡದಲ್ಲೂ ಸ್ಥಾನ ಪಡೆದಿದ್ದರು. ಇವರ ಜೊತೆಗೆ ಉನ್ನತಿ ಅಯ್ಯಪ್ಪ, ದಾನೇಶ್ವರಿ ಮತ್ತು ವಿ. ಸುಧೀಕ್ಷಾ ಇದ್ದರು. ಈ ಓಟಗಾರ್ತಿಯರು ನಿಗದಿತ ದೂರವನ್ನು 44.75 ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದು ಏಷ್ಯನ್ ಗೇಮ್ಸ್ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

'ನಾನು ಗೆಲ್ಲುತ್ತೇನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ'

ಚಿತ್ರದುರ್ಗ ಮೂಲದ ಪ್ರಕೃತಿ ಅವರ ಕ್ರೀಡಾ ಪಯಣ ಸುಲಭದ್ದಲ್ಲ. ಸೂಕ್ತ ಆರ್ಥಿಕ ಬೆಂಬಲ ಇಲ್ಲದಿದ್ದರೂ ಛಲಬಿಡದೆ ಇವರು, ಚೆನ್ನೈನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಾನು ಗೆಲ್ಲುತ್ತೇನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ನನ್ನ ಕಠಿಣ ಪರಿಶ್ರಮ ಮತ್ತು ತರಬೇತಿಯ ಮೇಲೆ ನನಗೆ ನಂಬಿಕೆಯೇ ನನ್ನನ್ನು ಈ ಹಂತಕ್ಕೆ ತಂದಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ (ಎಎಫ್‌ಐ) ಏಷ್ಯನ್ ಗೇಮ್ಸ್‌ಗೆ ದೇಶದ ಅಂತಿಮ ತಂಡವನ್ನು ಪ್ರಕಟಿಸಬೇಕಾಗಿದ್ದು, ಪ್ರಕೃತಿ ಬಿ. ರಾವ್ ಅವರ ಸದ್ಯದ ಫಾರ್ಮ್ ನೋಡಿದರೆ ಅವರು ದೇಶವನ್ನು ಪ್ರತಿನಿಧಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.'ಚಿತ್ರದುರ್ಗದ ಎಕ್ಸ್‌ಪ್ರೆಸ್' ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ಮಟ್ಟದಲ್ಲೂ ಮಿಂಚಲಿ ಎಂಬುದೇ ಕನ್ನಡಿಗರ ಆಶಯ.

Story first published: Monday, June 29, 2026, 21:16 [IST]
Other articles published on Jun 29, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+