ಚಕರ್ಸ್ಸ್ ಗಳಿಗೆ ಹರ್ಭಜನ್ ಸಿಂಗ್ ರೋಲ್ ಮಾಡೆಲ್!
ಮುಂಬೈ, ಅ. 15 : ಚೆಂಡು ಎಸೆಯುವವರಿಗೆ (ಚಕರ್ಸ್ಸ್ ಗಳಿಗೆ) ಹರ್ಭಜನ್ ಸಿಂಗ್ ರೋಲ್ ಮಾಡೆಲ್ ಎಂದು ಕರೆದ ಆಸ್ಟ್ರೇಲಿಯಾದ ಅಂಪೈರ್ ಡೆರೇಲ್ ಹೇರ್ ಹೇಳಿಕೆಗೆ ಆಫ್ ಸ್ಪಿನರ್ ಕಿಡಿ ಕಾರಿದ್ದಾರೆ.
ಡೆರೇಲ್ ಹೇರ್ ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಹರ್‌ಭಜನ್ ಸಿಂಗ್, ಮುತ್ತಯ್ಯ ಮುರಳೀಧರನ್ ಮತ್ತು ಸಕ್ಲೇನ್ ಮುಸ್ತಾಕ್ ಚೆಂಡು ಎಸೆಯುವವರಿಗೆ ರೋಲ್ ಮಾಡೆಲ್‌ಗಳು ಎಂದು ಹೇಳಿದ್ದರು.[ದ್ರಾವಿಡ್ ರನ್ನು ಹೊಗಳಿದ್ದೇಕೆ?]

ಈ ಹೇಳಿಕೆಗೆ ತೀವ್ರ ಕೆಂಡ ಕಾರಿರುವ ಭಾರತದ ಆಫ್ ಸ್ಪಿನ್ನರ್, ಅವರ ತಲೆ ಕೆಟ್ಟಂತೆ ಕಾಣುತ್ತಿದೆ, ಇಂಥ ಹೇಳಿಕೆ ನೀಡುವ ಬದಲು ಬಾಯಿ ಮುಚ್ಚಿಕೊಂಡಿರುವುದು ಒಳಿತು ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಅಳತೆ ಮೀರಿ ಮಾತನಾಡುವಂತಿಲ್ಲ. ಆದರೆ ಹೇರ್ ಅಂಥ ಕೆಲಸ ಮಾಡಿದ್ದಾರೆ. 'ಉನ್ಕಾ ಧಿಮಾಖ್ ಠೀಕ್ ನಹೀ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.[ಎರಡು ರನ್ ಗಳಿಸಲು ಒದ್ದಾಡಿದ ಪಾಕಿಸ್ತಾನ]
ನಾನು ಮತ್ತು ಮುರಳೀಧರನ್ ಅನೇಕ ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದೇವೆ. ಆಗ ಒಮ್ಮೆಯೂ ನಮ್ಮ ಬೌಲಿಂಗ್ ಶೈಲಿ ಬಗ್ಗೆ ಚಕಾರವೆತ್ತದ ಹೇರ್ ಈಗ ಹೀಗೇಕೆ ಮಾತನಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ತಾವು ಐಸಿಸಿ ಅಂಪೈರ್ ಸ್ಥಾನ ಕಳೆದುಕೊಳ್ಳಬಹುದೆಂಬ ಭಯ ಅವರನ್ನು ಆಗ ಕಾಡುತ್ತಿತ್ತೆ? ಎಂದು ಪ್ರಶ್ನಿಸಿದ್ದಾರೆ.
ಇವತ್ತಿನ ಪ್ರತಿಯೊಬ್ಬ ಬೌಲರ್ ಸಹ ದೂಸ್ರಾ ಎಸೆಯಲು ಪ್ರಯತ್ನಿಸುತ್ತಿದ್ದಾನೆ. ಇದನ್ನು ಬಳಕೆಗೆ ತಂದವರು ನಾವೇ ಎಂಬುದನ್ನು ಮರೆಯುವಂತಿಲ್ಲ. ಇಲ್ಲಿ ಕೂಡಾ ಹೇರ್ ಮೂಗು ತೂರಿಸಿದ್ದಾರೆ. ನಿರ್ದಿಷ್ಟ ಮಟ್ಟದಲ್ಲಿ ಕೈ ಬಗ್ಗಿಸಿ ಚೆಂಡು ಎಸೆಯಬಹುದು. ಆದರೆ ತಂತ್ರಜ್ಞಾನವೇ ಸರಿಯಿಲ್ಲ ಎಂದು ಹೇರ್ ಕ್ಯಾತೆ ತೆಗೆದಿದ್ದಾರೆ. ಇಂಥ ಅರ್ಥವಿಲ್ಲದ ಮಾತುಗಳನ್ನಾಡುವುದು ಬಿಟ್ಟು ಬಾಯಿ ಮುಚ್ಚಿಕೊಂಡಿರುವುದು ಒಳಿತು ಎಂದು ಟೆಸ್ಟ್ ಕ್ರಿಕೆಟ್ ನಲ್ಲಿ 413 ವಿಕೆಟ್ ಕಿತ್ತಿರುವ ಸ್ಪಿನ್ನರ್ ಹೇಳಿದ್ದಾರೆ.
ಪಾಕಿಸ್ತಾನದ ಸಯೀದ್ ಅಜ್ಮಲ್ ಗೆ ಅನುಮಾನಾಸ್ಪದ ಬೌಲಿಂಗ್ ಎಂದು ಐಸಿಸಿ ನಿಷೇಧ ಹೇರಿರುವ ಕೆಲ ದಿನಗಳಲ್ಲೇ ಇಂಥ ವಿವಾದ ಭುಗಿಲೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications